ಭಾರತಕ್ಕೆ ತಾಲಿಬಾನ್ ಭೀತಿ
Team Udayavani, Aug 4, 2021, 7:40 AM IST
ವಿಶ್ವಸಂಸ್ಥೆ: ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಉಗ್ರರ ಮೇಲುಗೈ ಭಾರತಕ್ಕೆ ಕಳವಳಕಾರಿ ವಿಚಾರ. ಆ ದೇಶದಲ್ಲಿ ಉಗ್ರರ ಶಿಬಿರಗಳು ಹೆಚ್ಚಾಗುವುದೂ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿ ಟಿ.ಎಸ್. ತಿರುಮೂರ್ತಿ ಹೇಳಿದ್ದಾರೆ.
ಭಾರತವು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಹಾಲಿ ತಿಂಗಳ ಅಧ್ಯಕ್ಷ ಸ್ಥಾನ ವಹಿಸಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುದ್ಧಗ್ರಸ್ತ ರಾಷ್ಟ್ರದಲ್ಲಿ ಉಗ್ರರ ಶಿಬಿರಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಎಂದರು. ಅದರ ಪರಿಣಾಮ ನೇರವಾಗಿ ಭಾರತಕ್ಕೇ ತಟ್ಟಲಿದೆ. ಸ್ವತಂತ್ರ, ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಅಫ್ಘಾನಿಸ್ಥಾನ ಸ್ಥಾಪನೆ ಭಾರತಕ್ಕೆ ಆದ್ಯತೆಯ ವಿಚಾರ ಎಂದಿದ್ದಾರೆ.
ಎಲ್ಲ ರೀತಿಯ ನಿಯಮಗಳ ಉಲ್ಲಂಘನೆ ಆ ದೇಶದಲ್ಲಿ ನಿಲ್ಲಬೇಕು ಎಂದು ಪ್ರತಿಪಾದಿಸಿದ ತಿರುಮೂರ್ತಿ, ಮಹಿಳೆಯರು, ಮಕ್ಕಳನ್ನು ಮತ್ತು ಅಲ್ಪಸಂಖ್ಯಾಕರನ್ನು ಗುರಿಯಾಗಿರಿಸಿಕೊಂಡು ಕೊಲ್ಲಲಾಗುತ್ತಿದೆ. ಇಂಥ ಹತ್ಯೆಗಳು ನಿಲ್ಲಬೇಕು ಎಂದು ಅಂತಾರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದ್ದಾರೆ. 20 ವರ್ಷಗಳಲ್ಲಿ ಅಫ್ಘಾನ್ ಸಾಧಿಸಿರುವುದನ್ನು ಈಗ ಕಳೆದುಕೊಳ್ಳುವಂತಾ ಗಬಾರದು ಎಂದೂ ಹೇಳಿದ್ದಾರೆ.
129 ತಾಲಿಬಾನಿಗಳ ಸಾವು: ಮತ್ತೂಂದೆಡೆ, ತಾಲಿಬಾನ್ ಉಗ್ರರು ಹಾಗೂ ಅಫ್ಘಾನ್ ಸೈನಿಕರ ನಡುವಿನ ಹೋರಾಟ ಮುಂದುವರಿದಿದೆ. ಆ ದೇಶದ ರಕ್ಷಣ ಸಚಿವಾಲಯದ ಸರಣಿ ಟ್ವೀಟ್‌ಗಳ ಪ್ರಕಾರ, ವಿವಿಧ ಭಾಗಗಳಲ್ಲಿ 129 ಉಗ್ರರನ್ನು ಅಫ್ಘಾನ್ ಪಡೆ ಸಂಹರಿಸಿದೆ.
ಪಿಒಕೆ ತೆರವುಗೊಳಿಸಿ: ಪಾಕ್‌ಗೆ ಭಾರತ :
ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಿಂದ ಪಾಕಿ ಸ್ಥಾನ ಕೂಡಲೇ ತನ್ನ ನಿಯಂತ್ರಣ ವಾಪಸ್ ಪಡೆದುಕೊಳ್ಳಬೇಕು ಎಂದು ತಿರುಮೂರ್ತಿ ಪಾಕಿಸ್ಥಾನ ಸರಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಾತುಕತೆ-ಸಂಧಾನಕ್ಕೆ ಸೂಕ್ತ ವಾತಾವರಣ ಸೃಷ್ಟಿಸುವುದು ಇಮ್ರಾನ್ ಖಾನ್ ಸರಕಾರದ ಆದ್ಯತೆಯಾಗಬೇಕಾಗಿದೆ ಎಂದೂ ಹೇಳಿದ್ದಾರೆ. ಪಾಕಿಸ್ಥಾನದ ಪತ್ರಕರ್ತನೊಬ್ಬನ ಕಿಡಿಗೇಡಿ ಪ್ರಶ್ನೆಗೆ ಉತ್ತರಿಸಿದ ಅವರು, ” ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ’ ಎಂಬುದನ್ನು ಪುನರುಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Nagpur: ರಾಹುಲ್ ಕಾರ್ಯಕ್ರಮದಲ್ಲಿ ಖಾಲಿ ಸಂವಿಧಾನ ಪುಸ್ತಕ ಹಂಚಿಕೆ: ಬಿಜೆಪಿ ಆರೋಪ
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
MUST WATCH
ಹೊಸ ಸೇರ್ಪಡೆ
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Congress Gurantee: ಗೃಹಜ್ಯೋತಿ: 3 ತಿಂಗಳಲ್ಲಿ 85 ಸಾವಿರ ಗ್ರಾಹಕರಿಂದ “ರಿ-ಲಿಂಕ್’
High Court: ಮತದಾರರಿಗೆ ಅನುದಾನ ಆಮಿಷ; ನಡ್ಡಾ ವಿರುದ್ಧದ ಪ್ರಕರಣ ರದ್ದು
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.