ಭಾರತೀಯರಿಗೆ ಟ್ರಂಪ್ ಸಂಕಷ್ಟ
Team Udayavani, Sep 23, 2018, 6:00 AM IST
ವಾಷಿಂಗ್ಟನ್: ಅಮೆರಿಕದಲ್ಲಿ ಇರುವ ಭಾರತೀಯರಿಗೆ ಟ್ರಂಪ್ ಆಡಳಿತದಿಂದ ಹೊಸ ತಲೆನೋವು ಶುರುವಾಗಿದೆ. ಇನ್ನು 3 ತಿಂಗಳ ಒಳಗಾಗಿ ಎಚ್4 ವೀಸಾದಾರರ ಉದ್ಯೋಗದ ಪರವಾನಗಿಯನ್ನು ರದ್ದುಗೊಳಿ ಸು ವುದಾಗಿ ಶನಿವಾರ ಇಲ್ಲಿನ ಫೆಡರಲ್ ಕೋರ್ಟ್ಗೆ ಟ್ರಂಪ್ ಆಡಳಿತ ಮಾಹಿತಿ ನೀಡಿದೆ. ಇದರಿಂದಾಗಿ, ಎಚ್4 ವೀಸಾ ಪಡೆದು ಅಮೆರಿಕದಲ್ಲಿ ಉದ್ಯೋಗ ಮಾಡು ತ್ತಿದ್ದ ಸಾವಿರಾರು ಭಾರತೀಯ ಮಹಿಳೆಯರು ಸಂಕಷ್ಟಕ್ಕೆ ಸಿಲುಕುವ ಭೀತಿಯಲ್ಲಿದ್ದಾರೆ.
ಹಿಂದಿನ ಒಬಾಮ ಆಡಳಿತವು ಎಚ್1ಬಿ ವೀಸಾದಾರರ ಕುಟುಂಬ ಸದಸ್ಯರಿಗೂ ಅಮೆರಿಕದಲ್ಲಿ ಉದ್ಯೋಗ ಕೈಗೊಳ್ಳಲು ಅನುಮತಿ ನೀಡಿ ಎಚ್4 ವೀಸಾ ನೀಡುವ ನಿಯಮವನ್ನು ಜಾರಿ ಮಾಡಿತ್ತು. ಈ ನೀತಿಯಿಂದ ನಮ್ಮ ಉದ್ಯೋಗ ನಷ್ಟವಾಗು ತ್ತಿದೆ ಎಂದು ಆರೋಪಿಸಿ “ಸೇವ್ ಜಾಬ್ಸ್ ಯುಎಸ್ಎ’ ಎಂಬ ಸಂಸ್ಥೆಯು ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿನ ವಿಚಾರಣೆ ವೇಳೆ, ಟ್ರಂಪ್ ಆಡಳಿತವು 3 ತಿಂಗಳೊಳಗೆ ಹಿಂದಿನ ಅಧ್ಯಕ್ಷ ಒಬಾಮ ಆಡಳಿತದ ನೀತಿಯನ್ನು ರದ್ದು ಮಾಡುವುದಾಗಿ ನುಡಿದಿದೆ.
ಏನಿದು ಎಚ್4 ವೀಸಾ?: ಎಚ್-1ಬಿ ವೀಸಾ ಪಡೆದು ಅಮೆರಿಕದಲ್ಲಿ ಉದ್ಯೋಗ ದಲ್ಲಿರುವ ವ್ಯಕ್ತಿಗಳ ಕುಟುಂಬ ಸದಸ್ಯರು(ಪತ್ನಿ ಮತ್ತು 21 ವರ್ಷದೊಳಗಿನ ಮಕ್ಕಳು) ಹೊಂದುವ ವೀಸಾವನ್ನು ಎಚ್4 ವೀಸಾ ಎನ್ನುತ್ತಾರೆ. ಅಮೆರಿಕದ ನಾಗರಿಕತ್ವ ಮತ್ತು ವಲಸೆ ಸೇವೆ(ಯುಎಸ್ಸಿಐಎಸ್) ಈ ವೀಸಾವನ್ನು ವಿತರಿಸುತ್ತದೆ. ಎಚ್4 ವೀಸಾ ಹೊಂದಿದವರು ಅಮೆರಿಕದಲ್ಲಿ ಉದ್ಯೋಗ ಮಾಡಲು ಅರ್ಹರಾಗಿರುತ್ತಾರೆ. ಹಿಂದಿನ ಒಬಾಮ ಆಡಳಿತವು ಈ ಸೌಲಭ್ಯ ಕಲ್ಪಿಸಿದ್ದು, ಭಾರತೀಯ-ಅಮೆರಿಕನ್ ಮಹಿಳೆಯರೇ ಇದರ ಪ್ರಮುಖ ಫಲಾನುಭವಿಗಳಾಗಿದ್ದಾರೆ. 2017, ಡಿ.15ರವರೆಗಿನ ಮಾಹಿತಿ ಪ್ರಕಾರ, ಎಚ್-4 ವೀಸಾದಾರರಿಗೆ ಉದ್ಯೋಗ ದೃಢೀಕರಣ ಕೋರಿ ಸಲ್ಲಿಕೆಯಾಗಿದ್ದ 1,26,853 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ.ಅಂದರೆ ಲಕ್ಷಾಂತರ ಮಂದಿ ಉದ್ಯೋಗ ಕಳೆದು ಕೊಳ್ಳುವ ಭೀತಿಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.