Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?
Team Udayavani, Nov 19, 2024, 1:41 PM IST
ಟೊರೆಂಟೊ: ಕಳೆದ ತಿಂಗಳು ಕೆನಡಾದ ಹ್ಯಾಲಿಫ್ಯಾಕ್ಸ್ ಪ್ರದೇಶದಲ್ಲಿರುವ ವಾಲ್‌ಮಾರ್ಟ್ ಸ್ಟೋರ್‌ನ ಬೇಕರಿ ವಿಭಾಗದ ವಾಕ್-ಇನ್ ಓವನ್‌ನಲ್ಲಿ ಶವವಾಗಿ ಪತ್ತೆಯಾದ ಭಾರತೀಯ ಮೂಲದ ಯುವತಿ ಗುರ್ಸಿಮ್ರಾನ್ ಕೌರ್ ಅವರ ಸಾವಿನ ಕುರಿತು ಕೆನಡಾ ಪೊಲೀಸರು ಸೋಮವಾರ ತಮ್ಮ ತನಿಖೆಯನ್ನು ಮುಕ್ತಾಯಗೊಳಿಸಿದ್ದಾರೆ.
ಸೋಮವಾರವಷ್ಟೇ ತನಿಖೆ ಮುಕ್ತಾಯಗೊಳಿಸಿದ ಹ್ಯಾಲಿಫ್ಯಾಕ್ಸ್ ಪೊಲೀಸರು ಗುರ್ಸಿಮ್ರಾನ್ ಕೌರ್ ಸಾವು ಸಹಜ ಸಾವು ಎಂದು ಹೇಳಿಕೊಂಡಿದ್ದಾರೆ ಅಲ್ಲದೆ ತನಿಖೆ ವೇಳೆ ಕೊಲೆ ನಡೆದಿರುವ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಇದೊಂದು ಸಹಜ ಸಾವು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಗುರ್ಸಿಮ್ರಾನ್ ಕೌರ್ ಕೆಲಸ ಮಾಡುತ್ತಿದ್ದ ಇತರ ಸಹದ್ಯೋಗಿಗಳನ್ನು ವಿಚಾರಣೆ ನಡೆಸಲಾಗಿದೆ ಅಲ್ಲದೆ ಆಕೆ ಕೆಲಸ ಮಾಡುವ ಪ್ರದೇಶದ ಎಲ್ಲ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗಿದೆ ಆದರೆ ಯಾವುದೇ ಕೊಲೆ ನಡೆಸಿರುವ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಇದೊಂದು ಸಹಜ ಸಾವು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
ಇತ್ತೀಚಿಗೆ ತನ್ನ ತಾಯಿಯ ಜೊತೆಗೆ ಕೆನಡಾಕ್ಕೆ ತೆರಳಿರುವ ಗುರ್ಸಿಮ್ರಾನ್ ಕೌರ್ ಅಲ್ಲಿನ ಹ್ಯಾಲಿಫ್ಯಾಕ್ಸ್ ಪ್ರದೇಶದಲ್ಲಿರುವ ವಾಲ್‌ಮಾರ್ಟ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು ಅಲ್ಲದೆ ತನ್ನ ತಾಯಿಯ ಜೊತೆಗೆ ವಾಸವಾಗಿದ್ದರು ಆದರೆ ಕಳೆದ ತಿಂಗಳು ಅಕ್ಟೋಬರ್ 23ರಂದು ವಾಲ್‌ಮಾರ್ಟ್‌ನಲ್ಲಿರುವ ಬೇಕರಿ ವಿಭಾಗದ ವಾಕ್-ಇನ್ ಓವನ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಈ ಕುರಿತು ಪ್ರಕರಣ ದಾಖಲಾಗಿತ್ತು.
Statement on Sudden Death Investigation pic.twitter.com/0IsyAfMkzX
— Halifax_Police (@HfxRegPolice) November 18, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Major security breach: ಬ್ರಿಟನ್‌ನ ಅರಮನೆ ಆವರಣಕ್ಕೇ ನುಗ್ಗಿ ವಾಹನ ಕದ್ದೊಯ್ದ ಕಳ್ಳರು!
G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್ ಚರ್ಚೆ
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.