‘ಎವರ್ ಗಿವನ್’ ತೇಲುತ್ತಿಲ್ಲ.! ಸುಯೆಜ್ ಬದಲಿಗೆ ಹಡಗುಗಳ ಸಂಚಾರಕ್ಕೆ ಅನ್ಯ ಮಾರ್ಗ..?!
Team Udayavani, Mar 29, 2021, 3:43 PM IST
ಸುಯೆಜ್ : ಕಳೆದ ಒಂದು ವಾರದಿಂದ ಸುಯೆಜ್ ಕಾಲುವೆಯಲ್ಲಿ ನೂರಾರು ಹಡಗುಗಳ ಸಂಚಾರಕ್ಕೆ ತಡೆಯಂತೆ ಸಿಲುಕಿ ನಿಂತಿದ್ದ ಜಪಾನ್ ಮೂಲದ ದೈತ್ಯ ಸರಕು ಹಡಗು ಎಂವಿ ಎವರ್ ಗಿವನ್ ಸುಮಾರು ಒಂದು ವಾರದ ನಂತರ, ತಿರುಗಿ ನಿಂತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೊರಹೊಮ್ಮಿದ ವೀಡಿಯೊಗಳು ತಿಳಿಸಿವೆ. ಆದರೆ ದೈತ್ಯ ಹಡಗು ಇನ್ನೂ ತೇಲುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಇಂದು ಬೆಳಿಗ್ಗೆಯಿಂದ ಒಟ್ಟು 11 ಟಗ್ ಬೋಟ್ ಗಳು ಎವರ್ ಗಿವನ್ ಅನ್ನು ಚಲಿಸುವಂತೆ ಮಾಡಲು ಪ್ರಯತ್ನಿಸುತ್ತಿವೆ” ಎಂದು ವರದಿಯಾಗಿದೆ.
ಓದಿ :ಸಿದ್ದರಾಮಯ್ಯ ಕೂಡಲೇ ಜನರ ಕ್ಷಮೆಯಾಚಿಸಬೇಕು: ಶ್ರೀರಾಮುಲು ವಾಗ್ದಾಳಿ
ಬೃಹತ್ ಕಂಟೇನರ್ ಹಡಗನ್ನು ಶೇಕಡಾ 80 ರಷ್ಟು ತಿರುಗಿಸುವುದರ ಮೂಲಕ ಕಾಲುವೆಯಿಂದ ಹೊರಕ್ಕೆ ತರುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಈಜಿಪ್ಟ್ ನ ಸುಯೆಜ್ ಕಾಲುವೆ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು, ಬೃಹತ್ ಹಡಗನ್ನು ಕಾಲುವೆಯಿಂದ ಮುಕ್ತಗೊಳಿಸಲು ಸುಮಾರು 27,000 ಕ್ಯುಬಿಕ್ ಮೀಟರ್ ಮರಳನ್ನು 18 ಮೀಟರ್ ಆಳದಿಂದ ಅಗೆದು ಹಾಕಲಾಗಿದೆ ಎಂದು ವರದಿಗಳು ತಿಳಿಸಿವೆ.
28th March 2021 in 90 seconds. Mashhour is the cutter suction dredger. You’ll also see black tugboats close to the ship. And I’ve got my mates with their own diggers. We are much like power rangers now.
?: Suez Canal Authority#SuezCrisis #SuezBLOCKED #Suez #Evergreenship pic.twitter.com/wHrKquuRc0
— Guy With The Digger At Suez Canal (@SuezDiggerGuy) March 28, 2021
ಮಾರ್ಚ್ 23 ರಿಂದ ವ್ಯಾಪಾರ ಮಾರ್ಗದ ದಕ್ಷಿಣ ಪ್ರವೇಶ ದ್ವಾರದಲ್ಲಿ ಅಂದಾಜು 450 ಕ್ಕೂ ಹೆಚ್ಚು ಹಡಗುಗಳು ಕಾಲುವೆಯನ್ನು ಹಾದು ಹೊಗಲು ಕಾಯುತ್ತಿವೆ ಎಂದು ಕೂಡ ಹೇಳಲಾಗುತ್ತಿದೆ.
ಓದಿ : ಚೈತ್ರಾ ಕೊಟ್ಟೂರು ಕಲ್ಯಾಣ ಕಲಹ: ಮೊದಲ ದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ನವದಂಪತಿ
ಇನ್ನು, ಕೆಲವು ಹಡಗುಗಳು ಸುಯೆಜ್ ಬದಲಿಗೆ ಆಫ್ರಿಕಾದ ದಕ್ಷಿಣ ತುದಿಯ ಮಾರ್ಗವಾಗಿ ಸುದೀರ್ಘ ಮತ್ತು ದುಬಾರಿ ಪ್ರಯಾಣವನ್ನು ಆರಿಸಿಕೊಂಡಿವೆ ಎಂಬ ಮಾಹಿತಿಗಳು ಕೂಡ ಸದ್ಯ ಲಭ್ಯವಾಗಿವೆ.
ಕಾಲುವೆಯನ್ನು ನಿಯಂತ್ರಿಸುತ್ತಿರುವ ಈಜಿಪ್ಟ್ ಈ ಆಕಸ್ಮಿಕ ಘಟನೆಯಿಂದಾಗಿ ದಿನಕ್ಕೆ ಸುಮಾರು 14 ಮಿಲಿಯನ್ ಡಾಲರ್ ಆದಾಯವನ್ನು ಕಳೆದುಕೊಳ್ಳುತ್ತಿದೆ ಎಂಬ ಆತಂಕಕಾರಿ ವಿಚಾರ ವರದಿಯಾಗಿದೆ.
ಸದ್ಯಕ್ಕೆ, ಈ ದೈತ್ಯ ಹಡಗನ್ನು ಕಾಲುವೆಯಿಂದ ಹೊರ ತೆರೆಯಲು ಎಷ್ಟು ದಿನಗಳು ಬೇಕಾಗಬಹುದು ಎಂಬ ಮಾಹಿತಿಗಳು ಇದುವರೆಗೂ ಲಭ್ಯವಾಗಿಲ್ಲ. ನಿರಂತರವಾಗಿ ಹಡಗನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿವೆ ಎಂಬ ಮಾಹಿತಿ ದೊರಕಿದೆ.
ಓದಿ : ಇನ್ನು ಗಣಿ ಅಧಿಕಾರಿಗಳಿಗೆ ಪೊಲೀಸ್ ಡ್ರೆಸ್, ದರ್ಜೆಗೆ ತಕ್ಕಂತೆ ಸ್ಟಾರ್:ಮುರುಗೇಶ್ ನಿರಾಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.