ನಾವು ಅನ್ನ ಮಾಡುವ ಕ್ರಮವೇ ತಪ್ಪು: ಸಂಶೋಧನೆ
Team Udayavani, Feb 9, 2017, 3:45 AM IST
ಲಂಡನ್: ಅನ್ನ ಮಾಡಲು ಹೊರಟಿದ್ದೀರಿ. ಅಕ್ಕಿಯನ್ನು ಕುದಿಸಿಯೋ, ಹಬೆಯಲ್ಲಿ ಬೇಯಿಸಿಯೋ ಅನ್ನ ಮಾಡುತ್ತೀರಿ. ರಾಸಾಯನಿಕಗಳು, ಕೀಟಾಣುಗಳೆಲ್ಲ ಈ ಹಬೆಯಲ್ಲಿ ನಿರ್ಮೂಲನೆ ಆಗಿವೆ ಎಂಬ ನಂಬಿಕೆಯಿಂದ ಹೊಟ್ಟೆ ಭರ್ತಿ ಮಾಡಿಕೊಂಡು ತೇಗುತ್ತೀರಿ! ಆದರೆ, ಈ ನಂಬಿಕೆಯೇ ಸುಳ್ಳಂತೆ! ನಾವ್ಯಾರೂ ಸರಿಯಾದ ವಿಧಾನದಲ್ಲಿ ಅಕ್ಕಿಯನ್ನು ಅನ್ನ ಮಾಡುತ್ತಿಲ್ಲ ಎಂದು ಹೊಸ ಸಂಶೋಧನೆ ಹೇಳಿದೆ.
ಅಕ್ಕಿಯನ್ನು ನೀರಿನಲ್ಲಿ ಕುದಿಸಿದ ಮಾತ್ರಕ್ಕೆ, ಹಬೆಯಲ್ಲಿ ಬೇಯಿಸಿದ ಮಾತ್ರಕ್ಕೆ ಕೀಟಾಣುಗಳು ಸತ್ತವು ಎಂದು ತಿಳಿಯುವುದೇ ತಪ್ಪು. ಭತ್ತಕ್ಕೆ ಸಿಂಪಡಿಸಿದ ರಾಸಾಯನಿಕಗಳು, ಕೀಟನಾಶಕಗಳು ಅಕ್ಕಿಗೂ ಸೇರಿಕೊಳ್ಳುತ್ತವೆ. ಇವು ನೀರಿನಲ್ಲಿ ಕುದಿಸಿದಾಗ, ಬೇಯಿಸಿದಾಗ ನಿರ್ಮೂಲನೆ ಆಗುವುದಿಲ್ಲ ಎಂದು ಇಂಗ್ಲೆಂಡಿನ ಬೆಲ್‌ಫಾಸ್ಟ್‌ನ ಕ್ವೀನ್ಸ್ ವಿವಿಯ ಪ್ರಯೋಗ ಹೇಳಿದೆ.
ಹೀಗೆ ಬಳಸಿದ ಅನ್ನವೇ ಇಂದು ಕಿಬ್ಬೊಟ್ಟೆ ನೋವು, ಅತಿಸಾರ, ಹೃದ್ರೋಗ ಮತ್ತು ಚರ್ಮದ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಅನ್ನದಲ್ಲಿ ಕೀಟನಾಶಕಗಳ ಔಷಧಿಯಲ್ಲಿದ್ದ ಸಲ#ರ್, ಸತು ಸೇರಿದಂತೆ ಹಲವು ರಾಸಾಯನಿಕಗಳು ಹಾಗೆಯೇ ಇರುತ್ತವೆ ಎಂದು ತಂಡ ಹೇಳಿದೆ. ಇದರ ಬದಲಾಗಿ ಅಕ್ಕಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಅನ್ನ ಮಾಡಿದರೆ, ಶೇ.80ರಷ್ಟು ರಾಸಾಯನಿಕಗಳು ನಿರ್ಮೂಲನೆ ಆಗುತ್ತವೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Major security breach: ಬ್ರಿಟನ್‌ನ ಅರಮನೆ ಆವರಣಕ್ಕೇ ನುಗ್ಗಿ ವಾಹನ ಕದ್ದೊಯ್ದ ಕಳ್ಳರು!
G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್ ಚರ್ಚೆ
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
MUST WATCH
ಹೊಸ ಸೇರ್ಪಡೆ
Ajekar: ಎಣ್ಣೆಹೊಳೆ ಏತ ನೀರಾವರಿ ಪವರ್ ಕಟ್!
Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ
Hosanagara: ನಗರದ ಹೋಬಳಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.