ಬೃಹತ್ ಗಜ ಮರುಸೃಷ್ಟಿ ಯತ್ನ
Team Udayavani, Sep 15, 2021, 7:20 AM IST
ವಾಷಿಂಗ್ಟನ್: ಸುಮಾರು 11 ಸಾವಿರ ವರ್ಷಗಳ ಹಿಂದೆ, ಭೂಮಿಯಲ್ಲಿ ಜೀವಿಸುತ್ತಿದ್ದ ದೈತ್ಯಾಕಾರದ ಆನೆಗಳಾದ “ಮ್ಯಾಮತ್’ಗಳ ಮರುಸೃಷ್ಟಿಗೆ ಪ್ರಯತ್ನಗಳು ನಡೆದಿವೆ. ಅವುಗಳ ಜೀವನ ಕ್ರಮ ಹೇಗಿತ್ತು ಎಂಬುದನ್ನು ಈಗಿನ ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ, ಆನೆಗಳನ್ನು ಮರುಸೃಷ್ಟಿ ಮಾಡಲು ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಪ್ರಾಧ್ಯಾಪಕ ಜಾರ್ಜ್ ಚರ್ಚ್ ನೇತೃತ್ವದ ತಂಡ ಮುಂದಾಗಿದೆ. ಈ ಯೋಜನೆಗಾಗಿ, ಸಾರ್ವಜನಿಕ ದೇಣಿಗೆಯ ಮೂಲಕ 110 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ.
ಮರುಸೃಷ್ಟಿ ಹೇಗೆ?: ಏಷ್ಯಾದ ಆನೆಗಳ ಚರ್ಮದಿಂದ ಜೀವಾಣುಗಳನ್ನು ಸಂಗ್ರಹ ಮಾಡಿ, ಅದನ್ನು ಈಗಾಗಲೇ ಸಂಸ್ಕರಣ ಘಟಕಗಳಲ್ಲಿ ಸಂಗ್ರಹವಾಗಿರುವ ಮ್ಯಾಮತ್‌ನ ಡಿಎನ್‌ಎ ಜತೆಗೆ ಸಂಯೋಜಿಸಲಾಗುತ್ತದೆ. ಮ್ಯಾಮತ್ ಹೋಲುವ ಇತರ ಆನೆಗಳ ಸಂತತಿಯಿಂದ ಸಂಗ್ರಹಿಸಲಾದ ಜೀವಾಣುಗಳಿಂದ ಮ್ಯಾಮತ್‌ನ ಕೂದಲು, ಕೊಬ್ಬು ತುಂಬಿದ ಚರ್ಮಗಳನ್ನು ಸೃಷ್ಟಿಸುವ ಜಿನೋಮ್‌ಗಳನ್ನು ಸಂಗ್ರಹಿಸಿ, ಈ ಮೊದಲೇ ಸಂಯೋಜನೆಗೊಂಡ ಎರಡು ಡಿಎನ್‌ಎಗಳ ಮಿಶ್ರಣಕ್ಕೆ ಕಾಲಾನುಕ್ರಮಕ್ಕೆ ಸೇರಿಸುತ್ತಾ, ಮ್ಯಾಮತ್‌ನ ಭ್ರೂಣವನ್ನು ಸೃಷ್ಟಿಸಿ, ಅದನ್ನು ಹೆಣ್ಣಾನೆಯೊಂದರ ಗರ್ಭಾಶಯದಲ್ಲಿ ಸೇರಿಸಿ ಅಲ್ಲಿ ಅದನ್ನು ಬೆಳೆಸಲಾಗುತ್ತದೆ. ಆ ಮೂಲಕ ಹೊಸ ಮ್ಯಾಮತ್ ಮರಿಯಾನೆಯನ್ನು ಸೃಷ್ಟಿಸುವ ಉದ್ದೇಶ ವಿಜ್ಞಾನಿಗಳದ್ದು.
ಆರು ವರ್ಷದಲ್ಲಿ ಹೊಸ ಸಂತತಿ!: ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಪ್ರಯೋಗಗಳಲ್ಲಿ ಯಾವುದೇ ಅಡೆತಡೆ ಸೃಷ್ಟಿಯಾಗದೇ ಇದ್ದರೆ ಮುಂದಿನ ಆರು ವರ್ಷಗಳಲ್ಲಿ ನಿರ್ದಿಷ್ಟ ಸಂಖ್ಯೆಯಲ್ಲಿ ಮ್ಯಾಮತ್ ಮರಿಯಾನೆಗಳು ಈ ಭೂಮಿ ಮೇಲೆ ಜನ್ಮಿಸಲಿವೆ ಎಂಬ ಆಶಾಭಾವನೆಯನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಅನಂತರ ಅದನ್ನು ಪ್ರಯೋಗಾಲಯದಲ್ಲೇ ನಿರ್ದಿಷ್ಟ ಹಂತದವರೆಗೆ ಬೆಳೆಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀಲಿ ಚಿತ್ರ ತಾರೆಗೆ ಲಂಚ: ಅಧಿಕಾರಕ್ಕೆ ಮೊದಲೇ ಟ್ರಂಪ್ ಕೇಸಿನ ತೀರ್ಪು
House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!
HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.