ಲಸಿಕೆ ಸಮಾಚಾರ
Team Udayavani, Jan 17, 2021, 1:58 AM IST
ನಮಗೆ ಕೊವ್ಯಾಕ್ಸಿನ್ ಬೇಡ: ವೈದ್ಯರ ಅಪಸ್ವರ :
ಲಸಿಕೆ ಆರಂಭದ ದಿನವೇ ಅಪಸ್ವರವೂ ಕೇಳಿಬಂತು. ದಿಲ್ಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ವೈದ್ಯರು “ನಮಗೆ ಕೊವ್ಯಾಕ್ಸಿನ್ ಬೇಡ. ಕೊವಿಶೀಲ್ಡ್ ಕೊಡಿ’ ಎಂಬ ಬೇಡಿಕೆಯ ಪತ್ರವನ್ನು ಮೇಲಧಿಕಾರಿಗಳಿಗೆ ರವಾನಿಸಿದ್ದಾರೆ. “ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಇನ್ನೂ ಪ್ರಯೋಗ ಹಂತದಲ್ಲಿದೆ. ಟ್ರಯಲ್ ವೇಳೆ ಇದನ್ನು ಸಾಕಷ್ಟು ಸಂಖ್ಯೆಯ ಪ್ರತಿನಿಧಿಗಳಿಗೆ ನೀಡಿಲ್ಲ. ಹೀಗಾಗಿ ಕೊವಿಶೀಲ್ಡನ್ನೇ ನಮಗೆ ನೀಡಿ’ ಎಂದು ಮನವಿ ಮಾಡಿದ್ದಾರೆ.
ನಾರ್ವೆಯಲ್ಲಿ ಫೈಜರ್ ಎಡವಟ್ಟು: 23 ಸಾವು! :
ನಾರ್ವೆಯಲ್ಲಿ ಫೈಜರ್ ಲಸಿಕೆ ಭಾರೀ ಎಡವಟ್ಟು ಸೃಷ್ಟಿಸುತ್ತಿದೆ. “ಫೈಜರ್‌ನ ಅಡ್ಡಪರಿಣಾಮದಿಂದಾಗಿ ರಾಷ್ಟ್ರದಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ’ ಎಂದು ಸರಕಾರ ಘೋಷಿಸಿದೆ. ಮೊದಲ ಡೋಸ್ ಪಡೆದಿದ್ದ ಇವರಲ್ಲಿ ಬಹುತೇಕರು ವಯಸ್ಸಾದವರು ಮತ್ತು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದವರೇ ಇದ್ದರು. ಮರಣೋತ್ತರ ಪರೀಕ್ಷೆ ಬಳಿಕ ಇವರಲ್ಲಿ 13 ಮಂದಿಗೆ ಒಂದೇ ರೀತಿಯ ಅಡ್ಡಪರಿಣಾಮಗಳು ದೃಢಪಟ್ಟಿವೆ. ಇನ್ನೊಂದೆಡೆ ನಾರ್ವೆಯಲ್ಲಿ ಫೈಜರ್ ಪಡೆದಿದ್ದ 21 ಮಹಿಳೆ ಮತ್ತು 8 ಪುರುಷರಿಗೆ ಶುಕ್ರವಾರ ಗಂಭೀರ ಅಡ್ಡಪರಿಣಾಮಗಳು ಶುರುವಾಗಿವೆ. ಇಷ್ಟಿದ್ದರೂ ಫೈಜರ್ ಸಂಸ್ಥೆ ಮಾತ್ರ, “ಇದುವರೆಗಿನ ಘಟನೆಗಳ ಸಂಖ್ಯೆ ಅಷ್ಟೇನೂ ಆತಂಕಕಾರಿಯಾಗಿಲ್ಲ. ತಲೆಕೆಡಿಸಿಕೊಳ್ಳಬೇಡಿ’ ಅಂತಲೇ ರಾಗ ಎಳೆದಿದೆ. ಡಿಸೆಂಬರ್‌ನಿಂದ ಇದುವರೆಗೆ 30 ಸಾವಿರಕ್ಕಿಂತ ಅಧಿಕ ಮಂದಿಗೆ ಫೈಜರ್ ನೀಡಲಾಗಿದೆ.
ಅಡ್ಡಪರಿಣಾಮ ಬೀರಿದರೆ ಪರಿಹಾರ :
ಕೊವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಗಂಭೀರ ಅಡ್ಡಪರಿಣಾಮವೇನಾದರೂ ಉಂಟಾದರೆ, ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭಾರತ್ ಬಯೋಟೆಕ್ ಶನಿವಾರ ಘೋಷಿಸಿದೆ. ಪ್ರತಿಕೂಲ ಪರಿಣಾಮ ಕುರಿತು 7 ದಿನಗಳ ಒಳಗಾಗಿ ಮಾಹಿತಿ ನೀಡಲೆಂದು ಅರ್ಜಿಯೊಂದನ್ನೂ ನೀಡಿರುತ್ತೇವೆ ಎಂದು ಸಂಸ್ಥೆ ತಿಳಿಸಿದೆ.
ಪ್ರತಿಯೊಬ್ಬ ಭಾರತೀಯನಿಗೂ ಇದೊಂದು ಹೆಮ್ಮೆಯ ಕ್ಷಣ. ದಾಖಲೆ ಅವಧಿಯಲ್ಲಿ ಕ್ಷಿಪ್ರ ವೇಗದಲ್ಲಿ ಲಸಿಕೆ ಅಭಿವೃದ್ಧಿಪಡಿಸಿದ ಎಲ್ಲ ವಿಜ್ಞಾನಿಗಳನ್ನೂ ಅಭಿನಂದಿಸುತ್ತೇನೆ.-ಎಂ.ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
ಈ ಲಸಿಕೆ ಅಭಿಯಾನವು ಸ್ವಾವಲಂಬಿ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಇದೊಂದು ಐತಿಹಾಸಿಕ ಮೈಲುಗಲ್ಲು. –ಅಮಿತ್ ಶಾ, ಕೇಂದ್ರ ಗೃಹ ಸಚಿವ
ಮುಂದಿನ 100 ದಿನಗಳೊಳಗಾಗಿ ಎಲ್ಲ ದೇಶಗಳಲ್ಲೂ ಲಸಿಕೆ ಹಂಚಿಕೆ ಆರಂಭವಾಗಲಿ ಎಂದು ಆಶಿಸುತ್ತೇನೆ. ಆರೋಗ್ಯ ಕಾರ್ಯಕರ್ತರು ಮತ್ತು ಅಧಿಕ ರಿಸ್ಕ್ ಹೊಂದಿರುವವರನ್ನು ಮೊದಲಿಗೆ ರಕ್ಷಿಸಬೇಕಿದೆ.-ಟೆಡ್ರೋಸ್ ಘೆಬ್ರೆಯೇಸಸ್, ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ
Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.