ಮಾನವಕುಲಕ್ಕೆ ಕಂಟಕವಾಗಲಿದೆಯೇ ಶಿಥಿಲ ಅಣೆಕಟ್ಟುಗಳು?
Team Udayavani, Jan 25, 2021, 6:50 AM IST
ನ್ಯೂಯಾರ್ಕ್: “ಇನ್ನು ನಾಲ್ಕು ವರ್ಷಗಳಲ್ಲಿ ಭಾರತದ ಸಾವಿರಕ್ಕೂ ಅಧಿಕ ಅಣೆಕಟ್ಟುಗಳಿಗೆ 50 ವರ್ಷಗಳು ತುಂಬಲಿದ್ದು, ಇವುಗಳೇನಾದರೂ ಕುಸಿದುಬಿದ್ದರೆ ಭಾರೀ ಪ್ರಮಾಣದ ಜೀವಹಾನಿ ಖಚಿತ.’
ಇಂಥದ್ದೊಂದು ಎಚ್ಚರಿಕೆಯ ಸಂದೇಶ ನೀಡಿರುವುದು ವಿಶ್ವಸಂಸ್ಥೆ. ಜಗತ್ತಿನಾದ್ಯಂತ ಬಾಳಿಕೆಯ ಅವಧಿ ಪೂರ್ಣಗೊಳ್ಳುತ್ತಿರುವ ಸಾವಿರಾರು ಅಣೆಕಟ್ಟುಗಳಿದ್ದು, ಇವುಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವಿಶ್ವಸಂಸ್ಥೆಯ ವಿವಿಯೊಂದರ ವರದಿ ಹೇಳಿದೆ.
ಜಗತ್ತಿನಲ್ಲಿರುವ 58,700 ಬೃಹತ್ ಅಣೆಕಟ್ಟುಗಳ ಪೈಕಿ ಬಹುತೇಕ ಡ್ಯಾಂಗಳನ್ನು 1930ರಿಂದ 1970ರ ಅವಧಿಯಲ್ಲಿ ನಿರ್ಮಿಸಲಾಗಿದ್ದು, ಇವುಗಳ ಬಾಳಿಕೆ 50-100 ವರ್ಷಗಳು. 20ನೇ ಶತಮಾನದಲ್ಲಿ ಸಾವಿರಾರು ಡ್ಯಾಂಗಳು ನಿರ್ಮಾಣವಾಗಿದ್ದು, 2050ರ ವೇಳೆಗೆ ಇವುಗಳಿಗೇನಾದರೂ ಹಾನಿಯಾದರೆ, ಲಕ್ಷಾಂತರ ಜನರು ಜಲಸಮಾಧಿಯಾಗುವ ಆತಂಕವಿದೆ ಎಂದಿದೆ ವರದಿ.
ಅಮೆರಿಕ, ಫ್ರಾನ್ಸ್, ಕೆನಡಾ, ಭಾರತ, ಜಪಾನ್, ಝಾಂಬಿಯಾ, ಜಿಂಬಾಬ್ವೆಯಲ್ಲಿನ ಅಣೆಕಟ್ಟುಗಳನ್ನು ಅಧ್ಯಯನ ಮಾಡಿ ಈ ವರದಿ ತಯಾರಿಸಲಾಗಿದೆ. ಜಲಸಂಗ್ರಹ ಮೂಲಸೌಕರ್ಯಗಳು ಶಿಥಿಲಗೊಳ್ಳುತ್ತಿರುವ ಬಗ್ಗೆ ದೇಶಗಳ ಗಮನ ಸೆಳೆಯುವುದು ಮತ್ತು ಈ ಜಲ ಕಂಟಕವನ್ನು ಸಮರ್ಥವಾಗಿ ನಿಭಾಯಿಸಲು ಪ್ರೇರೇಪಿಸುವುದೇ ಈ ವರದಿಯ ಉದ್ದೇಶ ಎಂದು ಹೇಳಲಾಗಿದೆ.
ಶಿಥಿಲಗೊಳ್ಳುತ್ತಿರುವ ಲಕ್ಷಣಗಳು :
50 ವರ್ಷಗಳು ತುಂಬುತ್ತಿರುವಂತೆ ಕಾಂಕ್ರೀಟ್ ಅಣೆಕಟ್ಟುಗಳು ಶಿಥಿಲಗೊಳ್ಳುವ ಲಕ್ಷಣಗಳನ್ನು ತೋರಿಸುತ್ತಿರುತ್ತವೆ. ಅಂದರೆ ಆಗಾಗ್ಗೆ ಅಣೆಕಟ್ಟುಗಳಲ್ಲಿ ಸಮಸ್ಯೆ ತಲೆದೋರುವುದು, ರಿಪೇರಿ ಹಾಗೂ ನಿರ್ವಹಣೆಗೆ ಬರುವುದು, ಜಲಾಶಯದ ಸಂಚಯದಲ್ಲಿ ಹೆಚ್ಚಳ, ಡ್ಯಾಂನ ಕಾರ್ಯಕ್ಷಮತೆ ಮತ್ತು ಪರಿಣಾಮಕತ್ವ ಕುಗ್ಗುವುದು ಇತ್ಯಾದಿಗಳು “ಅಣೆಕಟ್ಟಿಗೆ ವಯಸ್ಸಾಗಿದೆ ಎಂಬುದರ ಸೂಚಕವಾಗಿವೆ.
ಮುಲ್ಲಪೆರಿಯಾರ್ ಆತಂಕ :
ಸುಮಾರು 100 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಕೇರಳದ ಮುಲ್ಲಪೆರಿಯಾರ್ ಅಣೆಕಟ್ಟು ಏನಾದರೂ ಕುಸಿದುಬಿದ್ದರೆ, 35 ಲಕ್ಷಕ್ಕೂ ಅಧಿಕ ಮಂದಿಯ ಜೀವಕ್ಕೆ ಅಪಾಯ ಖಚಿತ ಎಂದು ವರದಿ ಎಚ್ಚರಿಸಿದೆ. ಈ ಅಣೆಕಟ್ಟು ಸಕ್ರಿಯ ಭೂಕಂಪನ ಪ್ರದೇಶದಲ್ಲಿದ್ದು, ಈಗಾಗಲೇ ರಚನಾತ್ಮಕ ಹಾನಿಯನ್ನೂ ಎದುರಿಸುತ್ತಿದೆ. ಅಲ್ಲದೆ ಅದರ ನಿರ್ವಹಣೆಯ ವಿಚಾರದಲ್ಲಿ ತಮಿಳುನಾಡು ಮತ್ತು ಕೇರಳದ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ ಎಂದೂ ಉಲ್ಲೇಖೀಸಲಾಗಿದೆ.
ಜಗತ್ತಿನಲ್ಲಿರುವ ಬೃಹತ್ ಅಣೆಕಟ್ಟುಗಳ ಸಂಖ್ಯೆ : 58,700
ಚೀನ, ಭಾರತ, ಜಪಾನ್ ದ.ಕೊರಿಯಾ ಡ್ಯಾಂಗಳು : 32,716
2050ರಲ್ಲಿ 50 ವರ್ಷ ತುಂಬುವಂಥದ್ದು : 4,250
ಈ ಪೈಕಿ ಅತ್ಯಧಿಕ ಅಣೆಕಟ್ಟುಗಳಿರುವ ದೇಶಗಳು : 4
2025ರಲ್ಲಿ 50 ವರ್ಷ ತುಂಬುವ ಭಾರತದ ಬೃಹತ್ ಡ್ಯಾಂಗಳು : 1,115
2050ರಲ್ಲಿ 150 ವರ್ಷಗಳಷ್ಟು ಹಳೆಯದಾಗುವ ಡ್ಯಾಂಗಳು : 6
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.