17 ಕ್ಷುದ್ರಗ್ರಹಗಳಲ್ಲಿದೆ ನೀರು
Team Udayavani, Dec 20, 2018, 6:15 AM IST
ಟೋಕಿಯೊ: ಬಾಹ್ಯಾಕಾಶದಲ್ಲಿ ಹಾರಾಡುವ 17 ಕ್ಷುದ್ರಗ್ರಹಗಳಲ್ಲಿ ನೀರಿನ ಅಂಶವಿರುವುದನ್ನು ಜಪಾನ್ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೊರೇಷನ್ ಏಜೆನ್ಸಿ (ಜಾಕ್ಸಾ) ಹಾಗೂ ಯೂನಿವರ್ಸಿಟಿ ಆಫ್ ಟೋಕಿಯೋ (ಯುಟಿ) ವಿಜ್ಞಾನಿಗಳು ಈ ಸಂಶೋಧನೆ ಮಾಡಿದ್ದಾರೆ. 2011ರಲ್ಲಿ ಹಾರಿ ಬಿಡಲಾಗಿದ್ದ ಅಕಾರಿ ಎಂಬ ಉಪಗ್ರಹದ ಅತಿ ಸೂಕ್ಷ್ಮ ಇನ್‌ಫ್ರಾರೆಡ್ (2.3 ಮೈಕ್ರೋ ಮೀಟರ್) ಕಿರಣಗಳಿಂದ ನೀರಿನ ಪತ್ತೆ ಸಾಧ್ಯವಾಗಿದೆ. ಅಂದಹಾಗೆ, ಈ ಕ್ಷುದ್ರ ಗ್ರಹಗಳಲ್ಲಿನ ನೀರು ತೇವಗೊಂಡ ಖನಿಜಗಳ ಮಾದರಿಯಲ್ಲಿದ್ದು, ಲಕ್ಷಾಂತರ ವರ್ಷಗಳ ಕಾಲಾವಧಿಯಲ್ಲಿ ಆಂತರಿಕವಾಗಿ ನಡೆದಿರುವ ರಾಸಾಯನಿಕ ಪ್ರಕ್ರಿಯೆಗಳಿಂದ ರೂಪು ಗೊಂಡಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ನೀರಿನ ಉಗಮದ ಬಗ್ಗೆ ಹೊಸ ಸಿದ್ಧಾಂತ ಗಳು, ಚರ್ಚೆ, ವಾದಗಳಿಗೆ ಈ ಸಂಶೋಧನೆ ಹೊಸ ದಿಕ್ಕು ನೀಡಲಿದೆ ಎಂದು ನಿರೀಕ್ಷಿಸ ಲಾಗಿದೆ. ಸದ್ಯಕ್ಕೆ ಭೂಮಿ ಹೊರತುಪಡಿಸಿ ಬೇರೆಲ್ಲೂ ನೀರಿನ ಮೂಲವಿಲ್ಲ.
ಈ ಅತ್ಯಮೂಲ್ಯ ಸಂಪನ್ಮೂಲದ ಉಗಮವಾಗಿ ದ್ದಾದರೂ ಹೇಗೆ ಎಂಬುದಕ್ಕೆ ವಿಜ್ಞಾನಿಗಳಲ್ಲಿ ಈವರೆಗೂ ನಿಖರ ಉತ್ತರವಿಲ್ಲ. ಇತ್ತೀಚೆಗೆ ಇತರ ಕೆಲ ಗ್ರಹಗಳಲ್ಲಿ ನೀರಿನ ಕುರುಹು ಇದೆ ಎಂದು ಊಹಿಸಲಾಗಿದೆಯಾದರೂ ಅದರ ಮೂಲದ ಬಗ್ಗೆಯೂ ನಿಖರ ಉತ್ತರ ಸಿಕ್ಕಿಲ್ಲ. ಹಾಗಾಗಿ, ಜಪಾನ್ ವಿಜ್ಞಾನಿಗಳ ಈ ಸಂಶೋ ಧನೆ ಜಲ ಮೂಲಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬಹುದು ಎಂದು ಆಶಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.