ಭಾರತ-ಜರ್ಮನಿ Made for each other: ಜರ್ಮನಿಯಲ್ಲಿ ಪ್ರಧಾನಿ ಮೋದಿ
Team Udayavani, May 30, 2017, 7:16 PM IST
ಬರ್ಲಿನ್: ಭಾರತ ಮತ್ತು ಜರ್ಮನಿ ಮೇಡ್ ಫಾರ್ ಈಚ್ ಅದರ್ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಬಣ್ಣಿಸಿದರು.
ಭಾರತ ಮತ್ತು ಜರ್ಮನಿ ಇಂದು ಎಂಟು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದವು.
“ಭಾರತ – ಜರ್ಮನಿ ಬಾಂಧವ್ಯ ಉಭಯ ರಾಷ್ಟ್ರಗಳಿಗೆ ಲಾಭದಾಯಕವಾಗಿರುವುದನ್ನು ನಾವು ಎದುರು ನೋಡುತ್ತಿದ್ದೇವೆ; ಅಂತೆಯೇ ಉಭಯತರ ನಡುವಿನ ಆರ್ಥಿಕ ಬಾಂಧವ್ಯದಲ್ಲಿ ಮಹತ್ತರ ಜಿಗಿತವನ್ನು ಸಾಧಿಸಲು ನಾವು ಬಯಸಿದ್ದೇವೆ’ ಎಂದು ಮೋದಿ, ಜರ್ಮನಿಯ ಚಾನ್ಸಲರ್ ಏಂಜೇಲಾ ಮರ್ಕೆಲ್ ಜತೆಗೆ ನಡೆಸಿಕೊಟ್ಟ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಭಾರತ – ಜರ್ಮನಿ ನಡುವಿನ ದ್ವಿಪಕ್ಷೀಯ ವ್ಯೂಹಾತ್ಮಕ ಬಾಂಧವ್ಯಗಳ ಮಾರ್ಗನಕ್ಷೆಯನ್ನು ರೂಪಿಸಿ ನಾಲ್ಕನೇ ಸುತ್ತಿನ ಅಂತರ-ಸರಕಾರಿ ಸಂವಹನ ನಡೆದ ಬಳಿಕ ಮೋದಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭಾರತವು ಮುಂದಿನ ತಲೆಮಾರಿನ ಮೂಲ ಸೌಕರ್ಯಕ್ಕೆ ವಿಶೇಷವಾದ ಉತ್ತೇಜನ ನೀಡುತ್ತಿದೆ ಮತ್ತು ಈ ಕ್ಷೇತ್ರದಲ್ಲಿ ನಾವು ಜರ್ಮನಿಯೊಂದಿಗೆ ವಿಸ್ತೃತ ನೆಲೆಯಲ್ಲಿ ಕೆಲಸ ಮಾಡಲು ಬಯಸಿದ್ದೇವೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.