ಕಿಮ್ ಉತ್ತರಾಧಿಕಾರಿ ಯಾರು?
Team Udayavani, Apr 23, 2020, 5:40 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಆರೋಗ್ಯದ ಬಗ್ಗೆ ಹಲವಾರು ಊಹಾಪೋಹಗಳು ಎದ್ದಿರುವುದರ ಜತೆಗೆ, ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಯೂ ಎದ್ದಿದೆ. ಕಿಮ್ ಜಾಂಗ್ ಉನ್‌ರವರ ಮಕ್ಕಳು ಇನ್ನೂ ಎಳೆಯರು. ಹಾಗಾಗಿ 70 ವರ್ಷಗಳ ಕಾಲ ಆ ರಾಷ್ಟ್ರವನ್ನು ಆಳಿದ ರಾಜಮನೆತನವೀಗ ಸಿಂಹಾಸನಕ್ಕೆ ಯೋಗ್ಯವಾಗಿರುವ ತನ್ನ ಸಂಬಂಧಿಗಳ ಕಡೆಗೆ ದೃಷ್ಟಿ ಹಾಯಿಸಿದೆ. ಅವರ ದೃಷ್ಟಿಯಲ್ಲಿ ಇರುವವರು ಇವರು.
ಕಿಮ್ ಯೋ ಜಾಂಗ್ (ತಂಗಿ)
ಇವರು ಕಿಮ್ ಜಾನ್ ಉನ್‌ನ ಖಾಸಾ ತಂಗಿ. ಈಗ ಉತ್ತರ ಕೊರಿಯಾದಲ್ಲಿ ಆಡಳಿತ ನಡೆಸುತ್ತಿರುವ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾದ ಪಾಲಿಟ್ ಬ್ಯೂರೋ ಸದಸ್ಯೆ. ದೊರೆ ಕಿಮ್ ಜಾನ್ ಉನ್‌ಗೆ ತೀರಾ ಆಪ್ತರು. ಆದರೆ, ಹೆಣ್ಣಿಗೆ ಪಟ್ಟ ಕಟ್ಟಲು ರಾಜಮನೆತನ ಒಪ್ಪುವುದೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಕಿಮ್ ಜಾಂಗ್ ಚೋಲ್ (ಸಹೋದರ)
ಕಿಮ್ ಜಾಂಗ್ ಜಾಂಗ್ ಉನ್ ಸಹೋದರರಲ್ಲಿ ಈಗ ಬದುಕುಳಿದಿರುವವರು ಇವರೊಬ್ಬರೇ. ಇವರಿಗೆ ರಾಜಕೀಯದಲ್ಲಿ ಅಷ್ಟಾಗಿ ಆಸಕ್ತಿಯಿಲ್ಲ. ಸಂಗೀತ ಪ್ರಿಯ, ಅದರಲ್ಲೂ ಗಿಟಾರ್ ಎಂದರೆ ತುಂಬಾನೇ ಇಷ್ಟ. ಸ್ವಿಜರ್ಲೆಂಡ್‌ನಲ್ಲಿ ಓದಿಕೊಂಡಿದ್ದಾರೆ. ಗಿಟಾರ್ ಬಿಟ್ಟರೆ ಇವರ ಅಮೆರಿಕನ್ ಬಾಸ್ಕೆಟ್ ಬಾಲ್ ವೀಕ್ಷಣೆ ಇವರ ಮತ್ತೂಂದು ಹವ್ಯಾಸ.
ದೊರೆಯ ಮಕ್ಕಳು ಚಿಕ್ಕವರು
ಮಕ್ಕಳ ಹೆಸರು ನಿಜವಾಗಿಯೂ ಯಾರಿಗೂ ಗೊತ್ತಿಲ್ಲ! ದಕ್ಷಿಣ ಕೊರಿಯಾದ ಮೂಲಗಳ ಪ್ರಕಾರ, ಮಗ 2010ರಲ್ಲಿ ಹುಟ್ಟಿದವನು. ಅದು ನಿಜವೇ ಆಗಿದ್ದರೆ ಈತನ ವಯಸ್ಸು ಈಗ 10 ವರ್ಷ ಅಷ್ಟೇ! ಮತ್ತೂಂದು ಮೂಲದ ಪ್ರಕಾರ, ಕಿಮ್ ಜಾನ್ ಉನ್‌ಗೆ ಹೆಣ್ಣು ಮಗಳೂ ಇದ್ದು, ಅದಿನ್ನೂ ಪುಟ್ಟ ಕೂಸು ಎಂದು ಹೇಳಲಾಗಿದೆ.
ಕಿಮ್ ಹನ್ ಸೋಲ್ (ಸೋದರ ಸಂಬಂಧಿ)
1995ರಲ್ಲಿ ಹುಟ್ಟಿರುವ ಸೋಲ್, ಕಿಮ್ ಜಾನ್ ಉನ್‌ನ ಹಿರಿಯಣ್ಣನ ಮಗ. ಅಷ್ಟಕ್ಕೂ ಆ ಹಿರಿಯಣ್ಣ ಖಾಸಾ ಅಣ್ಣ ಅಲ್ಲ. ಮಲ ತಾಯಿಯ ಮಗ. 2013ರಲ್ಲಿ ರಾಜ ಮನೆತನದ ವಿರುದ್ಧ ಟೀಕೆ ಮಾಡಿದ್ದಕ್ಕೆ ಗಡೀಪಾರು ಶಿಕ್ಷೆಗೆ ಗುರಿಯಾಗಿದ್ದ. 2017ರಲ್ಲಿ ಕೌಲಾಲಂಪುರ ವಿಮಾನ ನಿಲ್ದಾಣದಲ್ಲಿ ಕೊಲೆಯಾಗಿಬಿಟ್ಟ. ಈಗ, ಆತನ ಮಗ ಸೋಲ್ ಬೆಳೆದು ನಿಂತಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.