ಆರ್ಡರ್ ಮಾಡಿದ್ದು 1.5 ಲಕ್ಷ ಬೆಲೆಯ ಐಫೋನ್ 13 ಪ್ರೋ ಮ್ಯಾಕ್ಸ್, ಮನೆಗೆ ಬಂದಿದ್ದು ಸೋಪು!
Team Udayavani, Feb 8, 2022, 10:13 AM IST
ಲಂಡನ್: ಇ-ಕಾಮರ್ಸ್ ವೆಬ್ ಸೈಟ್ ಗಳ ಮೂಲಕ ದುಬಾರಿ ವಸ್ತುಗಳನ್ನು ಆರ್ಡರ್ ಮಾಡಿದಾಗ ಬಹಳಷ್ಟು ಜನರು ಬೇರೆ ಕಡಿಮೆ ಬೆಲೆಯ ಉತ್ಪನ್ನವನ್ನು ಪಡೆದ ಘಟನೆಗಳು ಈ ಹಿಂದೆಯೂ ನಡೆದಿದೆ. ಈ ರೀತಿಯ ಘಟನೆಗಳು ಅಪರೂಪವಾಗಿ ಸಂಭವಿಸಿದರೂ, ಆನ್ ಲೈನ್‌ನಲ್ಲಿ ಉತ್ಪನ್ನಗಳನ್ನು ಆರ್ಡರ್ ಮಾಡುವಲ್ಲಿ ವ್ಯಕ್ತಿಯು ಆತ್ಮವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.
ಯುಕೆ ಮೂಲದ ಮಹಿಳೆಯೊಬ್ಬರು ಆ್ಯಪಲ್ ನ ಅತ್ಯಂತ ದುಬಾರಿ ಸ್ಮಾರ್ಟ್‌ಫೋನನ್ನು ಆರ್ಡರ್ ಮಾಡಿದ್ದರು ಆದರೆ ಮನೆ ಬಾಗಿಲಿಗೆ ಬಂದಿದ್ದು ಸಾಬೂನು!
ಕೆಲವು ತಿಂಗಳ ಹಿಂದೆ, ಕೇರಳದ ವ್ಯಕ್ತಿಯೊಬ್ಬರು ಆ್ಯಪಲ್ ಐಫೋನ್ 12 ಆರ್ಡರ್ ಮಾಡಿದ್ದರು, ಆದರೆ ಬದಲಿಗೆ ಪಾತ್ರೆ ತೊಳೆಯುವ ಸೋಪ್ ಮತ್ತು 5 ರೂಪಾಯಿ ನಾಣ್ಯವು ಅವರಿಗೆ ತಲುಪಿತ್ತು. ಯುಕೆಯಲ್ಲಿ ಮಹಿಳೆಯೊಬ್ಬರಿಗೆ ಇದೇ ರೀತಿ ಐಫೋನ್ ಬದಲು ಸೋಪು ಮನೆಗೆ ಬಂದಿದೆ.
ಇದನ್ನೂ ಓದಿ:4 ತಿಂಗಳಲ್ಲಿ 4 ಸಾವಿರ ಮಕ್ಕಳಿಗೆ ಅಪೌಷ್ಟಿಕತೆ; ಉತ್ತರ ಕರ್ನಾಟಕದಲ್ಲಿ ಹೆಚ್ಚಿದೆ ಸಮಸ್ಯೆ
ಖೌಲಾ ಲಫಾಯ್ಲಿ ಎಂಬ ಮಹಿಳೆ ಸ್ಥಳೀಯ ಇ-ಕಾಮರ್ಸ್ ಸೈಟ್ ಮೂಲಕ ಐಫೋನ್ 13 ಪ್ರೋ ಮ್ಯಾಕ್ಸ್ ಆರ್ಡರ್ ಮಾಡಿದ್ದರು. ಕೆಲವು ದಿನಗಳು ಕಾದ ನಂತರ ಮನೆ ಬಾಗಿಲಿಗೆ ಒಂದು ಬಾಟಲ್ ಹ್ಯಾಂಡ್ ವಾಶ್ ಸೋಪ್ ತಲುಪಿದೆ.
ಆ್ಯಪಲ್ ಇನ್ಸೈಡರ್ ನ ವರದಿಯ ಪ್ರಕಾರ, ವಿತರಣೆಯ ಸಮಯದಲ್ಲಿ ವಂಚನೆ ಸಂಭವಿಸಿರಬಹುದು. ಮೊಬೈಲ್ ನ್ನು 36 ತಿಂಗಳ ಒಪ್ಪಂದದ ಮೇಲೆ ಸ್ಕೈ ಮೊಬೈಲ್ ಮೂಲಕ ಖರೀದಿಸಲಾಗಿದೆ. ಐಫೋನ್ ನ 13 ಪ್ರೋ ಮ್ಯಾಕ್ಸ್ ನ ಬೆಲೆ ಸುಮಾರು ಸರಿಸುಮಾರು 1.5 ಲಕ್ಷ ರೂ ಆಗಿದೆ. ಆದರೆ ಮಹಿಳೆ ಇದರ ಸಂಪೂರ್ಣ ಮೊತ್ತವನ್ನು ಪಾವತಿ ಮಾಡಿಲ್ಲ. ಭಾರತದಲ್ಲಿ ಇದೇ ಸ್ಮಾರ್ಟ್ ಫೋನ್ ಗೆ ಭಾರತದಲ್ಲಿ 1,29,900 ರೂ. ಬೆಲೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.