ವಿಶ್ವಸಂಸ್ಥೆಗಿದೆ ವಿಶ್ವಾಸದ ಕೊರತೆ
Team Udayavani, Sep 23, 2020, 6:25 AM IST
75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ
ಎಲ್ಲ ರಾಷ್ಟ್ರಗಳಿಗೆ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶ ಇರಲಿ
“ವಸುದೈವ ಕುಟುಂಬಕಂ’ ತಣ್ತೀವೇ ಜಗತ್ತಿಗೆ ಆಧಾರ
ವಿಶ್ವಸಂಸ್ಥೆ: ಬದಲಾಗಿರುವ ರಾಜಕೀಯ ಪರಿಸರಕ್ಕೆ ತಕ್ಕಂತೆ ವಿಶ್ವಸಂಸ್ಥೆಯಲ್ಲಿ ಬದಲಾವಣೆ ಆಗಿಲ್ಲ. ವಿಶ್ವಸಂಸ್ಥೆಯಲ್ಲಿ ಸಮಗ್ರ ಸುಧಾರಣೆ ಆಗದ ಕಾರಣ ಅದು ವಿಶ್ವಾಸದ ಕೊರತೆ ಎದುರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ವಿಶ್ವಸಂಸ್ಥೆ 75 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ಆಯೋ ಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತ ನಾಡಿದ ಪ್ರಧಾನಿ ಮೋದಿ, ವಿಶ್ವಸಂಸ್ಥೆಯಲ್ಲಿ ಸುಧಾರಣೆ ಯಾಗ ಬೇಕಾದ್ದು ಅತ್ಯಗತ್ಯ ಎಂಬುದನ್ನು ಈ ಮೂಲಕ ಸಾರಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯತ್ವವನ್ನು ಭಾರತ ಮುಂದಿನ ವರ್ಷದಿಂದ ಪಡೆದು ಕೊಳ್ಳಲಿದೆ. ಹೀಗಾಗಿ, ಪ್ರಧಾನಿಯವರ ಅಭಿಪ್ರಾಯ ದೂರಗಾಮಿ ಪರಿಣಾಮಗಳನ್ನು ಬೀರಲಿದೆ.
“ಹಳೆಯ ವ್ಯವಸ್ಥೆಯನ್ನು ಇರಿಸಿಕೊಂಡು ಹೊಸ ಸವಾಲುಗಳ ವಿರುದ್ಧ ಹೋರಾಟ ನಡೆಸಲು ಸಾಧ್ಯವಿಲ್ಲ. ವಿಶ್ವಸಂಸ್ಥೆ ಕೂಡ ಜಗತ್ತಿನಲ್ಲಿ ಬದಲಾಗಿರುವ ವ್ಯವಸ್ಥೆಗೆ ತೆರೆದು ಕೊಂಡಿಲ್ಲ. ಹೀಗಾಗಿ ಅದು ವಿಶ್ವಾಸದ ಕೊರತೆ ಎದುರಿಸುತ್ತಿದೆ. ಈ ವ್ಯವಸ್ಥೆಯಲ್ಲಿ ಎಲ್ಲ ರಾಷ್ಟ್ರಗಳಿಗೂ ಅಭಿಪ್ರಾಯ ವ್ಯಕ್ತಪಡಿಸುವಂಥ ವ್ಯವಸ್ಥೆ ಇರ ಬೇಕು. ಈ ಮೂಲಕ ಮಾನವ ಕಲ್ಯಾಣದ ಅಭಿವೃದ್ಧಿಯನ್ನು ಹೆಚ್ಚಿನ ರೀತಿ ಯಲ್ಲಿ ಸಾಧಿಸುವಂತೆ ಇರಬೇಕು’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
75 ವರ್ಷಗಳ ಹಿಂದೆ ಜಗತ್ತಿನಲ್ಲಿ ಯುದ್ಧ ಮತ್ತು ಅದರಿಂದ ಉಂಟಾದ ಪ್ರಭಾವ ತಗ್ಗಿಸುವ ನಿಟ್ಟಿನಲ್ಲಿ ಹೊಸ ಸಂಸ್ಥೆ ಉದಯ ವಾದಾಗ ಹೊಸ ನಿರೀಕ್ಷೆ ಸೃಷ್ಟಿಯಾಗಿತ್ತು. ಮಾನವ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಾನವರ ಕಲ್ಯಾಣ ಕ್ಕಾಗಿಯೇ ಹೊಸ ಸಂಸ್ಥೆ ಶುರುವಾಗಿತ್ತು ಎಂದಿದ್ದಾರೆ. ಭಾರತ ಪ್ರತಿಪಾದಿಸುವ “ವಸು ದೈವ ಕುಟುಂಬಕಂ’ ಎಂಬ ತತ್ವದ ಆಧಾರದಲ್ಲಿಯೇ ವಿಶ್ವ ಸಂಸ್ಥೆಯ ಹೊಸ ಆಶಯಗಳನ್ನು ಹೊಂದು ವಲ್ಲಿ ಭಾರತ ಯಾವತ್ತೂ ಬೆಂಬಲ ವ್ಯಕ್ತಪಡಿಸುತ್ತದೆ ಎಂದೂ ಮೋದಿ ಹೇಳಿದ್ದಾರೆ. ಎಲ್ಲಾ ರಾಷ್ಟ್ರಗಳಿಗೆ ಅಭಿಪ್ರಾಯ ವ್ಯಕ್ತ ಪಡಿಸುವ ಅವಕಾಶ ಸಿಗಬೇಕು ಎಂಬ ವಾದ ವನ್ನು ಭಾರತ ಯಾವತ್ತೂ ಸಮರ್ಥಿಸಿ ಕೊಳ್ಳುತ್ತದೆ ಎಂದರು. ಜಗತ್ತಿನ ಸ್ಥಿರತೆಗೆ ವಿಶ್ವಸಂಸ್ಥೆ ಕೊಡುಗೆ ಗಳನ್ನು ನೀಡಿದೆ ಯಾದರೂ, ಮೂಲ ಆಶಯಗಳನ್ನು ಸಾಧಿಸುವಲ್ಲಿ ಇನ್ನೂ ಯಶಸ್ವಿಯಾಗಿಲ್ಲ ಎಂದು ಬೊಟ್ಟು ಮಾಡಿ ತೋರಿಸಿದರು ಪ್ರಧಾನಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.