ಪಾಕಿಸ್ಥಾನದ ವಿರುದ್ಧ ನೇರ ಹಣಾಹಣಿ: ಗಿಲ್‌ಗಿಟ್ ನಾಯಕರ ಎಚ್ಚರಿಕೆ
Team Udayavani, Nov 18, 2017, 11:23 AM IST
ಹೊಸದಿಲ್ಲಿ : ಪಾಕ್ ಆಡಳಿತೆ ಗಿಲ್‌ಗಿಟ್ ಬಾಲ್ಟಿಸ್ಥಾನದಲ್ಲಿ ಹೇರಿರುವ ಕಾನೂನು ಬಾಹಿರ ತೆರಿಗೆ ಕ್ರಮವನ್ನು ತೀವ್ರವಾಗಿ ಪ್ರತಿಭಟಿಸಿ ಬೀದಿಗಿಳಿದಿರುವ ಈ ಪ್ರಾಂತ್ಯದ ಜನರು ಮತ್ತು ಅವರ ನಾಯಕರು, ತಾವು ಪಾಕಿಸ್ಥಾನದೊಡನೆ ನೇರ ಹಣಾಹಣಿಗೆ ತೊಡಗುವುದಾಗಿ ಇಸ್ಲಾಮಾಬಾದ್‌ಗೆ ಎಚ್ಚರಿಕೆ ನೀಡಿದ್ದಾರೆ.
ಪಾಕ್ ಸರಕಾರ ಸ್ಕರ್ಡು, ಗಿಲ್‌ಗಿಟ್ ಬಾಲ್ಟಿಸ್ಥಾನ್ ಪ್ರಾಂತ್ಯದ ಮೇಲೆ ಹೇರಿರುವ ಅನುಚಿತ, ಅನಪೇಕ್ಷಿತ ಮತ್ತು ಕಾನೂನು ಬಾಹಿರ ತೆರಿಗೆ ಕ್ರಮವನ್ನು ವಿರೋಧಿಸಿ ಈ ಪ್ರಾಂತ್ಯದ ಭಾರೀ ಸಂಖ್ಯೆ ಜನರು, ಸಣ್ಣ ವ್ಯಾಪಾರಸ್ಥರು ಮತ್ತು ಉದ್ಯಮಿಗಳು ಇಂದು ಶನಿವಾರ ಬೀದಿಗಿಳಿದು ಪ್ರತಿಭಟನೆ, ಪ್ರದರ್ಶನ, ಮೆರವಣಿಗೆ ನಡೆಸಿ ಪಾಕ್ ವಿರೋಧಿ ಘೋಷಣೆಗಳನ್ನು ಕೂಗಿದರು.
#WATCH: Massive anti-Pakistan protests across Gilgit Baltistan against illegal taxation #Skardu pic.twitter.com/Zwei7MZaKO
— ANI (@ANI) November 18, 2017
ಪಾಕಿಸ್ಥಾನ ಈ ಕಾನೂನು ಬಾಹಿರ ತೆರಿಗೆ ಉಪಕ್ರಮವನ್ನು ನಿಶ್ಶರ್ತವಾಗಿ ಹಿಂದೆಗೆದುಕೊಳ್ಳುವ ವರೆಗೆ ನಾವಿನ್ನು ಇದೇ ರೀತಿಯ ತೀವ್ರತಮ ಪ್ರತಿಭಟನೆಯನ್ನು ನಡೆಸುತ್ತೇವೆ ಎಂದು ಉದ್ಯಮಿಯೋರ್ವರು ಹೇಳಿರುವುದನ್ನು ಎಎನ್‌ಐ ವರದಿ ಮಾಡಿದೆ.
ಕಳೆದ ಅ.22ರ,ದ ಪಿಓಕೆ ಮತ್ತು ಗಿಲ್‌ಗಿಟ್ ಬಾಲ್ಟಿಸ್ಥಾನ್ ಆದ್ಯಂತ ಜನರು ಬೃಹತ್ ಪಾಕ್ ವಿರೋಧಿ ಪ್ರತಿಭಟನೆ, ಪ್ರದರ್ಶನ, ಮೆರವಣಿಗೆ ನಡೆಸಿ ಕರಾಳ ದಿನವನ್ನು ಆಚರಿಸಿದ್ದರು.
ಈ ರೀತಿಯ ಪ್ರತಿಭಟನೆಗಳು ಮುಝಫರಾಬಾದ್, ರಾವಲ್‌ಕೋಟ್, ಕೋಟ್‌ಲಿ, ಗಿಲ್‌ಗಿಟ್ ಮತ್ತು ಹಜೀರಾ ಹಾಗೂ ಇನ್ನಿತರ ಪ್ರದೇಶಗಳಲ್ಲಿ ನಡೆದಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.