Washington: ಅಮೆರಿಕದ 18 ಸಾವಿರ ಭಾರತೀಯರಿಗೆ ಈಗ ಎದುರಾಗಿದೆ ಗಡೀಪಾರು ಭೀತಿ!
Team Udayavani, Dec 14, 2024, 7:00 AM IST
ವಾಷಿಂಗ್ಟನ್: ಅಮೆರಿಕದ ಇತಿಹಾಸದಲ್ಲೇ ಮೊದಲ ಬಾರಿಗೆ, ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ವಲಸಿಗರನ್ನು ಹೊರ ಹಾಕುವ ಅತೀ ದೊಡ್ಡ ಕಾರ್ಯಾಚರಣೆ ಜ. 20ರಂದು ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆಯಲಿದೆ. ಮೊದಲ ಹಂತದಲ್ಲಿ ಗಡೀಪಾ ರಾಗುವವರ ಪಟ್ಟಿಯಲ್ಲಿ 18 ಸಾವಿರ ಭಾರತೀಯರಿದ್ದಾರೆ. ಅಮೆರಿಕದಲ್ಲಿ 7.25 ಲಕ್ಷ ಭಾರತೀಯರು ಅಕ್ರಮವಾಗಿ ಇದ್ದಾರೆ ಎಂದು ವಲಸೆ ಮತ್ತು ಸುಂಕ ವಿಭಾಗ ಅಂದಾಜಿಸಿದೆ.
ಈ ಪೈಕಿ ದಾಖಲೆಗಳಿಲ್ಲದ 18 ಸಾವಿರ ಮಂದಿಯನ್ನು ಚಾರ್ಟರ್ಡ್ ಫ್ಲೈಟ್‌ಗಳ ಮೂಲಕ ಭಾರತಕ್ಕೆ ವಾಪಸ್ ಕಳುಹಿಸಲಾಗುತ್ತದೆ. ಅಮೆರಿಕದಲ್ಲಿ ಅಂದಾಜು 15 ಲಕ್ಷ ಅಕ್ರಮ ವಲಸಿಗರಿದ್ದಾರೆ ಎನ್ನಲಾಗಿದ್ದು, ಈ ಪೈಕಿ ನೆರೆಯ ಮೆಕ್ಸಿಕೋದವರು ಮೊದಲ ಸ್ಥಾನದಲ್ಲಿದ್ದಾರೆ. ಅನಂತರ ಎಲ್ ಸಾಲ್ವಡೋರ್ ಮತ್ತು ಭಾರತೀಯರಿದ್ದಾರೆ.
4 ಭಾರತೀಯರಿಗೆ ಬೈಡೆನ್ ಕ್ಷಮಾದಾನ
ವಿವಿಧ ಆರೋಪಗಳನ್ನು ಹೊತ್ತು ಜೈಲು ಸೇರಿ ರುವ 1,500 ಮಂದಿಗೆ ಒಂದೇ ದಿನ ಅಮೆರಿಕ ನಿರ್ಗಮಿತ ಅಧ್ಯಕ್ಷ ಬೈಡೆನ್ ಕ್ಷಮಾದಾನ ನೀಡಿದ್ದಾರೆ. ಈ ಪೈಕಿ ನಾಲ್ವರು ಭಾರತೀಯ-ಅಮೆರಿಕನ್ನರೂ ಸೇರಿದ್ದಾರೆ. ವಂಚನೆ, ಡ್ರಗ್ಸ್ ನಿಯಮ ಉಲ್ಲಂಘನೆ, ಅಕ್ರಮ ಹಣಕಾಸು ವರ್ಗಾವಣೆ ಯಂಥ ಪ್ರಕರಣಗಳನ್ನು ಎದುರಿಸುತ್ತಿ ರುವ ಮೀರಾ ಸಚ್ ದೇವಾ, ಬಾಬು ಭಾಯಿ ಪಟೇಲ್, ಕೃಷ್ಣ ಮೋಟೆ ಮತ್ತು ವಿಕ್ರಂ ದತ್ತಾ ಕ್ಷಮೆಗೆ ಪಾತ್ರರಾದ ಭಾರತೀಯ ಮೂಲದವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
War: ಉಕ್ರೇನ್‌ನಿಂದ ಸೆರೆ ಭೀತಿ: ಉ.ಕೊರಿಯಾದ 300 ಯೋಧರ ಆತ್ಮಹತ್ಯೆ?
Canada ಮಾರಾಟಕ್ಕಿಲ್ಲ: ಟ್ರಂಪ್‌ಗೆ ಎನ್‌ಡಿಪಿ ನಾಯಕ ಸಿಂಗ್ ಚಾಟಿ
Los Angeles;ಕಾಳ್ಗಿಚ್ಚು ಆರಿಸಲು ಸೂಪರ್ ಸ್ಕೂಪರ್:ಬೆಂಕಿಯ ಕೆನ್ನಾಲಿಗೆಗೆ ಬದುಕು ಭಸ್ಮ!
ಅಲಸಂಡೆ ಆಯಿತು, ಈಗ ಬಾಹ್ಯಾಕಾಶದಲ್ಲಿ ಚಿಗುರಿದ ಅಮಿಟಿ ವಿವಿಯ ಪಾಲಾಕ್
Ukraine-Russia war: ರಷ್ಯಾ ಸೇನೆಯಲ್ಲಿದ್ದ ಕೇರಳದ ವ್ಯಕ್ತಿ ಸಾ*ವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.