ವಾಟ್ಸ್‌ಆ್ಯಪ್ ಸುರಕ್ಷಿತ ಆ್ಯಪ್ ಅಲ್ಲ!
Team Udayavani, Mar 17, 2017, 8:29 AM IST
ಲಂಡನ್: ವಾಟ್ಸ್‌ಆ್ಯಪ್ ಪ್ರಿಯರಿಗೆ ಆಘಾತ ಸುದ್ದಿ. ನೀವು ಕಳುಹಿಸಿದ ವಿಡಿಯೋ, ಕಡತ, ಮಾಹಿತಿಗಳನ್ನು ಆಧರಿಸಿ ಹ್ಯಾಕರ್ಸ್ ಯಾವುದೇ ಕ್ಷಣದಲ್ಲೂ ನಿಮ್ಮ ಅಥವಾ ಸ್ನೇಹಿತರನ್ನು ಸುಲಿಗೆ ಮಾಡಬಹುದು!
ಚೆಕ್ ಪಾಯಿಂಟ್ ಸಂಸ್ಥೆಯ ಸಂಶೋಧಕರು ಈ ಮಾಹಿತಿ ಹೊರಹಾಕಿದ್ದು, ಫೇಸ್‌ಬುಕ್ ಅಧೀನದಲ್ಲಿರುವ ವಾಟ್ಸ್‌ಆ್ಯಪ್‌ನಲ್ಲಿ ಸಾಕಷ್ಟು ನ್ಯೂನತೆಗಳನ್ನು ಪತ್ತೆ ಹಚ್ಚಿದೆ. ಗ್ರಾಹಕನ ಫೋಟೋ, ವಿಡಿಯೋ, ಪೋಸ್ಟ್‌ಗಳನ್ನು ಕದ್ದು, ಆತನ ಸ್ನೇಹಿತನ ಬಳಿ ಹಣ ಸುಲಿಗೆ ಮಾಡಿಕೊಳ್ಳುವುದು, ಇಲ್ಲವೇ ಇಬ್ಬರ ವೈಯಕ್ತಿಕ ಮಾಹಿತಿ, ಖಾತೆಯಿಂದ ಸುಲಭವಾಗಿ ಹಣ ಎಗರಿಸುವ ಕೃತ್ಯ ನಡೆಸಬಹುದು ಎಂದು ಎಚ್ಚರಿಸಿದೆ. ಅದರಲ್ಲೂ ವಾಟ್ಸ್‌ಆ್ಯಪ್ ವೆಬ್ ಬಳಸುವವರಿಗೆ ಈ ಆಘಾತ ಹೆಚ್ಚು ಎಂದಿದೆ. ಬ್ಯಾಂಕ್ ಖಾತೆಯ ವಿವರಗಳನ್ನು ಹಂಚಿಕೊಳ್ಳುವುದರಿಂದ ಹಾನಿಯೇ ಹೆಚ್ಚು ಎಂದಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಂಸ್ಥೆ , “ಚೆಕ್‌ಪಾಯಿಂಟ್‌ನ ವರದಿ ಆಧರಿಸಿ ಒಂದು ದಿನದೊಳಗೆ ಸುಧಾರಿತ ಮಾದರಿ ಬಿಡುಗಡೆ ಮಾಡುತ್ತೇವೆ’ ಎಂದಿದೆ. ಅಲ್ಲದೆ, ಟೆಲಿಗ್ರಾಮ್ ಕೂಡ ದೋಷಪೂರಿತ ಆ್ಯಪ್ ಎಂದು ಗುರುತಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
VijayHazareTrophy: ಪಡಿಕ್ಕಲ್ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ
Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ
Tulu Film: ʼಮಿಡಲ್ ಕ್ಲಾಸ್ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು
TEENAGE: ಹುಚ್ಚುಕೋಡಿ ಮನಸ್ಸಿಗೂ ಕಡಿವಾಣ ಬೇಕಿದೆ
Ashram: ಹಿರಿಯ ಜೀವಗಳ ಶುಭಾಶೀರ್ವಾದ -ಸಾರ್ಥಕ ಭಾವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.