ವೀಸಾ ಬೇಕೆಂದರೆ ವಿವರ ಕಡ್ಡಾಯ!
Team Udayavani, May 7, 2017, 3:45 AM IST
ವಾಷಿಂಗ್ಟನ್: ಅಮೆರಿಕದಲ್ಲಿ ವೀಸಾಗೆ ಅರ್ಜಿ ಸಲ್ಲಿಸಿದ್ದೀರಾ? ಎಲ್ಲ ದಾಖಲೆಗಳ ಜೊತೆಗೆ ನಿಮ್ಮ ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳ ವಿವರವನ್ನೂ ರೆಡಿಯಾಗಿಟ್ಟುಕೊಳ್ಳಿ.
ಏಕೆಂದರೆ, ಈಗಾಗಲೇ ಎಚ್1ಬಿ ವೀಸಾ ಪ್ರಕ್ರಿಯೆಯನ್ನು ಬಿಗಿಗೊಳಿಸಿರುವ ಅಮೆರಿಕದ ಟ್ರಂಪ್ ಆಡಳಿತವು, ವೀಸಾಗೆ ಅರ್ಜಿ ಸಲ್ಲಿಸಿದವರ ಸಾಮಾಜಿಕ ಜಾಲತಾಣಗಳ ವಿವರಗಳನ್ನು ಜಾಲಾಡಲು ನಿರ್ಧರಿಸಿದೆ. ಭಯೋತ್ಪಾದಕ ನಂಟು, ಉಗ್ರ ಚಟುವಟಿಕೆ ಅಥವಾ ರಾಷ್ಟ್ರೀಯ ಭದ್ರತೆಗೆ ಅಪಾಯವಿರುವ ವ್ಯಕ್ತಿಗಳನ್ನು ದೇಶದಿಂದ ದೂರವಿಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆಯಂತೆ.
ಯುಎಸ್ ವೀಸಾ ಅರ್ಜಿದಾರರಿಗೆ ಎಂತೆಂಥ ಪ್ರಶ್ನೆಗಳನ್ನು ಕೇಳಬೇಕು ಎಂಬ ಕುರಿತ ಅಧಿಸೂಚನೆಯನ್ನು ಗುರುವಾರ ಅಮೆರಿಕ ವಿದೇಶಾಂಗ ಇಲಾಖೆ ಹೊರಡಿಸಿದೆ. ಈ ನಿಯಮವು ವಾರ್ಷಿಕ 65 ಸಾವಿರ ಅರ್ಜಿದಾರರ ಮೇಲೆ ಪರಿಣಾಮ ಬೀರಲಿದೆ ಎಂದೂ ಇಲಾಖೆ ತಿಳಿಸಿದೆ.
ಏನೇನು ಕೇಳುತ್ತಾರೆ?
ಅರ್ಜಿದಾರರು ತಮ್ಮ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣ ದಾಖಲೆಗಳನ್ನು ನೀಡಬೇಕು. ನೀವು ಯಾವತ್ತಾದರೂ ಉಗ್ರರ ಪ್ರಾಬಲ್ಯವಿರುವ ದೇಶಗಳಿಗೆ ಅಥವಾ ಪ್ರದೇಶಗಳಿಗೆ ತೆರಳಿದ್ದೀರಾ ಎಂಬ ಬಗ್ಗೆ ಈ ಮೂಲಕ ಪರಿಶೀಲಿಸಲಾಗುತ್ತದೆ. ಹೌದೆಂದಾದರೆ, ನಿಮಗೆ ವೀಸಾ ಸಿಗುವ ಸಾಧ್ಯತೆ ಕಡಿಮೆ. ಇದಲ್ಲದೆ, ನಿಮ್ಮ ಒಡಹುಟ್ಟಿದವರ ಜನನ ದಿನಾಂಕ, ಅವರ ಹೆಸರುಗಳು, ನಿಮ್ಮ ಕುಟುಂಬದ ವಿವರ, ಹೊಸದಾಗಿ ಮಕ್ಕಳೇನಾದರೂ ಹುಟ್ಟಿದ್ದರೆ ಅವರ ಮಾಹಿತಿ, ಸಾಮಾಜಿಕ ಜಾಲತಾಣ ಮತ್ತು ಇತರೆ ಆನ್‌ಲೈನ್ ಪ್ಲಾಟ್ ಫಾರಂಗಳಲ್ಲಿನ ಚಟುವಟಿಕೆಗಳ ವಿವರವನ್ನು ಅರ್ಜಿದಾರರು ನೀಡಬೇಕು ಎಂದು ಅಧಿಸೂಚನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
Bangladesh: 42,600 ಕೋಟಿ ರೂ. ಲಂಚ ಕೇಸ್: ಹಸೀನಾ ವಿರುದ್ಧ ತನಿಖೆ ಶುರು
America: ಪ್ರತೀಕಾರ- ಭಾರತದ ನಟೋರಿಯಸ್ ಡ್ರ*ಗ್ಸ್ ಸ್ಮಗ್ಲರ್ ಶೂಟೌಟ್ ನಲ್ಲಿ ಹ*ತ್ಯೆ
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ.
ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.