ಪದಚ್ಯುತಿಯ ಹಂತದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್?
ಐಎಸ್‌ಐ ಮುಖ್ಯಸ್ಥರ ನೇಮಕ ತಂದ ಕಗ್ಗಂಟು; ನ.20ರ ಒಳಗಾಗಿ ನಿರ್ಧಾರವಾಗಲಿದೆ ಖಾನ್ ರಾಜಕೀಯ ಭವಿಷ್ಯ
Team Udayavani, Nov 15, 2021, 10:00 PM IST
ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ರನ್ನು ಕಿತ್ತೂಗೆಯಲು ಅಲ್ಲಿನ ಸೇನೆ ಸಿದ್ಧತೆ ನಡೆಸುತ್ತಿದೆಯೇ? ಭಾರತದಲ್ಲಿ ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ (ಐಎಸ್‌ಐ)ನ ಮುಖಸ್ಥರ ನೇಮಕ ವಿಚಾರವೇ ಸೇನೆ ಮತ್ತು ಸರ್ಕಾರದ ನಡುವಿನ ಭಿನ್ನಾಭಿಪ್ರಾಯದ ಕಂದಕವನ್ನು ಮತ್ತಷ್ಟು ಹೆಚ್ಚಿಸಿದೆ.
ಲೆ.ಜ.ನದೀಮ್ ಅಂಜುಮ್ ಅವರು ಐಎಸ್‌ಐ ಮುಖ್ಯಸ್ಥರಾಗಿ ನ.20ರಂದು ಅಧಿಕಾರ ಸ್ವೀಕರಿಸಲಿರುವಂತೆಯೇ ಹಾಲಿ ಮುಖ್ಯಸ್ಥ ಲೆ.ಜ.ಫೈಜ್ ಹಮೀದ್ ಅವರನ್ನೇ ಮುಂದುವರಿಸಲು ಪ್ರಧಾನಿ ಇಮ್ರಾನ್ ಖಾನ್ ಒಲವು ಹೊಂದಿದ್ದಾರೆ. ಈ ವಿಚಾರವೇ ಸೇನಾ ಮುಖ್ಯಸ್ಥ ಜ.ಖಮರ್ ಜಾವೇದ್ ಬಾಜ್ವಾ ಮತ್ತು ಪ್ರಧಾನಿ ಖಾನ್ ನಡುವಿನ ವಿರಸಕ್ಕೆ ಕಾರಣ. ಪ್ರಧಾನಿ ಹಠಹಿಡಿದದ್ದೇ ಆದಲ್ಲಿ ಸರ್ಕಾರದ ಆಡಳಿತವನ್ನು ಸೇನೆ ಕೈವಶ ಮಾಡಿಕೊಳ್ಳುವುದು ಖಚಿತ ಎಂದು ಹೇಳಲಾಗುತ್ತಿದೆ.
ಹೀಗಾಗಿ, ನ.20ರ ಒಳಗಾಗಿ ಇಮ್ರಾನ್ ಖಾನ್ ಹುದ್ದೆಗೆ ರಾಜೀನಾಮೆ ನೀಡುವುದು ಮತ್ತು ನಾಯಕತ್ವ ಬದಲಾವಣೆಯಾಗಬೇಕು ಎಂದು ಸಂಸತ್‌ನಲ್ಲಿ ಪ್ರತಿಪಕ್ಷಗಳು ಬೇಡಿಕೆ ಮುಂದಿಡಲಿವೆ. ಜತೆಗೆ ಆಡಳಿತಾರೂಢ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಜತೆಗಿನ ಮೈತ್ರಿಗೆ ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್ (ಎಂಕ್ಯೂಎಂ), ಪಾಕಿಸ್ತಾನ ಮುಸ್ಲಿಂ ಲೀಗ್-ಕ್ಯೂ (ಪಿಎಂಎಲ್-ಕ್ಯೂ) ಅಂತ್ಯ ಹಾಡಲಿವೆ ಎನ್ನ ಲಾಗಿದೆ. ಹೀಗಾಗಿ ಖಾನ್ ಹುದ್ದೆ ತೊರೆಯುವುದು ಬಹುತೇಕ ನಿಚ್ಚಳವಾಗಲಿದೆ.
ಇದನ್ನೂ ಓದಿ:ವಾಕಿಂಗ್ ಹೋಗುತ್ತಿದ್ದಾಗ ನಟಿಗೆ ಹಲ್ಲೆ; ಮೊಬೈಲ್ ಕಿತ್ತುಕೊಂಡು ಪರಾರಿ
ಪ್ರಧಾನಿ ಹುದ್ದೆಗೆ ಯಾರು?
ಇಮ್ರಾನ್ ಖಾನ್ ಅವರೇ ಹುದ್ದೆಗೆ ರಾಜೀನಾಮೆ ನೀಡಿದಲ್ಲಿ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ನ ಪರ್ವೇಝ್ ಖಟ್ಟಕ್, ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಜ್ ಪಕ್ಷದ ಶಾಭಾಝ್ ಷರೀಫ್ ಪ್ರಧಾನಿ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆ ಇದೆ.
ಕಠಿಣ ಪರಿಸ್ಥಿತಿ:
ಹದಗೆಟ್ಟ ಅರ್ಥ ವ್ಯವಸ್ಥೆ, ಪಾಕಿಸ್ತಾನದಲ್ಲಿ ಬಲಪಂಥೀಯ ಎಂದು ಗುರುತಿಸಿಕೊಂಡ ತೆಹ್ರೀಕ್-ಇ- ಲಬೈಕ್ ಪಾಕಿಸ್ತಾನ್ ಎಂಬ ಪಕ್ಷದ ಕಾರ್ಯಕರ್ತರ ಸತತ ಪ್ರತಿಭಟನೆ ಮತ್ತು ಘರ್ಷಣೆಯಿಂದ ಹಲವರು ಅಸುನೀಗಿದ ಪ್ರಕರಣಗಳು ಕೂಡ ಇಮ್ರಾನ್ ಅವರಿಗೆ ಪದತ್ಯಾಗದ ಅನಿವಾರ್ಯತೆ ಮೂಡಿಸಿ ದೆ. ವಿಶೇಷವಾಗಿ ಐಎಸ್‌ಐಗೆ ಮುಖ್ಯಸ್ಥರನ್ನು ನೇಮಿಸುವ ವಿಚಾರ ಕೈಮೀರಿ ಹೋಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.