ಚೀನಾದ ಅಮಿತ್ ಶಾ “ವಾಂಗ್’
Team Udayavani, Mar 13, 2018, 11:20 AM IST
ಬೀಜಿಂಗ್: ಚೀನಾ ಅಧ್ಯಕ್ಷರ ಅಧಿಕಾರಾವಧಿಯ ಮಿತಿಯನ್ನು ತೆಗೆದು ಹಾಕುವಂಥ ಮಹತ್ವದ ಹೆಜ್ಜೆಯ ಹಿಂದೆ ವಾಂಗ್ ಹುನಿಂಗ್ ಎಂಬ ರಾಜಕೀಯ ತಜ್ಞರೊಬ್ಬರ ತಂತ್ರಗಾರಿಕೆ ಇದೆಯೆಂದು ಹಲವಾರು ಮಾಧ್ಯಮಗಳು ಅಭಿಪ್ರಾಯಪಟ್ಟಿದ್ದು, ಅವರನ್ನೀಗ ಚೀನಾದ “ಅಮಿತ್ ಶಾ’ ಎಂದು ಬಣ್ಣಿಸಲಾಗಿದೆ. ದೈನಿಕವೊಂದರಲ್ಲಿ ತಾವು ಬರೆದ ಲೇಖನವೊಂದರಲ್ಲಿ ದೆಹಲಿಯ “ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಚೈನೀಸ್ ಸ್ಟಡೀಸ್’ನ ಜಬಿನ್ ಟಿ. ಜಾಕೋಬ್ ಎಂಬುವರು ವಾಂಗ್
ಹುನಿಂಗ್ ಅವರನ್ನು ಹೀಗೆ ಬಣ್ಣಿಸಿದ್ದಾರೆ. ಹಿಂದೊಮ್ಮೆ ಉಪನ್ಯಾಸಕರಾಗಿ, ಆನಂತರ ರಾಜಕಾರಣಿಯಾಗಿ ಬದಲಾದ ವಾಂಗ್, ಇದೀಗ, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಅಮಿತ್ ಶಾ ಅವರು ಆಪ್ತ ಸಲಹೆಗಾರರಾಗಿ ಆಸರೆಯಾಗಿರುವ ರೀತಿಯಲ್ಲೇ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ವಾಂಗ್ ಹುನಿಂಗ್ ಆಪ್ತ ಸಲಹೆಗಾರರಾಗಿದ್ದಾರೆ ಎಂದು ಹೇಳಿದ್ದಾರೆ.
ಜಿನ್‌ಪಿಂಗ್ ಅವರಿಗಷ್ಟೇ ಅಲ್ಲ, ಈ ಹಿಂದಿನ ಅಧ್ಯಕ್ಷರಾದ ಜಿಯಾಂಗ್ ಜೆಮಿನ್ಸ್ ಅವರ “ಥಿಯರಿ ಆಫ್ ತ್ರೀ ರೆಪ್ರಸೆಂಟೇಟಿವ್ಸ್’ ಹಾಗೂ ಹು ಜಿಂಟಾವೊ ಅವರ “”ಸೈಂಟಿμಕ್ ಥಿಯರಿ ಆಫ್ ಡೆವೆಲಪ್‌ಮೆಂಟ್” ಎಂಬ ರಾಜಕೀಯ
ಸಿದ್ಧಾಂತಗಳ ಹಿಂದೆ ಇದೇ ವಾಂಗ್ ಹುನಿಂಗ್ ಬುದ್ಧಿಮತ್ತೆ ಕೆಲಸ ಮಾಡಿತ್ತೆಂದು ಹೇಳಲಾಗಿದ್ದು, ಇದೀಗ, ಕ್ಸಿ ಜಿನ್‌ಪಿಂಗ್ ಅವರ ಯಶಸ್ಸಿಗೂ ಹುನಿಂಗ್ ಅವರೇ ಕಾರಣ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.