ಗರ್ಭಿಣಿಯೆಂದು ತಿಳಿದ 48 ಗಂಟೆಗಳ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ 23 ರ ಯುವತಿ!
Team Udayavani, Oct 18, 2022, 7:57 PM IST
ವಾಷಿಂಗ್ಟನ್: ಕಳೆದ ಕೆಲ ದಿನಗಳ ಹಿಂದೆ ಆ್ಯಪಲ್ ವಾಚ್ ವೊಂದು ಮಹಿಳೆ ಗರ್ಭಿಣಿಯಾಗಿದ್ದಾಳೆ ಎನ್ನವುದನ್ನು ಆಕೆಯ ಆರೋಗ್ಯದಲ್ಲಿನ ಏರುಪೇರನ್ನು ಗಮನಿಸಿ, ಮಹಿಳೆಗೆ ವೈದ್ಯರು ಸೂಚಿಸುವ ಮೊದಲೇ ಸೂಚಿಸಿತ್ತು. ಇಂಥದ್ದೇ ಮತ್ತೊಂದು ಘಟನೆ ಅಮೆರಿಕಾದಲ್ಲಿ ನಡೆದಿದೆ.
ಅಮೆರಿಕಾದ ಒಮಾಹಾ ಪ್ರದೇಶದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ 23 ವರ್ಷದ ಯುವತಿ ಪೇಟನ್ ಸ್ಟೋವರ್ ಅವರಿಗೆ ತಲೆ ಸುತ್ತು, ದೇಹದಲ್ಲಿ ಆಯಾಸ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಇದು ಕೆಲಸದ ಒತ್ತಡದಿಂದ ಇರಬಹುದೆಂದು ಅಂದುಕೊಳ್ಳುತ್ತಾರೆ. ಆದರೆ ಕಾಲುಗಳು ಬಾತಲು, ದೇಹದಲ್ಲಿ ಬದಲಾವಣೆ ಆಗುತ್ತಿರುವುದು ಮನಕಂಡ ಪೇಟನ್ ಸ್ಟೋವರ್ ವೈದ್ಯರ ಬಳಿ ತೆರಳುತ್ತಾರೆ. ಅಲ್ಲಿ ವೈದ್ಯರು ನೀವು ತಾಯಿ ಆಗುತ್ತಿದ್ದೀರಿ, ನಿಮ್ಮ ಮಗು ಶೀಘ್ರದಲ್ಲಿ ಬರುತ್ತದೆ ಎಂದು ಹೇಳುತ್ತಾರೆ. ಇದನ್ನು ಕೇಳಿ ಪೇಟನ್ ಸ್ಟೋವರ್ ಮತ್ತು ಅವರ ಗೆಳೆಯನಿಗೆ ಅಚ್ಚರಿ ಆಗುತ್ತದೆ. ಏಕಂದರೆ ಪೇಟನ್ ಗೆ ತಮ್ಮ ಹೊಟ್ಟೆಯಲ್ಲಿ ಮಗುವಿದೆ ಎನ್ನುವುದು ಗೊತ್ತಾಗುವುದೇ ಆವಾಗಲೇ.
ಮುಂದುವರೆದು ಪರೀಕ್ಷೆ ಮಾಡಿಸುತ್ತಾರೆ, ಅಲ್ಟ್ರಾಸೌಂಡ್ ಮಾಡಿಸುತ್ತಾರೆ ಅಲ್ಲಿಯೂ ಪೇಟನ್ ಸ್ಟೋವರ್ ಗರ್ಭಿಣಿ ಆಗಿದ್ದಾರೆ ಎನ್ನುವುದು ಖಚಿತವಾಗುತ್ತದೆ.
ಸಮಯ ಕಳೆಯುತ್ತಿದ್ದಂತೆ, ಪೇಟನ್ ಕಿಡ್ನಿ ಹಾಗೂ ಶ್ವಾಸಕೋಶಗಳು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ವೈದ್ಯರು, ನೀವು ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು ಎಂದು ಎಮರ್ಜೆನ್ಸಿ ವಾರ್ಡ್ ಗೆ ಕರೆದುಕೊಂಡು ಹೋಗುತ್ತಾರೆ. ಕೆಲ ಕ್ಷಣದ ಬಳಿಕ ಪೇಟನ್ ಗಂಡು ಮಗುವಿಗೆ ಜನ್ಮ ನೀಡುತ್ತಾರೆ.
ಪೇಟನ್ ಮಗುವಿಗೆ ಕಾಶ್ ಎಂದು ಹೆಸರಿಟ್ಟಿದ್ದಾರೆ.
ಪೇಟನ್ ಅವರಿಗೆ ಪ್ರೀ ಎಕ್ಲಾಂಪ್ಸಿಯಾ ಇತ್ತು. (ಗರ್ಭಾವಸ್ಥೆಯಲ್ಲಿ ಸಂಭವಿಸಬಹುದಾದ ಅಧಿಕ ರಕ್ತದೊತ್ತಡ) ಮಗು 10 ವಾರಗಳಕ್ಕಿಂತ ಮುಂಚಿತವಾಗಿ ಜನಿಸಿದೆ ಎಂದು ವೈದ್ಯರು ಹೇಳಿದ್ದಾರೆ.
ಮಗು 1 ಕಿಲೋ, 800 ಗ್ರಾಂ ಇದೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ವರದಿ ತಿಳಿಸಿದೆ.
ABD’de Peyton Stover ve Travis Koesters çiftinin hayatı 48 saatte değişti. Stover, hamile olduğunu öğrendikten iki gün sonra doğum yaptı. pic.twitter.com/hlwkmGXbZ3
— DarkWeb Haber (@Darkwebhaber) October 12, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.