Live Performance: ವೇದಿಕೆ ಮೇಲೆ ಹಾಡುತ್ತಲೇ ಕುಸಿದು ಬಿದ್ದು ಪ್ರಾಣಬಿಟ್ಟ ಗಾಯಕ…
Team Udayavani, Dec 15, 2023, 11:23 AM IST
ಬ್ರೆಸಿಲಿಯಾ: ಬುಧವಾರ ಬ್ರೆಜಿಲ್‌ನಲ್ಲಿ ನಡೆದ ಘಟನೆಯೊಂದು ಜನರನ್ನು ಬೆಚ್ಚಿ ಬೀಳಿಸುವಂತಿದೆ. ಬ್ರೆಜಿಲಿಯನ್ ಗಾಸ್ಪೆಲ್ ಗಾಯಕ ಪೆಡ್ರೊ ಹೆನ್ರಿಕ್ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಗೀತ ಪ್ರದರ್ಶನ ನೀಡುತ್ತಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
30 ವರ್ಷದ ಪೆಡ್ರೊ ಬುಧವಾರ ಬ್ರೆಜಿಲ್‌ನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡುತ್ತಿದ್ದರು. ಹಾಡುಗಳನ್ನು ಹಾಡುತ್ತಾ ಸಭಿಕರೊಂದಿಗೆ ಸಂವಾದ ನಡೆಸುತ್ತಾ ತಮ್ಮ ಅಭಿನಯವನ್ನು ಆಸ್ವಾದಿಸುತ್ತಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ನೆಲದ ಮೇಲೆ ಬಿದ್ದು ಪ್ರಜ್ಞಾಹೀನರಾಗಿದ್ದಾರೆ. ಈ ಸಂಪೂರ್ಣ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೋತ್ತಿಗಾಗಲೇ ಪೆಡ್ರೊ ಇಹಲೋಕ ತ್ಯಜಿಸಿದ್ದರು ಎಂದು ವೈದ್ಯರು ಹೇಳಿದ್ದಾರೆ.
ಕಾರ್ಯಕ್ರಮದ ಮೊದಲೇ ದಣಿದಿದ್ದ ಗಾಯಕ
ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಬಂದಿದ್ದ ಪೆಡ್ರೊ ಅವರು ಮೊದಲೇ ಧಣಿದಿದ್ದರು ಎಂದು ಆತನ ಗೆಳೆಯನಿಗೆ ಹೇಳಿದ್ದರಂತೆ ಆದರೂ ನೆರೆದಿದ್ದ ಸಭಿಕರಿಗೆ ಬೆಸವಾಗುತ್ತದೆ ಎಂದು ಹೇಳಿ ಕಾರ್ಯಕ್ರಮದಲ್ಲಿ ಹಾಡಲು ಮುಂದಾಗಿದ್ದಾರೆ ಈ ವೇಳೆ ಹಠಾತ್ ಕುಸಿದು ಬಿದ್ದರು ಎಂದು ಸ್ನೇಹಿತ ಹೇಳಿಕೊಂಡಿದ್ದಾರೆ.
ಪತ್ನಿ ಮತ್ತು 2 ತಿಂಗಳ ಮಗಳನ್ನು ಅಗಲಿದ ಗಾಯಕ
30 ವರ್ಷದ ಪೆಡ್ರೊ ಹೆನ್ರಿಕ್ ಅವರು ಪತ್ನಿ ಸುಯಿಲಾನ್ ಬ್ಯಾರೆಟೊ ಮತ್ತು ಅವರ ಮಗಳು ಜೊಯಿ ಅವರನ್ನು ಅಗಲಿದ್ದಾರೆ. ಪೆಡ್ರೊ ಮಗಳಿಗೆ ಕೇವಲ 2 ತಿಂಗಳು. ಪೆಡ್ರೊ ಅವರು ಮೂರು ವರ್ಷ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. ಕ್ರಮೇಣ ಹಾಡುತ್ತಾ ಹಾಡುತ್ತಾ ಜನಪ್ರಿಯಗೊಳ್ಳಲಾರಂಭಿಸಿದರು ಇದಾದ ಬಳಿಕ ಕಾರ್ಯಕ್ರಮಗಳನ್ನು ನೀಡಲು ಆರಂಭಿಸಿದರು ಇವರ ಹಲವಾರು ವಿಡಿಯೋಗಳು ಯೂಟ್ಯೂಬ್‌ನಲ್ಲಿ ಸಿಗುತ್ತವೆ.
30-year-old singer Pedro Henrique just collapsed and died on stage.
The new normal is not normal.
— End Wokeness (@EndWokeness) December 14, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.