ದುಡ್ಡಿಲ್ಲದೆ ಸ್ಥಳೀಯ ಚುನಾವಣೆ ಮುಂದೂಡಿದ ಶ್ರೀಲಂಕಾ
Team Udayavani, Feb 22, 2023, 8:10 AM IST
ಕೊಲೊಂಬೊ : ಚುನಾವಣೆಗೆ ಬೇಕಿರುವ ಬ್ಯಾಲೆಟ್ ಪೇಪರ್ ಮುದ್ರಿಸಲು ಹಣವಿಲ್ಲದ ಕಾರಣ, ಆರ್ಥಿಕ ದಿವಾಳಿಯಾಗಿರುವ ಶ್ರೀಲಂಕಾ ಮುಂದಿನ ತಿಂಗಳು ನಡೆಯಬೇಕಿದ್ದ ಸ್ಥಳೀಯ ಚುನಾವಣೆಯನ್ನೇ ಮುಂದೂಡಿದೆ. ಈ ಕುರಿತು ಲಂಕಾ ಸುಪ್ರೀಂಕೋರ್ಟ್‌ಗೆ ಚುನಾವಣೆ ಆಯೋಗ ಮಾಹಿತಿ ನೀಡಿದೆ.
ಬ್ಯಾಲೆಟ್ ಪೇಪರ್ ಮುದ್ರಣ, ಇಂಧನ ಹಾಗೂ ಭದ್ರತಾ ವ್ಯವಸ್ಥೆಗೆ ಬೇಕಿರುವ ಹಣವನ್ನು ನೀಡಲು ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲವೆಂದು ವಿತ್ತ ಇಲಾಖೆ ತಿಳಿಸಿದೆ.
ಈ ಹಿನ್ನೆಲೆ ಚುನಾವಣೆಯನ್ನು ಮುಂದೂಡಲಾಗುತ್ತಿದೆ ಎಂದಿದೆ. ಕಳೆದ ವರ್ಷ ರಾಷ್ಟ್ರದ ಆರ್ಥಿಕ ದಿವಾಳಿತನದ ವಿರುದ್ಧ ಜನರು ನಡೆಸಿದ ಭಾರೀ ಪ್ರತಿಭಟನೆಗಳ ಬಳಿಕ ರಾನಿಲ್ ವಿಕ್ರಮಸಿಂಘೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮಾ.9ರಂದು ನಡೆಯಬೇಕಿದ್ದ ಚುನಾವಣೆ ಅವರಿಗೆ ಬೆಂಬಲ ನೀಡುವಲ್ಲಿ ಮಹತ್ವ ಪಡೆದುಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.