Temple Attack: ಕೆನಡಾದಲ್ಲಿ ಹಿಂದೂಗಳ ಮೇಲೆ ಖಲಿಸ್ಥಾನಿ ದರ್ಪ
ಖಲಿಸ್ಥಾನಿ ಧ್ವಜ ಹಿಡಿದು ದೇಗುಲದ ಮೇಲೆ ದಾಳಿ; ಭಕ್ತರನ್ನು ಥಳಿಸಿ ಅಟ್ಟಹಾಸ ಮೆರೆದ ದುರುಳರು
Team Udayavani, Nov 5, 2024, 6:45 AM IST
ಒಟ್ಟಾವಾ: ಕೆನಡಾದಲ್ಲಿ ಖಲಿಸ್ಥಾನಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರವಿವಾರ ಬ್ರಾಂಪ್ಟನ್ ನಗರದ “ಹಿಂದೂ ಸಭಾ ದೇಗುಲ’ದ ಮೇಲೆ ಖಲಿಸ್ಥಾನಿ ಬೆಂಬಲಿಗರು ದಾಳಿ ನಡೆಸಿ, ಹಿಂದೂ ಭಕ್ತರನ್ನು ಥಳಿಸಿದ್ದಾರೆ. ಈ ವೀಡಿಯೋ ಗಳು ವೈರಲ್ ಆಗಿದ್ದು, ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ದೇಗುಲದ ಮೇಲಿನ ದಾಳಿಯನ್ನು ಖಂಡಿಸಿ ಕೆನಡಾದ ಹಲವೆಡೆ ಸೋಮವಾರ ಹಿಂದೂಗಳು ಪ್ರತಿ ಭಟನೆ ನಡೆಸಿದ್ದಾರೆ.
ದೀಪಾವಳಿ ಹಿನ್ನೆಲೆಯಲ್ಲಿ ಹಿಂದೂ ಸಮುದಾಯವು ದೇಗುಲದಲ್ಲಿ ಸೇರಿತ್ತು. ಇದೇ ಸಂದರ್ಭ ಭಾರತೀಯ ರಾಯಭಾರ ಕಚೇರಿಯು ಭಾರ ತೀಯ ಸಮುದಾಯದ ಸದಸ್ಯರಿಗೆ ಅಗತ್ಯವಿರುವ ಆಡಳಿತ ಸೇವೆ ಒದಗಿಸಲು ದೇಗುಲದ ಆವರಣದಲ್ಲೇ ಶಿಬಿರವನ್ನು ಕೂಡ ಆಯೋಜಿಸಿತ್ತು.
ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ದೇಗುಲವನ್ನು ಪ್ರವೇಶಿಸುತ್ತಿದ್ದಂತೆಯೇ ದೇವಾಲಯದ ಹೊರಗೆ ಖಲಿಸ್ಥಾನ ಬೆಂಬಲಿಗರು ನೆರೆದು ಖಲಿಸ್ಥಾನಿ ಧ್ವಜ ಪ್ರದರ್ಶಿಸಿ ಪುಂಡಾಟ ಆರಂಭಿಸಿದರು. ಬಳಿಕ ದೇಗುಲದ ಒಳಗೆ ನುಗ್ಗಿ ಭಕ್ತರರನ್ನು ಥಳಿಸಿದರು. ಖಲಿಸ್ಥಾನಿಗಳು ದೇವಾಲಯದ ಒಳ ನುಗ್ಗಿ ದಾಳಿ ನಡೆಸಿರುವುದು, ಹಿಂದೂ ಭಕ್ತರ ಜತೆಗೆ ಘರ್ಷಣೆ, ಹೊಡೆದಾಟ ನಡೆಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಮತ್ತೂಂದೆಡೆ ಸರ್ರೆಯ ದೇಗುಲವೊಂದರಲ್ಲಿ ಸೇರಿದ್ದ ಭಕ್ತರ ಪೈಕಿ ಮೂವರರನ್ನು ಪೊಲೀಸರು ಏಕಾಏಕಿ ಬಂಧಿಸಿದ್ದಾರೆ. ಬಂಧನಕ್ಕೆ ಕಾರಣವನ್ನು ತಿಳಿಸದಿರುವುದು ಹಿಂದೂ ಸಮುದಾಯದಲ್ಲಿ ಆತಂಕ ಹೆಚ್ಚಿಸಿದೆ.
“ಬಾಟೇಂಗೆ ತೋ ಕಟೇಂಗೆ’
ದೇಗುಲದ ಮೇಲಿನ ಖಲಿಸ್ಥಾನಿ ದಾಳಿಯನ್ನು ಖಂಡಿಸಿ ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ. ದೇವಾಲಯದ ಮುಂದೆಯೇ ಮುಷ್ಕರ ನಡೆಸಿರುವ ಅವರು ಬಾಟೇಂಗೆ ತೋ ಕಟೇಂಗೆ (ನಾವು ದೂರವಾದರೆ ನಮ್ಮನ್ನು ತುಂಡರಿಸುತ್ತಾರೆ) ಎಂದು ಘೋಷಣೆಗಳನ್ನು ಮೊಳಗಿಸಿದ್ದಾರೆ. ಪ್ರತಿಭಟನೆಯ ವೀಡಿಯೋಗಳು ಕೂಡ ವೈರಲ್ ಆಗಿವೆ. ದಾಳಿಯನ್ನು ಖಂಡಿಸಿ ಪ್ರತಿ ಭ ಟಿ ಸು ತ್ತಿದ್ದ ಭಕ್ತರ ಮೇಲೆ ಕೆನಡಾದ ಪೊಲೀ ಸರು ದರ್ಪ ತೋರಿ ಲಾಠಿ ಪ್ರಹಾರ ನಡೆಸಿದ್ದು, ಈ ಬಗ್ಗೆಯೂ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಏನಿದು ಘಟನೆ?
-ನ. 3ರಂದು ಬ್ರಾಂಪ್ಟನ್ ದೇಗುಲ ದಲ್ಲಿ ದೀಪಾವಳಿ ಸಂಭ್ರಮ
-ಅದರಲ್ಲಿ ಹಿಂದೂಸಮುದಾಯದ ಹಲವರು ಭಾಗಿ
-ದೇಗುಲದಲ್ಲಿ ಭಾರತ ರಾಯಭಾರ ಕಚೇರಿ ಕಾರ್ಯಕ್ರಮ
-ದುರುಳರಿಂದ ಖಲಿಸ್ಥಾನಿಧ್ವಜ ಹಿಡಿದು ದೇಗುಲ ಪ್ರವೇಶಿಸಿ, ದರ್ಪ ಪ್ರದರ್ಶನ
-ಭಕ್ತರಿಗೆ ಥಳಿಸಿದ್ದರಿಂದ ಪರಸ್ಪರ ಹೊಡೆದಾಟ, ಕೆಲವರಿಗೆ ಗಾಯ
ಖಲಿಸ್ಥಾನಿಗಳನ್ನು ನಿಗ್ರಹಿಸಿ: ಕೆನಡಾಗೆ ಭಾರತ ಆಗ್ರಹ
ಹಿಂದೂ ಸಭಾ ದೇಗುಲದ ಮೇಲಿನ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಕೆನಡಾದಲ್ಲಿರುವ ಭಾರತೀಯರು ಮತ್ತು ಅಲ್ಲಿನ ನಾಗರಿಕರಿಗೆ ಸೇವೆಗಳನ್ನು ಒದಗಿಸಲು ನಮ್ಮ ರಾಯಭಾರಿಗಳು ಮುಂದಾದರೆ ಅವರಿಗೆ ಬೆದರಿಕೆ ಎದುರಾಗುತ್ತಿದೆ. ಹಿಂದೂ ಗಳನ್ನು ಗುರಿಯಾಗಿಸಿ ಖಲಿಸ್ಥಾನಿಗಳು ನಡೆಸು ತ್ತಿರುವ ದಾಳಿ ಮೇರೆ ಮೀರಿದೆ. ಕೆನಡಾ ಸರಕಾರ ಧಾರ್ಮಿಕ ಕೇಂದ್ರಗಳನ್ನು ರಕ್ಷಿಸ ಬೇಕು. ಜತೆಗೆ ದುಷ್ಕರ್ಮಿಗಳನ್ನು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ದೇಗುಲಗಳ ಮೇಲಿನ
ಉದ್ದೇಶ ಪೂರ್ವಕ ದಾಳಿಯನ್ನು ಖಂಡಿಸುತ್ತೇನೆ. ನಮ್ಮ ರಾಜತಾಂತ್ರಿಕ ರನ್ನು ಬೆದರಿಸಲು ಇಂಥ ಹೇಡಿ ಕೃತ್ಯ ಗಳನ್ನು ಎಸಗಲಾಗಿದೆ. ಇದಕ್ಕೆಲ್ಲ ಜಗ್ಗುವು ದಿಲ್ಲ. ಈ ಪ್ರಯತ್ನಗಳಿಂದ ಭಾರತದ ಸಂಕಲ್ಪವನ್ನು ಬದಲಿಸಲಾಗದು.
-ನರೇಂದ್ರ ಮೋದಿ, ಪ್ರಧಾನಿ
ದೇಗುಲದ ಮೇಲೆ
ನಡೆದ ದಾಳಿ, ಹಿಂಸಾಚಾರ ಸರಿಯಲ್ಲ. ಕೆನಡಾದಲ್ಲಿ ಪ್ರತಿ ಯೊಬ್ಬರಿಗೂ ತಮ್ಮ ಧರ್ಮ , ನಂಬಿಕೆಯನ್ನು ಮುಕ್ತವಾಗಿ, ಸುರಕ್ಷಿತವಾಗಿ ಆಚರಿಸುವ ಹಕ್ಕಿದೆ.
-ಜಸ್ಟಿನ್ ಟ್ರಾಡೋ,
ಕೆನಡಾ ಪ್ರಧಾನಿ
ಖಲಿಸ್ಥಾನಿಗಳ ದಾಳಿಯಿಂದ ಭಕ್ತರು ಭಯಭೀತರಾಗಿದ್ದಾರೆ. ಹಿಂದೂಗಳಿಗೆ ರಕ್ಷಣೆ ಕೊಡುವಲ್ಲಿ ಪೊಲೀಸರು ವಿಫಲರಾಗಿದ್ದು, ಈ ವರೆಗೆ ದಾಳಿ ನಡೆಸಿದ ಒಬ್ಬ ಖಲಿಸ್ಥಾನಿಯನ್ನೂ ಬಂಧಿಸಲಾಗಿಲ್ಲ.
– ನಯನ್ ಬ್ರಹ್ಮಭಟ್, ಅರ್ಚಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.