ಮಹಿಳೆ ಕೈಯಲ್ಲಿ ವಿಶ್ವದ ಅತ್ಯಂತ ವಿಷಕಾರಿ ಜೀವಿ. ನಡೆದಿದ್ದೇನು?
Team Udayavani, Mar 25, 2021, 8:40 PM IST
ಇಂಡೋನೇಷ್ಯಾ: ಪ್ರವಾಸಿ ಮಹಿಳೆಯೊಬ್ಬಳು ತನಗರಿವಿಲ್ಲದೆ ವಿಶ್ವದ ಅತೀ ವಿಷಕಾರಿ ಜೀವಿಗಳಲ್ಲಿ ಒಂದನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದು ಅದೃಷ್ಟ ವಶಾತ್ ಅಪಾಯದಿಂದ ಪಾರಾಗಿರುವ ಘಟನೆ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ನಡೆದಿದೆ.
ಈ ವಿಷಕಾರಿ ಜೀವಿಯನ್ನು ನೀಲಿ ಉಂಗುರ ( ಬ್ಲೂ ರಿಂಗ್) ಎಂದು ಗುರುತಿಸಲಾಗಿದ್ದು, ಇದು ಸಾಮಾನ್ಯವಾಗಿ ಎಲ್ಲ ಕಡೆ ಗೋಚರವಾಗುವುದಿಲ್ಲ ಎಂದು ತಿಳಿದುಬಂದಿದೆ. ಈ ಕುರಿತಾದ ವಿಡಿಯೋ ಒಂದನ್ನು @Kaylinmarie21 ಎಂಬ ಟಿಕ್‌ಟಾಕ್ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಈ ಸಣ್ಣ ಪ್ರಾಣಿಯ ಕುರಿತಾಗಿ ನಾನು ಯಾವುದೇ ಮಾಹಿತಿಯನ್ನು ಹೊಂದಿರಲಿಲ್ಲ ಎಂದು ಮಹಿಳೆ ವಿವರಿಸಿದ್ದಾಳೆ.
ಕಂದು ದೇಹ ಮತ್ತು ಡಾರ್ಕ್ ಸರ್ಕಲ್‌ಗಳನ್ನು ಹೊಂದಿರುವ ಅಕ್ಟೋಪಸ್ ಅನ್ನು ಮಹಿಳೆ ತನ್ನ ಅಂಗೈ ಮೇಲೆ ಇರಿಸಲಾಗಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾದಿದ್ದು, ಪ್ರಾಣಿಗಳ ಪೋಟೋ ತಗೆಯಲು ಬಯಸಿದ್ದ ಈಕೆ, ಈ ಅಕ್ಟೋಪಸ್ ಒಂದನ್ನು ತನ್ನ ಅಂಗೈ ಮೇಲೆ ಇಟ್ಟುಕೊಂಡು ಫೋಟೋಗಳನ್ನು ತೆಗೆದುಕೊಂಡಿದ್ದಾಳೆ. ಆದರೆ, ಈ ಘಟನೆಯ ನಂತರ ಈ ಪ್ರಾಣಿಯ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಈ ಕುರಿತಾಗಿ ಆಕೆ ಗೂಗಲ್ ಸರ್ಚ್ ಮಾಡಿದಾಗ ಸತ್ಯ ಬೆಳಕಿಗೆ ಬಂದಿದೆ. ಆ ಪ್ರಾಣಿ 26 ವಯಸ್ಸಿನ ಮನುಷ್ಯರನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಕೊಲ್ಲುವಷ್ಟು ವಿಷವನ್ನು ಹೊಂದಿದೆ ಎಂಬುವುದು ಆಕೆಯ ಅರಿವಿಗೆ ಬಂದಿದೆ.
ಈ ಮಾಹಿತಿ ತಿಳಿದ ನಂತರ ಭಯಭೀತಳಾಗಿ ತನ್ನ ತಂದೆಗೆ ಕರೆ ಮಾಡಿ ಮಾತನಾಡಿದೆ ಎಂದೂ ಆಕೆ ತನ್ನ ವಿಡಿಯೋದಲ್ಲಿ ತಿಳಿಸಿದ್ದಾಳೆ. ಅದೃಷ್ಟವಶಾತ್, ಆ ವಿಷಕಾರಿ ಪ್ರಾಣಿಯಿಂದ ಆಕೆಗೆ ಯಾವುದೇ ಹಾನಿಯಾಗಿರಲಿಲ್ಲ ಮತ್ತು ಮಹಿಳೆ ಸುರಕ್ಷಿತವಾಗಿದ್ದಾಳೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕುಂಭಮೇಳಕ್ಕೆ ಕೋವಿಡ್ ಪರೀಕ್ಷೆ ಕಡ್ಡಾಯ; ಉತ್ತರಾಖಂಡ ಹೈಕೋರ್ಟ್
ಈ ಪ್ರಾಣಿಯ ವಿಷವು ಸೈನೈಡ್‌ಗಿಂತ 1,000 ಪಟ್ಟು ಹೆಚ್ಚು ವಿಷಕಾರಿಯಾಗಿದೆ ಎಂದು ಓಷನ್ ಕನ್ಸರ್ವೆನ್ಸಿ ವರದಿ ಮಾಡಿದ್ದು, ವಿಶೇಷವೆಂದರೆ ಒಂದು ವೇಳೆ ಇದು ಕಚ್ಚಿದರೆ ಕಚ್ಚಿಸಿಕೊಂಡವರಿಗೆ ಇದರ ವಿಷ ತಮ್ಮ ದೇಹಕ್ಕೆ ಸೇರಿಕೊಂಡಿದೆ ಎಂಬುದು ಬಹಳ ತಡವಾಗಿ ಅರಿವಿಗೆ ಬರುತ್ತದೆ. ಅಲ್ಲದೆ, ಈವರೆಗೆ ಬ್ಲೂ ರಿಂಗ್ ಅಕ್ಟೋಪಸ್ ಕಚ್ಚಿದರೆ ಯಾವುದೇ ಆ್ಯಂಟಿವೆನೋಮ್ ಲಭ್ಯವಿಲ್ಲ ಮತ್ತು ಮಾರಣಾಂತಿಕ ಪ್ರಾಣಿಯಿಂದ ಕಚ್ಚಿಸಿಕೊಂಡ ವ್ಯಕ್ತಿಯನ್ನು ಉಳಿಸುವ ಏಕೈಕ ಮಾರ್ಗವೆಂದರೆ ತಕ್ಷಣವೇ ಕೃತಕ ಉಸಿರಾಟವನ್ನು ನೀಡುವುದು ಎಂದು ಹೇಳಲಾಗಿದೆ.
ಈ ಜೀವಿಯಿಂದ ಕಚ್ಚಿಸಿಕೊಂಡವರಲ್ಲಿ ವಾಕರಿಕೆ, ದೃಷ್ಟಿ ನಷ್ಟ ಅಥವಾ ಕುರುಡುತನ ಮುಂತಾದ ಲಕ್ಷಣಗಳು ಕಂಡುಬರುತ್ತದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.