ಜಪಾನ್ ಮಾಜಿ ಪಿಎಂ ಅಬೆ ಅಂತ್ಯಕ್ರಿಯೆಗೆ ರಾಜತಾಂತ್ರಿಕ ಸ್ಪರ್ಶ
ಸೆ.27ರ ಕಾರ್ಯಕ್ರಮದಲ್ಲಿ ಮೋದಿ ಸೇರಿದಂತೆ ಪ್ರಮುಖರು ಭಾಗಿ; 55 ವರ್ಷಗಳ ಬಳಿಕ ನಡೆಯಲಿದೆ ಸರಕಾರಿ ಗೌರವದ ಅಂತ್ಯಕ್ರಿಯೆ
Team Udayavani, Sep 25, 2022, 7:15 AM IST
ಟೋಕಿಯೊ: ಜಪಾನ್‌ನ ಮಾಜಿ ಪ್ರಧಾನಿ ದಿ| ಶಿಂಜೋ ಅಬೆ ಅವರ ಅಂತ್ಯಕ್ರಿಯೆ ಸೆ.27ರಂದು ಟೋಕಿಯೊದಲ್ಲಿ ನಡೆಯಲಿದೆ. ಚುನಾವಣ ಪ್ರಚಾರದಲ್ಲಿ ನಿರತರಾಗಿದ್ದ ಅವರನ್ನು ಕಿಡಿಗೇಡಿಯೊಬ್ಬ ಜು.8ರಂದು ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಅವರ ಅಂತ್ಯಕ್ರಿಯೆ ಬರೋಬ್ಬರಿ ಎರಡೂವರೆ ತಿಂಗಳ ಬಳಿಕ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾರೀ ಭದ್ರತೆಯನ್ನೂ ಕೈಗೊಳ್ಳಲಾಗುತ್ತಿದೆ.
ಅದಕ್ಕಾಗಿ ಜಪಾನ್ ಸರಕಾರ ಭಾರೀ ವ್ಯವಸ್ಥೆಗಳನ್ನು ಮಾಡುತ್ತಿದೆ. “ಫುನರಲ್ ಡಿಪ್ಲೊಮೆಸಿ’ (ಅಂತ್ಯಕ್ರಿಯೆ ರಾಜತಾಂತ್ರಿಕತೆ) ಎಂಬ ಹೆಸರಿನಲ್ಲಿ ಜಗತ್ತಿನ 217 ರಾಷ್ಟ್ರಗಳ 700 ಮಂದಿ ಸರಕಾರಿ ಮುಖ್ಯಸ್ಥರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಅದಕ್ಕೆ ಅನುಸಾರವಾಗಿ ಭಾರತ ಪ್ರಧಾನಿ ನರೇಂದ್ರ ಮೋದಿ, ಅಮೆ ರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಆಸ್ಟ್ರೇಲಿಯಾ ಪ್ರಧಾನಿ ಆ್ಯಂಥೋನಿ ಅಲ್ಬನೀಸ್ ಸಹಿತ ಅನೇಕ ಜಾಗತಿಕ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಿ ಕಾರ್ಯಕ್ರಮ ಏನು?
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಸೆ.27ರಂದು ಟೋಕಿಯೊಗೆ ತೆರಳಲಿದ್ದಾರೆ. ಅಬೆ ಅವರ ಅಂತ್ಯಕ್ರಿಯೆಯ ಬಳಿಕ ಅವರ ಪತ್ನಿಯನ್ನು ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ. ಜಗತ್ತಿನ ಇತರ ರಾಷ್ಟ್ರಗಳ ಮುಖ್ಯಸ್ಥರು ಕೂಡ ಅಬೆ ಅವರ ಪತ್ನಿಯವರನ್ನು ಭೇಟಿ ಮಾಡಲಿದ್ದಾರೆ.
ಇದಾದ ಬಳಿಕ ಜಪಾನ್ ಪ್ರಧಾನಿ ಫುÂಮಿಯೋ ಕಿಶಿದಾ ಅವರ ಜತೆಗೆ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ದಿ| ಶಿಂಜೋ ಅಬೆ ಅವರ ಜತೆಗೆ ಪ್ರಧಾನಿ ನರೇಂದ್ರ ಮೋದಿಯವರು ವೈಯಕ್ತಿಕ ಬಾಂಧವ್ಯವನ್ನು ಹೊಂದಿದ್ದರು. ಜಪಾನ್ ತಂತ್ರಜ್ಞಾನದಲ್ಲಿ ದೇಶದಲ್ಲಿ ಬುಲೆಟ್ ಟ್ರೈನ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಎರಡನೇ ಪ್ರಧಾನಿ
2ನೇ ಪ್ರಪಂಚ ಮಹಾಯುದ್ಧ ಕಳೆದು ಪ್ರಧಾನಿಯಾಗಿದ್ದ ಶಿಗೆರೂ ಯೋಶಿದಾ ನಿಧನದ ಬಳಿಕ ಅವರಿಗೆ ಸರಕಾರಿ ಗೌರವದ ಅಂತ್ಯಕ್ರಿಯೆ ನಡೆಸಲಾಗಿದ್ದು. 1954ರ ಬಳಿಕ ಇದೇ ಮೊದಲ ಬಾರಿಗೆ ಜಪಾನ್‌ನಲ್ಲಿ ಅಬೆ ಅವರಿಗೆ ಸರಕಾರಿ ಗೌರವದ ಮೂಲಕ ಅಂತ್ಯ ಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ.
94 ಕೋಟಿ ವೆಚ್ಚ
ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಕ್ರಿಯೆಗೆ 94 ಕೋಟಿ ರೂ. ವೆಚ್ಚ (1.7ಬಿಲಿಯನ್ ಯೆನ್) ಆಗುವ ಸಾಧ್ಯತೆ ಇದೆ. ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ಅವರ ಅಂತ್ಯಕ್ರಿಯೆಗೆ 74 ಕೋಟಿ ರೂ. ವೆಚ್ಚವಾಗಿದೆ. ಹೀಗಾಗಿ ಅದನ್ನು ಮೀರಿಸುವ ರೀತಿಯಲ್ಲಿ ವೆಚ್ಚ ಮಾಡುವುದಕ್ಕೆ ಜಪಾನ್‌ನ ನಾಗರಿಕರಿಂದಲೇ ಕಟು ಟೀಕೆ ವ್ಯಕ್ತವಾಗಿದೆ. ಆ ದೇಶದ ಕೆಲವೊಂದು ಸ್ಥಳೀಯ ಆಡಳಿತ ಸಂಸ್ಥೆಗಳು ಕೂಡ ಸರಕಾರದ ನಿರ್ಣಯವನ್ನು ಪ್ರಶ್ನೆ ಮಾಡಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.