ಸೀರಂನಿಂದ ಲಂಡನ್ನಲ್ಲಿ ಲಸಿಕೆ ಉತ್ಪಾದನ ಘಟಕ
Team Udayavani, May 5, 2021, 6:32 AM IST
ಲಂಡನ್: ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಯು.ಕೆ.ಯಲ್ಲಿ 2,400 ಕೋಟಿ ರೂ. ವೆಚ್ಚದಲ್ಲಿ ಲಸಿಕೆ ಉತ್ಪಾದನ ಘಟಕ ಸ್ಥಾಪಿಸಲಿದೆ. ಈ ಬಗ್ಗೆ ಯು.ಕೆ. ಸರಕಾರದಿಂದಲೇ ಘೋಷಣೆ ಮಾಡಲಾಗಿದೆ.
ಭಾರತ ಮತ್ತು ಯು.ಕೆ. ಸಹಭಾಗಿತ್ವದಲ್ಲಿ ಅದನ್ನು ಸ್ಥಾಪಿಸಲಾಗುತ್ತಿದೆ. ಇದರಿಂದಾಗಿ 6,500 ಉದ್ಯೋಗ ಸೃಷ್ಟಿಯಾಗಲಿದೆ. ಪ್ರಧಾನಿ ಮೋದಿ ಮತ್ತು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಜತೆಗೆ ನಡೆದ ವರ್ಚುವಲ್ ಸಭೆ ಯಲ್ಲಿ ಈ ವಿಷಯ ಪ್ರಕಟಿಸಲಾಗಿದೆ. ಲಸಿಕೆ ಬಗ್ಗೆ ಸಂಶೋಧನೆ ಮತ್ತು ಅಭಿವೃದ್ಧಿ ಚಟು ವಟಿಕೆಗಳು ಈ ಕೇಂದ್ರದಲ್ಲಿ ನಡೆಯಲಿವೆ. ಎಸ್ಐಐನಿಂದ ಮೂಗಿನ ಮೂಲಕ ನೀಡುವ ಲಸಿಕೆ ಬಗ್ಗೆ ಈಗಾಗಲೇ ಪ್ರಯೋಗವನ್ನು ಅಮೆರಿಕದ ಬಯೋಟೆಕ್ ಸಂಸ್ಥೆ ಕೊಡಾಜೆನಿಕ್ಸ್ ಇಂಕ್ ಜತೆಗೆ ನಡೆಸಲಾಗುತ್ತಿದೆ.
ಇತ್ತೀಚೆಗಷ್ಟೇ ಅದಾರ್ ಪೂನಾವಾಲಾ ಭಾರತದಿಂದ ಹೊರಗೆ ಲಸಿಕೆ ಉತ್ಪಾದನೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದರು.
ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಸೀರಂ ಇನ್ಸ್ಟಿಟ್ಯೂಟ್ ಹೊಸತಾಗಿ ಸಂಶೋ ಧನೆ ನಡೆಸುತ್ತಿರುವ ಕೊವಾಕ್ಸ್ ಎಂಬ ಮತ್ತೂಂದು ಲಸಿಕೆಯ ಪ್ರಯೋಗ ಹಾಲಿ ತಿಂಗಳಲ್ಲೇ ಶುರುವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.