ಅಪ್ಪನ ಹಂತಕರನ್ನು ನಾವು ಕ್ಷಮಿಸಿದ್ದೇವೆ: ರಾಹುಲ್
Team Udayavani, Mar 12, 2018, 9:35 AM IST
ಸಿಂಗಾಪುರ: “1991ರಲ್ಲಿ ಅಪ್ಪ ರಾಜೀವ್ ಗಾಂಧಿ ಹತ್ಯೆಯಾದ ಬಳಿಕ, ಹಲವು ವರ್ಷಗಳವರೆಗೆ ನಾನು ಮತ್ತು ಅಕ್ಕ ಪ್ರಿಯಾಂಕಾ ಬಹಳ ನೊಂದಿದ್ದೆವು, ಆಕ್ರೋಶಗೊಂಡಿದ್ದೆವು. ಆದರೆ, ಅನಂತರ ಅಪ್ಪನ ಹಂತಕರನ್ನು ನಾವಿಬ್ಬರೂ ಸಂಪೂರ್ಣವಾಗಿ ಕ್ಷಮಿಸಿದೆವು.’
ಸಿಂಗಾಪುರದಲ್ಲಿ ಐಐಎಂ ಹಳೆ ವಿದ್ಯಾರ್ಥಿಗಳ ಜತೆಗಿನ ಸಂವಾದದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾಜಿ ಪ್ರಧಾನಿ ರಾಜೀವ್ ಹತ್ಯೆ ಕುರಿತು ಆಡಿದ ಮಾತುಗಳಿವು. ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುತ್ತಾ ಭಾವುಕರಾದ ರಾಹುಲ್, “ನನ್ನ ಅಜ್ಜಿ ಮತ್ತು ಅಪ್ಪ ಸಾಯುತ್ತಾರೆಂದು ನಮಗೆ ಗೊತ್ತಿತ್ತು. ರಾಜಕೀಯದಲ್ಲಿ ನೀವು ಒಂದು ನಿಲುವಿಗೆ ಬದ್ಧರಾದರೆ, ಅಪಾಯ ಖಚಿತ ಎಂಬುದು ತಿಳಿದಿತ್ತು. ಅಜ್ಜಿ ಇಂದಿರಾ ಗಾಂಧಿ ಹತ್ಯೆಯಾದಾಗ ನನಗೆ 14 ವರ್ಷ. ನಾನಾಗ ಹಗಲು ಹೊತ್ತು ಅಜ್ಜಿಯ ಹಂತಕರ ಜೊತೆಗೆ ಬ್ಯಾಡ್‌ಮಿಂಟನ್ ಆಡುತ್ತಿದ್ದೆ. ಆದರೂ, ಅವರೇ ಅಜ್ಜಿಯನ್ನು ಕೊಲ್ಲುತ್ತಾರೆಂದು ಗೊತ್ತಿರಲಿಲ್ಲ,’ ಎಂದು ಹೇಳಿದರು.
ಹಿಂಸೆಗೆ ಯಾರೇ ಒಳಗಾಗಲಿ, ಅವನ ಹಿಂದೆ ಒಂದು ಕುಟುಂಬವಿದೆ, ನೋವಲ್ಲಿ ಅಳುವ ಮಕ್ಕಳಿದ್ದಾರೆ ಎಂಬುದು ನನ್ನ ಮನಸ್ಸಿಗೆ ಬರುತ್ತದೆ. ಹಾಗಾಗಿ, ನಾವು ಯಾರನ್ನೂ ದ್ವೇಷಿಸುವುದಿಲ್ಲ. ಎಲ್‌ಟಿಟಿಇ ಪ್ರಭಾಕರನ್ ಸತ್ತಾಗ ಟಿವಿ ನೋಡಿ ನನಗೆ ಎರಡು ರೀತಿಯ ಭಾವನೆಗಳು ಬಂದವು. ಯಾಕೆ ಚಾನೆಲ್‌ನವರು ಆ ವ್ಯಕ್ತಿಯನ್ನು ಅಷ್ಟೊಂದು ಅವಮಾನ ಮಾಡುತ್ತಿದ್ದಾರೆ ಎಂಬ ಯೋಚನೆ ಮೊದಲು ಬಂತು. ನಂತರ, ಆತನ ಮಕ್ಕಳು, ಕುಟುಂಬದ ಬಗ್ಗೆ ಯೋಚಿಸಿದಾಗ ದುಃಖವಾಯಿತು. ಏಕೆಂ ದರೆ, ತಂದೆಯನ್ನು ಕಳೆದುಕೊಂಡ ನೋವು ನನಗೆ ಗೊತ್ತಿತ್ತು ಎಂದರು ರಾಹುಲ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.