ಬಹುಕೋಟಿ ಸಾಲ; ಬಂಧನಕ್ಕೊಳಗಾದ 3 ತಾಸಿನಲ್ಲೇ ವಿಜಯ್ ಮಲ್ಯಗೆ ಬೇಲ್
Team Udayavani, Apr 18, 2017, 3:30 PM IST
ಲಂಡನ್: ಬಹುಕೋಟಿ ಬ್ಯಾಂಕ್ ಸಾಲ ಸುಸ್ತಿಗಾರನಾಗಿ ವಿದೇಶಕ್ಕೆ ಪಲಾಯನ ಮಾಡಿರುವ ಮದ್ಯ ದೊರೆ ವಿಜಯ್ ಮಲ್ಯ ಮಂಗಳವಾರ ಲಂಡನ್ ನಲ್ಲಿ ಬಂಧಿಸಲ್ಪಟ್ಟ 3 ತಾಸಿನೊಳಗೆ ವೆಸ್ಟ್ ಮಿನಿಸ್ಟರ್ ನ್ಯಾಯಾಲಯ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ವಿವಿಧ ಬ್ಯಾಂಕ್ ಗಳಲ್ಲಿ ಸುಮಾರು 9000 ಸಾವಿರ ಕೋಟಿ ರೂಪಾಯಿ ಸಾಲದ ಸುಸ್ತಿಗಾರನಾಗಿ ಭಾರತದಿಂದ ವಿದೇಶಕ್ಕೆ ಪಲಾಯನ ಮಾಡಿದ್ದ ಉದ್ಯಮಿ ವಿಜಯ್ ಮಲ್ಯ ಕೊನೆಗೂ ಭಾರತಕ್ಕೆ ಗಡಿಪಾರು ಮಾಡಬೇಕೆಂಬ ಮನವಿಯ ಬಳಿಕ ಲಂಡನ್ ನಲ್ಲಿ ಸ್ಕಾಟ್ ಲ್ಯಾಂಡ್ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿತ್ತು.
ಕಳೆದ 2 ವರ್ಷಗಳಿಂದ ತಲೆಮರೆಸಿಕೊಂಡು ಬಂಧನಕ್ಕೀಡಾಗಿರುವ ಮಲ್ಯ ಅವರನ್ನು ವೆಸ್ಟ್ ಮಿನಿಸ್ಟರ್ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ವೆಸ್ಟಮಿನಿಸ್ಟರ್ ಕೋರ್ಟ್ ಮಲ್ಯಗೆ ಷರತ್ತುಬದ್ಧ ಜಾಮೀನು ನೀಡುವ ಮೂಲಕ ಬಿಡುಗಡೆ ಮಾಡಿರುವುದಾಗಿ ವರದಿ ವಿವರಿಸಿದೆ.
ಬ್ಯಾಂಕುಗಳಿಗೆ ಸಾಲ ಮರುಪಾವತಿಸದ ಹಾಗೂ ನ್ಯಾಯಾಲಯಕ್ಕೆ ನೀಡಿದ್ದ ವಾಗ್ಧಾನ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಭಾರತ ಬಿಟ್ಟುಹೋಗಿ ಲಂಡನ್‌ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯಗೆ ಸುಪ್ರೀಂಕೋರ್ಟ್, ಹೈಕೋರ್ಟ್ ಕೂಡಾ ಜಾಮೀನು ಸಹಿತ ವಾರೆಂಟ್ ಜಾರಿಗೊಳಿಸಿತ್ತು.
ಮಲ್ಯ ಟ್ವೀಟ್: ಭಾರತದ ಮಾಧ್ಯಮದ ವಿರುದ್ಧ ಗರಂ
ಭಾರತಕ್ಕೆ ಹಸ್ತಾಂತರ ಮಾಡುವ ಕುರಿತ ನಿರೀಕ್ಷೆಯಂತೆಯೇ ವಿಚಾರಣೆ ಇಂದಿನಿಂದ ಆರಂಭವಾಗಿದೆ. ಆದರೆ ಭಾರತದ ಮಾಧ್ಯಮಗಳು ಹೆಚ್ಚಿನ ಒತ್ತು ನೀಡಿ ಸುದ್ದಿ ಹಂಗಾಮ ಸೃಷ್ಟಿಸಿವೆ ಎಂದು ಬಂಧನಕ್ಕೊಳಗಾಗಿ 3 ತಾಸಿನಲ್ಲೇ ಬೇಲ್ ಸಿಕ್ಕ ಬಳಿಕ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ.
ಮಲ್ಯ ಸಾಲದ ವಿವರ:
ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 450 ಕೋಟಿ ಸಾಲ
ಕಾರ್ಪೋರೇಶನ್ ಬ್ಯಾಂಕ್ ನಲ್ಲಿ 310 ಕೋಟಿ ಸಾಲ
ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ 140 ಕೋಟಿ
ಪಂಜಾಬ್ ನ್ಯಾಶನಲ್ ಬ್ಯಾಂಕ್ 1500 ಕೋಟಿ
ಐಡಿಬಿಐ ಬ್ಯಾಂಕ್ 1, 100 ಕೋಟಿ
ಯುಕೋ ಬ್ಯಾಂಕ್ 320 ಕೋಟಿ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 150
ಪಂಜಾಬ್ ಅಂಡ್ ಸಿಂಡ್ ಬ್ಯಾಂಕ್ 60 ಕೋಟಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1468 ಕೋಟಿ
ಬ್ಯಾಂಕ್ ಆಫ್ ಇಂಡಿಯಾ 450 ಕೋಟಿ
ಫೆಡರಲ್ ಬ್ಯಾಂಕ್ 90 ಕೋಟಿ
ಆಕ್ಸಿಸ್ ಬ್ಯಾಂಕ್ 50 ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
MUST WATCH
ಹೊಸ ಸೇರ್ಪಡೆ
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.