ಪ್ರಧಾನಿ ಮೋದಿಯನ್ನು ‘ದೇಶಭಕ್ತ’ ಎಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
Team Udayavani, Oct 28, 2022, 10:06 AM IST
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಚಿಂತಕರ ಚಾವಡಿಯಾದ ವಾಲ್ಡೈ ಕ್ಲಬ್ ನಲ್ಲಿ ನಡೆಸಿದ ತಮ್ಮ ವಾರ್ಷಿಕ ಭಾಷಣದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸ್ವತಂತ್ರ ವಿದೇಶಾಂಗ ನೀತಿಯನ್ನು ಶ್ಲಾಘಿಸಿದರು. ಮೋದಿ ಅವರು ದೇಶಭಕ್ತ ಎಂದು ಕರೆದ ಪುಟಿನ್, ಭಾರತದಲ್ಲಿ ಮೋದಿ ನಾಯಕತ್ವದಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ ಎಂದು ಹೇಳಿದರು.
“ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಲಾಗಿದೆ. ಅವರು ತಮ್ಮ ದೇಶದ ‘ದೇಶಭಕ್ತ’ರಾಗಿದ್ದಾರೆ. ಅವರ `ಮೇಕ್ ಇನ್ ಇಂಡಿಯಾ’ ಕಲ್ಪನೆಯು ಆರ್ಥಿಕ ಮತ್ತು ನೈತಿಕತೆ ಎರಡಕ್ಕೂ ಸಂಬಂಧಿಸಿದೆ. ಭವಿಷ್ಯವು ಭಾರತಕ್ಕೆ ಸೇರಿದ್ದು”ಎಂದು ಪುಟಿನ್ ಹೇಳಿದರು.
ರಾಯಿಟರ್ಸ್ ಅನುವಾದದ ಪ್ರಕಾರ ಕ್ರೆಮ್ಲಿನ್ ವಾಲ್ಡೈ ಡಿಸ್ಕಷನ್ ಕ್ಲಬ್ ನಲ್ಲಿ ಮಾತನಾಡುತ್ತಾ,” ಬ್ರಿಟೀಷ್ ವಸಾಹತು ಪ್ರದೇಶದಿಂದ ಆಧುನಿಕ ರಾಷ್ಟ್ರವಾಗುವತ್ತ ಭಾರತದ ಅಭಿವೃದ್ಧಿಯು ಮಹತ್ತರವಾದದ್ದು” ಎಂದು ಕರೆದ ರಷ್ಯಾದ ಅಧ್ಯಕ್ಷರು, ಸುಮಾರು 1.5 ಶತಕೋಟಿ ಜನರು ಮತ್ತು ಅಭಿವೃದ್ಧಿ ಕೆಲಸಗಳು ಭಾರತದ ಬಗ್ಗೆ ಪ್ರತಿಯೊಬ್ಬರು ಗೌರವ ಮತ್ತು ಮೆಚ್ಚುಗೆ ಸೂಚಿಸಲು ಕಾರಣವಾಗುತ್ತವೆ’’ ಎಂದು ಹೇಳಿದರು.
ಇದನ್ನೂ ಓದಿ:ತೆರೆಗೆ ಬಂತು ನಮ್ಮ ಹೆಮ್ಮೆಯ ‘ಗಂಧದ ಗುಡಿ’: ಡ್ರೀಮ್ ಪ್ರಾಜೆಕ್ಟ್ ಅಶ್ವಿನಿ ಪುನೀತ್ ಮನದ ಮಾತು
ಭಾರತ ಮತ್ತು ರಷ್ಯಾದ ನಡುವೆ ಒಂದು ವಿಶೇಷ ಸಂಬಂಧವಿದೆ ಎಂದರು. “ನಮ್ಮ ನಡುವೆ ಹಲವು ದಶಕಗಳ ನಿಕಟ ಮಿತ್ರ ಸಂಬಂಧದ ತಳಹದಿಯಿದೆ. ನಾವು ಎಂದಿಗೂ ಯಾವುದೇ ಕಷ್ಟಕರವಾದ ಸಮಸ್ಯೆಗಳನ್ನು ಎದುರಿಸಲಿಲ್ಲ. ನಾವು ಪರಸ್ಪರರ ಬೆಂಬಲಕ್ಕೆ ನಿಂತಿದ್ದೇವೆ. ಈಗಲೂ ಅದು ಮುಂದುವರಿದಿದೆ, ಭವಿಷ್ಯದಲ್ಲಿಯೂ ಇರುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಪುಟಿನ್ ತಮ್ಮ ಭಾಷಣದಲ್ಲಿ ಹೇಳಿದರು.
ಕೃಷಿಗಾಗಿ ರಸಗೊಬ್ಬರ ಸರಬರಾಜನ್ನು ಹೆಚ್ಚಿಸುವಂತೆ ಮೋದಿ ಕೇಳಿದ್ದರು. ನಾವು 7.6ರಷ್ಟು ಪಟ್ಟು ಹೆಚ್ಚು ಸರಬರಾಜು ಹೆಚ್ಚಿಸಿದ್ದೇವೆ. ಕೃಷಿಯಲ್ಲಿ ವ್ಯಾಪಾರ ಸುಮಾರು ದ್ವಿಗುಣಗೊಂಡಿದೆ ಎಂದು ವ್ಲಾಡಿಮಿರ್ ಪುಟಿನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.