ಭಾರತೀಯರಿಗೆ ಮತ್ತೆ ಶುರುವಾಯ್ತು ವೀಸಾ ಕಾಟ
Team Udayavani, Apr 5, 2017, 3:45 AM IST
ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆ ವೇಳೆ ನೀಡಿದ ಆಶ್ವಾಸನೆಯಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್-1ಬಿ ವೀಸಾಗೆ ಕಡಿವಾಣ ಹಾಕುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಇದರಿಂದಾಗಿ, ಎಚ್ 1ಬಿ ವೀಸಾ ನೀಡಿ ಭಾರತೀಯರು ಸೇರಿದಂತೆ ವಿದೇಶಿ ನೌಕರರನ್ನು ಕರೆಸಿಕೊಳ್ಳಲು ಇನ್ನು
ಮುಂದೆ ಅಮೆರಿಕದ ತಂತ್ರಜ್ಞಾನ ಕಂಪನಿಗಳಿಗೆ ಕಷ್ಟವಾಗಲಿದೆ. ಜತೆಗೆ, ಅಮೆರಿಕದ ಕಂಪನಿಗಳಿಗಾಗಿ ದುಡಿಯುತ್ತಿರುವ ಹಾಗೂ ಎಚ್ 1ಬಿ ವೀಸಾದಲ್ಲಿ ಅಮೆರಿಕದ ಕನಸು ಹೊತ್ತು ಸಾಗಿದ ಭಾರತೀಯರೂ ಸಂಕಷ್ಟಕ್ಕೀಡಾಗಲಿದ್ದಾರೆ.
ಮಂಗಳವಾರ ಈ ಕುರಿತ ಪ್ರಕಟಣೆ ಹೊರಡಿಸಿರುವ ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ಇಲಾಖೆ, ಕೆಲವೊಂದು ಹೊಸ ನಿರ್ದೇಶನಗಳನ್ನು ನೀಡಿದೆ. ಅದರಂತೆ, ಆರಂಭಿಕ ಕಂಪ್ಯೂಟರ್ ಪ್ರೋಗ್ರಾಮಿಂಗ್ ಕೆಲಸಗಳೂ ಇನ್ನು ಮುಂದೆ “ವಿಶೇಷ ಉದ್ಯೋಗ’ದ ವ್ಯಾಪ್ತಿಗೆ ಬರಲಿದ್ದು, ಇದು ಎಚ್ 1ಬಿ ವೀಸಾ ಪಡೆಯಲು ಇರುವ ಮೂಲ ಅಗತ್ಯವಾಗಿರುತ್ತದೆ. ಇದೇ ವೇಳೆ, ಯಾವುದೇ ಕಾರಣಕ್ಕೂ ಉದ್ಯೋಗದಾತ ಕಂಪನಿಗಳು ಎಚ್-1ಬಿ ವೀಸಾ ಪ್ರಕ್ರಿಯೆಯನ್ನು ದುರ್ಬಳಕೆ
ಮಾಡಿಕೊಂಡು ಅಮೆರಿಕದ ನೌಕರರಿಗೆ ತಾರತಮ್ಯ ಮಾಡಬಾರದು ಎಂಬ ಸ್ಪಷ್ಟ ಎಚ್ಚರಿಕೆಯನ್ನು ಟ್ರಂಪ್ ಆಡಳಿತ ರವಾನಿಸಿದೆ.
ಅಮೆರಿಕದಲ್ಲಿ 2017ರ ಅಕ್ಟೋಬರ್ 1ರಿಂದ ಆರಂಭವಾಗುವ ಹೊಸ ವಿತ್ತೀಯ ವರ್ಷಕ್ಕೆ ಕಂಪನಿಗಳ ಎಚ್1ಬಿ ವೀಸಾ ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆ ಸೋಮವಾರ ಆರಂಭವಾಗಿದ್ದು, ಇದೇ ಸಂದರ್ಭದಲ್ಲಿ ಸರ್ಕಾರ ಈ ಎಚ್ಚರಿಕೆ ನೀಡಿದೆ.
ಹೊಸ ವೀಸಾ ನೀತಿ ಏನು ಹೇಳುತ್ತೆ?
1. ಏನಾಗುತ್ತೆ?: ಎಂಟ್ರಿ-ಲೆವೆಲ್ ಕಂಪ್ಯೂಟರ್ ಕೆಲಸಗಳಿಗೆ ನೀಡುವ ವೀಸಾದ ಮೇಲೆ ವಲಸೆ ಇಲಾಖೆ ತೀವ್ರ ನಿಗಾ ಇಟ್ಟಿರುವ ಕಾರಣ, ಕಂಪನಿಗಳಿಗೆ ಉದ್ಯೋಗಿಗಳ ನೇಮಕ ಕಷ್ಟವಾಗಲಿದೆ. ಒಂದು ವೇಳೆ, ಸರ್ಕಾರದ ಎಚ್ಚರಿಕೆ ಉಲ್ಲಂಘಿಸಿ ವಿದೇಶಿಯರಿಗೆ ಮಣೆ ಹಾಕಿದರೆ ಕಂಪನಿಗಳು ಕಠಿಣ ಕ್ರಮ ಎದುರಿಸಬೇಕಾಗುತ್ತದೆ.
2. ಎಚ್1 ಬಿ ಪ್ರೋಗ್ರಾಂ ಏಕೆ ಮುಖ್ಯ?: ವಿದೇಶಿ ನೌಕರರನ್ನು ಅಮೆರಿಕಕ್ಕೆ ಕರೆತರಲು ಇದು ಬೇಕೇ ಬೇಕು. ಸಾಫ್ಟ್ವೇರ್ ಡೆವಲಪರ್‌ನಂಥ ಹುದ್ದೆಗಳಿಗೆ ಅಮೆರಿಕನ್ನರಲ್ಲಿ ಅಷ್ಟೊಂದು ಕೌಶಲ್ಯವಿರದ ಕಾರಣ ಕಂಪನಿಗಳು ಭಾರತದಂಥ ದೇಶಗಳ ನಾಗರಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತವೆ. ಭಾರತದಲ್ಲಿರುವ ಬಹುತೇಕ ಹೊರಗುತ್ತಿಗೆ ಕಂಪನಿಗಳು ಎಚ್ 1 ಬಿ ವೀಸಾ ಪ್ರೋಗ್ರಾಂ ಅನ್ನೇ ಅವಲಂಬಿಸಿವೆ.
3. ಹೊರಗುತ್ತಿಗೆ ಸಂಸ್ಥೆಗಳ ಮೇಲೆ ಪರಿಣಾಮ?: ಭಾರತದ ಹೊರಗುತ್ತಿಗೆ ಸಂಸ್ಥೆಗಳಾದ ಟಿಸಿಎಸ್, ವಿಪ್ರೋ, ಇನ್ಫೋಸಿಸ್ ಹಾಗೂ ಅಮೆರಿಕದಲ್ಲಿರುವ ಐಬಿಎಂ, ಕಾಗ್ನೆ„ಜೆಂಟ್ ಕಂಪನಿಗಳು ಎಚ್1ಬಿ ವೀಸಾವನ್ನು ಅವಲಂಬಿಸಿವೆ. ಇನ್ನು ಅವು ಎಂಟ್ರಿ ಲೆವೆಲ್ ಪ್ರೋಗ್ರಾಮರ್‌ಗಳ ಬದಲಿಗೆ, ಹೆಚ್ಚು ಕೌಶಲ್ಯವಿರುವ ಉದ್ಯೋಗಿಗಳನ್ನು ಹೆಚ್ಚು ವೇತನ ನೀಡಿ ನೇಮಿಸಿಕೊಳ್ಳಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!
Maharashtra; ಗೊಂಡಿಯಾ ಬಸ್ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ
Ramya: ಗೆಳೆಯನ ಜತೆಗಿನ ರಮ್ಯಾ ಫೋಟೋ ವೈರಲ್
Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್; ಮಹಿಳೆಯರು ಸೇರಿ ಹಲವರ ಸಾವು
Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.