ಮಹಿಳಾ ಗುಲಾಮರ ಮೇಲೆ ದೌರ್ಜನ್ಯ
ಐಸಿಸ್‌ನ ಅಮಾನವೀಯ ಪ್ರಸಂಗಗಳನ್ನು ತೆರೆದಿಟ್ಟ ಮಾಜಿ ಮಹಿಳಾ ಉಗ್ರವಾದಿ
Team Udayavani, Jun 2, 2019, 6:00 AM IST
ಅಬುಬಕರ್ ಬಾಗ್ಧಾದಿ
ವಾಷಿಂಗ್ಟನ್: “ಇಸ್ಲಾಮಿಕ್ ಸ್ಟೇಟ್‌ನಲ್ಲಿ ಗುಲಾಮಗಿರಿಗೆ ತಳ್ಳಲ್ಪಡುತ್ತಿದ್ದ ಆ ಹೆಂಗಸರ ದುಃಖ ಅಕ್ಷರಶಃ ಅರಣ್ಯ ರೋದನವಾಗಿರುತ್ತಿತ್ತು. ಅವರ ಕಣ್ಣೀರನ್ನು ಒರೆಸಲು ಯಾರೂ ಇರಲಿಲ್ಲ. ಸುತ್ತಲಿದ್ದವರೆಲ್ಲರ ದೃಷ್ಟಿ ಅವರ ದೇಹ ಸಿರಿಯ ಮೇಲಿರುತ್ತಿತ್ತೇ ಹೊರತು ಅವರ ತೇವಗೊಂಡ ಕಣ್ಣುಗಳ ಕಡೆಗೆ ಅಪ್ಪಿತಪ್ಪಿಯೂ ಹೊರಳುತ್ತಿರಲಿಲ್ಲ.”
ನಾಲ್ಕು ವರ್ಷಗಳ ಹಿಂದೆ ಅಮೆರಿಕ ನೇತೃತ್ವದ ಡೆಲ್ಟಾ ಫೋರ್ಸ್ ಮೂಲಕ ಸೆರೆಹಿಡಿಯಲ್ಪ ಇಸ್ಲಾಮಿಕ್ ಸ್ಟೇಟ್‌ನ ಹಿರಿಯ ಮಹಿಳಾ ಉಗ್ರವಾದಿ ನಿಸ್ರಿನ್ ಅಸ್ಸಾದ್ ಇಬ್ರಾಹಿಂ ಎಂಬ “ಲೇಡಿ ಟೆರರಿಸ್ಟ್’ ನೀಡಿರುವ ಮನಕಲಕುವ ಮಾಹಿತಿಗಳಿವು. ಅಮೆರಿಕ ನ್ಯಾಯಾಲಯದಲ್ಲಿ ಮರಣದಂಡನೆಗೆ ಒಳಗಾಗಿರುವ ಆಕೆ, “ಗಾರ್ಡಿಯನ್’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮನಕಲಕುವ ಮಾಹಿತಿಗಳನ್ನು ನೀಡಿದ್ದಾಳೆ.
“ಗುಲಾಮಗಿರಿಗಾಗಿ ತರಲಾಗುತ್ತಿದ್ದ ಮಹಿಳೆಯರು ಅಥವಾ ಯುವತಿಯರ ಮೇಲೆ ಐಸಿಸ್ ನಾಯಕರೇ ಅತ್ಯಾಚಾರ ಎಸಗುತ್ತಿದ್ದರು. ದೇಹ ಹಂಚಿಕೊಳ್ಳಲು ಒಪ್ಪದವರಿಗೆ ಬೆತ್ತದೇಟುಗಳು ಬೀಳುತ್ತಿದ್ದವು. ಐಸಿಸ್ ಮುಖ್ಯಸ್ಥ ಅಬುಬಕರ್ ಬಾಗ್ಧಾದಿ ಖುದ್ದು ಮುಂದೆ ನಿಂತು ಬೆತ್ತದೇಟುಗಳನ್ನು ನಿರ್ದೇಶಿಸುತ್ತಿದ್ದ. ಚೆನ್ನಾಗಿ ಥಳಿಸಿದ ನಂತರ, ಯುವತಿಯರಿಗೆ ಮೇಕಪ್ ಹಾಕಿ ಶೃಂಗಾರಗೊಳಿಸಿ ಹಾಸಿಗೆಗೆ ದೂಡಲಾಗುತ್ತಿತ್ತು” ಎಂದು ಆಕೆ ಹೇಳಿದ್ದಾರೆ.
“ಒಂದು ದಿನ ಕಳೆಯುವಷ್ಟರಲ್ಲಿ ಅವರ ಇಡೀ ದೇಹದ ಮೇಲೆ ಹಲವಾರು “ಗುರುತು’ಗಳಿರುತ್ತಿದ್ದವು. ಆದರೆ, ಅವು ಸುಖದ ಹೆಸರಿನ ಹಿಂಸೆಯ ಗುರುತುಗಳಾಗಿರುತ್ತಿದ್ದವು. ವಿಪರ್ಯಾಸವೆಂದರೆ, ಅವು ಮಾಯುವ ಮುನ್ನವೇ ಅವರು ಮತ್ತಷ್ಟು ಅತ್ಯಾಚಾರಕ್ಕೆ ಸನ್ನದ್ಧವಾಗಬೇಕಿತ್ತು’ ಎಂದು ಆಕೆ ಖೇದ ವ್ಯಕ್ತಪಡಿಸಿದ್ದಾಳೆ. ಇನ್ನು, ಅಮೆರಿಕದಲ್ಲಿ ತಾನು ಬಂಧಿಯಾದಾಗ ಐಸಿಸ್ ಮುಖ್ಯಸ್ಥ ಅಬು ಅಲ್-ಬಾಗ್ಧಾದಿಯ ಅಡಗುದಾಣಗಳನ್ನು ನಿಖರವಾಗಿ ಗುರುತು ಹಾಕಿ ಕೊಟ್ಟಿರುವುದಾಗಿ ಹೇಳಿಕೊಂಡಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.