ವಿಜಯ್ ಮಲ್ಯಗೆ ಮತ್ತಷ್ಟು ಸಂಕಷ್ಟ
Team Udayavani, Jan 14, 2021, 1:27 AM IST
ಲಂಡನ್: ಮದ್ಯದ ದೊರೆ ವಿಜಯ್ ಮಲ್ಯ ಮತ್ತೂಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೋಮವಾರ ಬ್ರಿಟನ್‌ನ ಹೈಕೋರ್ಟ್ ಮಲ್ಯಗೆ ಕಾನೂನು ಶುಲ್ಕ ಬಿಡುಗಡೆ ಮಾಡಲು ನಿರಾಕರಿಸಿತ್ತು. ಈ ವಿಚಾರವನ್ನು ಮರುಪರಿಶೀಲಿಸಬೇಕೆಂದು ಬುಧವಾರ ಮಲ್ಯ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ನಿರಾಕರಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ಮಲ್ಯ ವಿರುದ್ಧ ದಿವಾಳಿತನದ ಮೊಕದ್ದಮೆ ದಾಖಲಿಸಿದ ಅನಂತರ, ಅಜಮಾಸು 29 ಲಕ್ಷ ಪೌಂಡ್ ಮೌಲ್ಯದ ಅವರ ಆಸ್ತಿಯನ್ನು ಬ್ರಿಟನ್‌ನ ಕೋರ್ಟ್ ಫಂಡ್ಸ್ ಆಫೀಸ್ ಜಪ್ತಿ ಮಾಡಿತ್ತು. ತಮಗೆ ಕಾನೂನು ಸಮರ ಎದುರಿಸಲು ಜಪ್ತಿ ಮಾಡಲಾದ ಆಸ್ತಿಯಿಂದಲೇ ಒಂದಷ್ಟು ಧನರಾಶಿಯನ್ನು ಬಿಡುಗಡೆ ಮಾಡಬೇಕೆಂದು ಮಲ್ಯ ವಿನಂತಿಸಿದ್ದರು. ಇದನ್ನು ಕೋರ್ಟ್ ನಿರಾಕರಿಸಿದ್ದರಿಂದ ಮತ್ತೂಮ್ಮೆ ಅಪೀಲು ಸಲ್ಲಿಸಲು ಮುಂದಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
War: ಉಕ್ರೇನ್‌ನಿಂದ ಸೆರೆ ಭೀತಿ: ಉ.ಕೊರಿಯಾದ 300 ಯೋಧರ ಆತ್ಮಹತ್ಯೆ?
Canada ಮಾರಾಟಕ್ಕಿಲ್ಲ: ಟ್ರಂಪ್‌ಗೆ ಎನ್‌ಡಿಪಿ ನಾಯಕ ಸಿಂಗ್ ಚಾಟಿ
Los Angeles;ಕಾಳ್ಗಿಚ್ಚು ಆರಿಸಲು ಸೂಪರ್ ಸ್ಕೂಪರ್:ಬೆಂಕಿಯ ಕೆನ್ನಾಲಿಗೆಗೆ ಬದುಕು ಭಸ್ಮ!
ಅಲಸಂಡೆ ಆಯಿತು, ಈಗ ಬಾಹ್ಯಾಕಾಶದಲ್ಲಿ ಚಿಗುರಿದ ಅಮಿಟಿ ವಿವಿಯ ಪಾಲಾಕ್
Ukraine-Russia war: ರಷ್ಯಾ ಸೇನೆಯಲ್ಲಿದ್ದ ಕೇರಳದ ವ್ಯಕ್ತಿ ಸಾ*ವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.