ಹಿಂದೂ ಪದವನ್ನೇ ಅಸ್ಪೃಶ್ಯ ಎಂಬಂತೆ ಬಿಂಬಿಸಲಾಗುತ್ತಿದೆ
Team Udayavani, Sep 11, 2018, 10:09 AM IST
ಶಿಕಾಗೋ: “”ಕೆಲವರು ಹಿಂದೂ ಪದವನ್ನೇ “ಅಸ್ಪೃಶ್ಯ’ ಮತ್ತು “ಅಸಹನೀಯ’ ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಶಿಕಾಗೋದಲ್ಲಿ ನಡೆದ ವಿಶ್ವ ಹಿಂದೂ ಸಮ್ಮೇಳನದಲ್ಲಿ ಮಾತನಾಡಿರುವ ಅವರು, “”ಸ್ವಾಮಿ ವಿವೇಕಾನಂದರಂಥ ಸಂತರು ಕಲಿಸಿದ ಹಿಂದುತ್ವದ ನೈಜ ಮೌಲ್ಯಗಳನ್ನು ಸಂರಕ್ಷಿಸುವ ಅಗತ್ಯತೆ ತುಂಬಾ ಇದೆ. ವಿವೇಕಾನಂದರದ್ದು ನಿಜವಾದ ಹಿಂದೂ ಪ್ರೇಮ. ಹಿಂದೂ ಧರ್ಮ ಸಂರಕ್ಷಣೆಯಲ್ಲಿ ಅವರದ್ದು ಮೇರು ಕೊಡುಗೆ” ಎಂದು ಗುಣಗಾನ ಮಾಡಿದರು.
1983ರಂದು ಸ್ವಾಮಿ ವಿವೇಕಾನಂದರು ಮಾಡಿದ ಭಾಷಣದ ಬಗ್ಗೆಯೂ ಪ್ರಸ್ತಾವಿಸಿದರು.
ಇದೇ ವೇಳೆ, ಇಲಿನಾಯ್ಸ ಗವರ್ನರ್ ಸೆ.11, 2018 ಅನ್ನು “ಸ್ವಾಮಿ ವಿವೇಕಾನಂದ ದಿನ’ ಎಂದು ಘೋಷಿಸಿದರು. ಮುಂದಿನ ವಿಶ್ವ ಹಿಂದೂ ಸಮ್ಮೇಳನ 2022ರ ನವೆಂಬರ್‌ನಲ್ಲಿ ಬ್ಯಾಂಕಾಕ್‌ನಲ್ಲಿ ನಡೆಯಲಿದೆ.
ಬೆಳೆಯುತ್ತಿದೆ ಆರ್ಥಿಕತೆ
ಸಮ್ಮೇಳನದಲ್ಲಿ ಮಾತನಾಡಿದ ಮಣಿಪಾಲ್ ಗ್ಲೋಬಲ್‌ನ ನಿರ್ದೇಶಕ ಮಂಡಳಿ ಮುಖ್ಯಸ್ಥ ಮೋಹನ್ ದಾಸ್ ಪೈ, ಭಾರತ ಆರ್ಥಿಕ ಪ್ರಗತಿ ಕಾಣುತ್ತಿರುವ ದೇಶವಾಗಿದ್ದು, 2.6 ಲಕ್ಷಕೋಟಿ ಡಾಲರ್‌ನಷ್ಟು ಆರ್ಥಿಕತೆ ಹೊಂದಿದೆ. 2030ರ ವೇಳೆಗೆ ಭಾರತವು 10 ಲಕ್ಷಕೋಟಿ ಡಾಲರ್‌ನ ಆರ್ಥಿಕತೆಯಾಗಿ ಬೆಳೆಯಲಿದೆ. ಎಲ್ಲರಿಗೂ ಆಹಾರ, ವಸತಿ, ವಿದ್ಯುತ್, ನೀರು, ಆರೋಗ್ಯ ಮುಂತಾದ ಮೂಲಸೌಕರ್ಯಗಳು ಸಿಗಬೇಕು. 2030ರ ವೇಳೆಗೆ ಎಲ್ಲ ಸಮಸ್ಯೆಗಳಿಂದಲೂ ದೇಶ ಮುಕ್ತವಾಗಲಿದೆ ಎಂದರು. ಭಾಷಣದ ಆರಂಭದಲ್ಲಿ “ಎಲ್ಲರಿಗೂ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಹೇಳಿದ್ದು ವಿಶೇಷವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಸೂಚನೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.