![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Sep 8, 2020, 12:52 PM IST
ನವದೆಹಲಿ: 9 ವರ್ಷಗಳ ಕೆಳಗೆ ಅಮೆರಿಕ ಸೇನಾ ಪಡೆಗಳಿಂದ ಹತನಾದ ಅಲ್-ಖೈದಾ ಉಗ್ರ ಒಸಾಮಾ ಬಿನ್ ಲಾಡೆನ್ ತನ್ನ ಸಹಚರರೊಂದಿಗೆ ಅಶ್ಲೀಲ ವಿಡಿಯೊಗಳಲ್ಲಿನ ಕೋಡಿಂಗ್ ಸಂದೇಶಗಳ ಮೂಲಕ ಸಂವಹನ ನಡೆಸಿರಬಹುದು ಎಂಬ ಶಂಕೆ ತಡವಾಗಿ ಸ್ಫೋಟಗೊಂಡಿದೆ.
ಅಮೆರಿಕ ಡಬ್ಲ್ಯುಟಿಒ ಕಟ್ಟಡದ ಮೇಲೆ ದಾಳಿಗೈದ ಉಗ್ರ ಲಾಡೆನ್‌ನನ್ನು 2011ರ ಮೇ 2ರಂದು ಪಾಕಿಸ್ತಾನದ ಅಬೋಟಾ ಬಾದ್‌ನಲ್ಲಿ ಸಂಹರಿಸಲಾಗಿತ್ತು. ಈ ಕಾರ್ಯಾಚರಣೆ ವೇಳೆ ಅಮೆರಿಕ ಪಡೆಗಳು ಲಾಡೆನ್ ವಾಸ್ತವ್ಯ ಹೂಡಿದ್ದ ಕಟ್ಟಡದಲ್ಲಿ ಸಾಕಷ್ಟು ಅಶ್ಲೀಲ ವಿಡಿಯೊ, ನಗ್ನಚಿತ್ರಗಳನ್ನು ವಶಪಡಿಸಿಕೊಂಡಿದ್ದರು.
ಈ ವೇಳೆ ಕಲೆಹಾಕಿದ ಡಿಜಿಟಲ್‌ವಸ್ತುಗಳ ಮೇಲೆ ಬೆಳಕು ಚೆಲ್ಲುವ ಸಾಕ್ಷ್ಯಚಿತ್ರವನ್ನು “ನ್ಯಾಷನಲ್ ಜಿಯಾಗ್ರಫಿಕ್’ ಚಾನೆಲ್ “ಬಿನ್ ಲಾಡೆನ್ ಹಾರ್ಡ್‌ಡ್ರೈವ್’ ಎಂಬ ಶೀರ್ಷಿಕೆ ಯಲ್ಲಿ ಸಿದ್ಧಪಡಿಸಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕ ಸೈನಿಕರು ವಿಡಿಯೊದಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.
ಇಮೇಲ್, ಕೊರಿಯರ್ ಬಗ್ಗೆ ಭಯ ಹೊಂದಿದ್ದ ಲಾಡೆನ್ ಅಶ್ಲೀಲ ವಿಡಿಯೊಗಳ ಮೂಲಕ ರಹಸ್ಯ ಸಂವಹನ ನಡೆಸಿರುವ ಸಾಧ್ಯತೆ ಇದೆ. ಈ ಕುರಿತು ಅಮೆರಿಕ ಸೇನೆ ಇನ್ನಷ್ಟು ತನಿಖೆ ಕೈಗೊಳ್ಳುತ್ತಿದೆ ಎಂದು ಸಿಎನ್‌ಎನ್ ರಾಷ್ಟ್ರೀಯ ಭದ್ರತಾ ವಿಶ್ಲೇಷಕ ಪೀಟರ್ ಬರ್ಗೆನ್ ತಿಳಿಸಿದ್ದಾರೆ. ಸೆ.10ರಂದು ಈ ಸಾಕ್ಷ್ಯಚಿತ್ರ ಪ್ರಸಾರಗೊಳ್ಳಲಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.