![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Mar 2, 2022, 7:50 AM IST
ಉಕ್ರೇನ್‌ನ ಹಲವಾರು ಸ್ಥಳಗಳ ಮೇಲೆ ರಷ್ಯಾ ಸೇನೆ ವ್ಯಾಕ್ಯೂಮ್ ಬಾಂಬ್‌ಗಳನ್ನು ಪ್ರಯೋಗಿಸುತ್ತಿರುವುದರ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಸಾಂಪ್ರದಾಯಿಕ ಬಾಂಬ್‌ಗಳಿಗೆ ಹೋಲಿಸಿದರೆ, ಅತ್ಯಂತ ವಿಧ್ವಂಸಕಾರಿ ಎನಿಸಿರುವ ಈ ಬಾಂಬ್‌ಗಳ ಪ್ರಯೋಗವನ್ನು ಕೂಡಲೇ ನಿಲ್ಲಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಅನೇಕ ರಾಷ್ಟ್ರಗಳು ಹಾಗೂ ಅಮ್ನೆಸ್ಟಿ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಗಳು ಒತ್ತಾಯಿಸಿವೆ.
“ವ್ಯಾಕ್ಯೂಮ್ ಬಾಂಬ್’ ವ್ಯಾಖ್ಯಾನವೇನು?
ಇದು ಸಾಂಪ್ರದಾಯಿಕ ಶೈಲಿಯ ಬಾಂಬ್‌ಗಳಿಗಿಂತ ಭಿನ್ನ. ಹೆಚ್ಚು ಸಾವು ಉಂಟು ಮಾಡುವುದೇ ಈ ಬಾಂಬ್ ಉಪಯೋಗದ ಮುಖ್ಯ ಉದ್ದೇಶ. ಇದರಲ್ಲಿ ಎರಡು ರೀತಿಯ ಪದಾರ್ಥಗಳಿರುತ್ತವೆ. ಒಂದು – ವಾತಾವರಣದಲ್ಲಿ ಅತ್ಯುಷ್ಣ ಉಂಟು ಮಾಡುವ ಶಕ್ತಿಶಾಲಿ ಸ್ಫೋಟಕ. ಮತ್ತೊಂದು -ಏರೋಸೋಲ್‌ಗಳು. (ಸರಾಗವಾಗಿ ಗಾಳಿಯಲ್ಲಿ ಹರಿದಾಡುವಂಥ ರಾಸಾಯನಿಕ ಅಥವಾ ವಸ್ತುವಿನ ಸೂಕ್ಷ್ಮ ಕಣಗಳು)
ದುಷ್ಪರಿಣಾಮ ಹೇಗೆ?
ಈ ಬಾಂಬ್, ಒಂದು ಶೆಲ್ ಮಾದರಿಯಲ್ಲಿದ್ದು ಅದು ಮೂರು ವಿಭಾಗಗಳನ್ನು ಹೊಂದಿರುತ್ತದೆ. ಮೇಲು¤ದಿಯ ವಿಭಾಗದಲ್ಲಿ ಏರೋಸೋಲ್ ಹಾಗೂ ದ್ರವರೂಪದ ಇಂಧನವಿರುತ್ತದೆ. ಮಧ್ಯದ ವಿಭಾಗದಲ್ಲಿ ಶಕ್ತಿಶಾಲಿ ಸ್ಫೋಟಕವಿರುತ್ತದೆ. ಶೆಲ್‌ನ ಕೆಳಭಾಗದ ವಿಭಾಗದಲ್ಲಿ ಗ್ರೆನೇಡ್ ಹಾಗೂ ಪ್ಯಾರಾಚೂಟ್ ಇರುತ್ತದೆ.
ನಿರ್ದಿಷ್ಟ ಪ್ರದೇಶದಲ್ಲಿ ಈ ಬಾಂಬ್ ಶೆಲ್ ಸ್ಫೋಟಗೊಂಡಾಗ ಎರಡು ಬಾರಿ ಸ್ಫೋಟಗಳಾಗುತ್ತವೆ. ಮೊದಲ ಸ್ಫೋಟದ ವೇಳೆ ಶೆಲ್‌ನ ಮಧ್ಯಭಾಗ ಸ್ಫೋಟಗೊಂಡು, ಶೆಲ್‌ನ ಮೇಲ್ಭಾಗದಲ್ಲಿರುವ ಇಂಧನ ಹಾಗೂ ಏರೋಸೋಲ್ ಕಣಗಳು ಹೊರಬರುತ್ತವೆ. ದ್ರವರೂಪದ ಇಂಧನ, ಅನಿಲದ ಕಣಗಳಾಗಿ ಮಾರ್ಪಟ್ಟು ವಾತಾವರಣದಲ್ಲಿ ಹರಡುತ್ತದೆ. ಆ ಕಣಗಳೊಂದಿಗೆ ಏರೋಸೋಲ್ ಕಣಗಳೂ ಹರಡಿ ವಾತಾವರಣದಲ್ಲಿದ್ದ ಆಮ್ಲಜನಕವನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತವೆ.
ಒಂದೆಡೆ, ಪ್ರಾಣವಾಯು ಖಾಲಿಯಾಗಿ ಜನರು ಒದ್ದಾಡುತ್ತಿರುವಾಗ, ಇತ್ತ ಶೆಲ್‌ನ ಕೆಳ ಭಾಗದಲ್ಲಿರುವ ಗ್ರೆನೇಡ್‌ಗಳು ಸ್ಫೋಟಗೊಂಡು ಅದರ ಮೂಲಕ ಬರುವ ಜ್ವಾಲೆಯು ಆ ಪ್ರಾಂತ್ಯದಲ್ಲೆಲ್ಲಾ ಹರಡಿರುವ ಇಂಧನ ಕಣಗಳಿಗೆ ತಾಗಿ ಕ್ಷಣಾರ್ಧದಲ್ಲಿ ಇಡೀ ವಾತಾವರಣವೇ ಭಸ್ಮವಾಗುತ್ತದೆ.
ಇತರ ಹೆಸರುಗಳು:
– ಥರ್ಮೋಬೋರಿಕ್ ಬಾಂಬ್
– ಏರೋಸೋಲ್ ಬಾಂಬ್
ಸಾಂಪ್ರದಾಯಿಕ ಬಾಂಬ್ “ವರ್ಸಸ್’ ವ್ಯಾಕ್ಯೂಮ್ ಬಾಂಬ್
1. ಸ್ಫೋಟಕ ಮತ್ತು ಲೋಹದ ಚೂರುಗಳ ಬಳಕೆ- ಸ್ಫೋಟಕದ ಜೊತೆಗೆ ಏರೋಸೋಲ್‌ಗಳ ಬಳಕೆ
2. ಲೋಹದ ಚೂರುಗಳಿಂದ ಮಾತ್ರ ಜನರ ಸಾವು – ಏರೋಸೋಲ್ ಹಾಗೂ ಗರಿಷ್ಠ ಉಷ್ಣಾಂಶದ ಮೂಲದ ಹೆಚ್ಚಿನ ಜನರ ಸಾವು.
3. ನಿರ್ದಿಷ್ಟ ವಲಯದಲ್ಲಿ ವ್ಯಾಪ್ತಿ ಹಾಗೂ ಭೀಕರತೆ – ದುಷ್ಪರಿಣಾಮ, ನಿರ್ದಿಷ್ಟ ವಲಯವನ್ನೂ ದಾಟುವ ಸಾಧ್ಯತೆ
4. ತಡೆಗೋಡೆಗಳಿದ್ದರೆ ಮನುಷ್ಯರು ಬಚಾವ್ ಆಗುವ ಸಾಧ್ಯತೆ – ತಡೆಗೋಡೆಗಳಾಚೆಗೆ ಇರುವ ಜನರನ್ನೂ ಕೊಲ್ಲಬಹುದಾದ ಸಾಧನ
5. ಪ್ರತಿಯೊಂದು ದೇಶದಲ್ಲೂ ಕಾನೂನಾತ್ಮಕ ನಿಷೇಧ – ಕಾನೂನಾತ್ಮಕ ನಿಷೇಧದ ಬಗ್ಗೆ ಇನ್ನೂ ನಿರ್ಧಾರವಿಲ್ಲ.
150 -200 ಕಿ.ಮೀ.
ವ್ಯಾಕ್ಯೂಮ್ ಬಾಂಬ್ ದುಷ್ಪರಿಣಾಮದ ವಲಯ
—–
ಶೇ. 75
ಸಾಂಪ್ರದಾಯಿಕ ಬಾಂಬ್‌ಗಳಲ್ಲಿ ಅಳವಡಿಸುವ ಸ್ಫೋಟಕ ಪ್ರಮಾಣ
—–
ಶೇ. 100
ವ್ಯಾಕ್ಯೂಮ್ ಬಾಂಬ್‌ಗಳಲ್ಲಿ ಅಳವಡಿಸುವ ಸ್ಫೋಟಕದ ಪ್ರಮಾಣ
————-
40 ಟನ್
ಪ್ರತಿಯೊಂದು ವ್ಯಾಕ್ಯೂಮ್ ಬಾಂಬ್‌ನ ತೂಕ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.