ಮಧ್ಯರಾತ್ರಿ ಸಿಕ್ಕ ಸ್ವಾತಂತ್ರ್ಯಕ್ಕೆ ಸೌದಿ ಮಹಿಳೆಯರ ಚಿಯರ್ಸ್
Team Udayavani, Jun 25, 2018, 9:10 AM IST
ರಿಯಾದ್: ‘ರಾತ್ರಿ 12 ಹೊಡೆಯಲೆಂದು ಗಡಿಯಾರದ ಮುಳ್ಳನ್ನೇ ದಿಟ್ಟಿಸಿಕೊಂಡು ಕುಳಿತಿದ್ದೆ. ಕ್ಷಣ ಕ್ಷಣಕ್ಕೂ ಎದೆಬಡಿತ ಜೋರಾಗುತ್ತಿತ್ತು. 12 ಹೊಡೆದಿದ್ದೇ ತಡ, ಮಹಡಿಯಿಂದ ಇಳಿದು ಬಂದು ಪಾರ್ಕಿಂಗ್ ಲಾಟ್ ನಲ್ಲಿ ನಿಂತಿದ್ದ ನನ್ನ ಬಿಳಿ ಬಣ್ಣದ ಜಿಎಂಸಿ ಕಾರನ್ನೇರಿ ಹೊರಟೇಬಿಟ್ಟೆ. ಡ್ರೈವರ್ ಸೀಟಿನಲ್ಲಿ ಕುಳಿತು ನಾನು ಹುಟ್ಟಿ, ಬೆಳೆದ ನಗರದಲ್ಲೊಂದು ಸುತ್ತು ಹಾಕುವುದು ನನ್ನ ಬಹುವರ್ಷಗಳ ಕನಸಾಗಿತ್ತು. ಆ ಆಸೆ ಇಂದು ಈಡೇರಿತು. ಕಿಂಗ್ ಫಹದ್ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಂತೆ ಮೈಯೆಲ್ಲಾ ರೋಮಾಂಚನದ ಅನುಭವ. ಜೀವನದಲ್ಲಿ ಒಮ್ಮೆಯೂ ಈ ರಸ್ತೆಯಲ್ಲಿ ಡ್ರೈವ್ ಮಾಡುವ ಅವಕಾಶ ಸಿಗುತ್ತದೆಂದು ಕಲ್ಪಿಸಿಯೂ ಇರಲಿಲ್ಲ’.
ಖಟ್ಟರ್ ಸಂಪ್ರದಾಯವಾದಿ ರಾಷ್ಟ್ರವಾದ ಸೌದಿ ಅರೇಬಿಯಾದಲ್ಲಿ ಶನಿವಾರ ಮೊತ್ತಮೊದಲ ಬಾರಿಗೆ ಕಾರು ಚಲಾಯಿಸಿದ ಟಿವಿ ಆ್ಯಂಕರ್, ಮೂರು ಮಕ್ಕಳ ತಾಯಿ ಸಮರ್ ಅವರ ಸಂತಸದ ನುಡಿಗಳಿವು. ಶನಿವಾರ ಮಧ್ಯರಾತ್ರಿ ಸಿಕ್ಕ ಸ್ವಾತಂತ್ರ್ಯವನ್ನು ಬಳಸಿಕೊಂಡ ಅನೇಕ ಮಹಿಳೆಯರ ಅಭಿಪ್ರಾಯವೂ ಇದೇ ಆಗಿತ್ತು.
ದಿನಸಿ ಅಂಗಡಿಗೆ, ಕಚೇರಿಗೆ, ಸಂಬಂಧಿಗಳು -ಗೆಳೆಯರ ಮನೆಗೆ ಅಥವಾ ಮಕ್ಕಳನ್ನು ಶಾಲೆಗೆ ಬಿಡಲು ಹೋಗುವುದಿದ್ದರೂ ಮಹಿಳೆಯರಿಗೆ ಹಿಂಬದಿ ಸೀಟೇ ಕಾಯಂ ಎಂಬಂತಿದ್ದ ಸೌದಿಯಲ್ಲಿ ಶನಿವಾರದಿಂದ ಮಹಿಳೆಯರಿಗೆ ಚಾಲನಾ ನಿಷೇಧ ತೆರವಾಗಿದೆ. ಬೆರಳೆಣಿಕೆಯಷ್ಟು ಮಹಿಳೆಯರು ಮಧ್ಯರಾತ್ರಿಯೇ ಕಾರು ಚಲಾಯಿಸಿ ಖುಷಿ ಪಟ್ಟಿದ್ದಾರೆ. ವಿಶೇಷವೆಂದರೆ, ಬಹುತೇಕ ಪುರುಷರೂ ಇದನ್ನು ಸ್ವಾಗತಿಸಿದ್ದಾರೆ.
ಹರ್ಷೋದ್ಗಾರ: ಹೆದ್ದಾರಿಯಲ್ಲಿದ್ದ ಕೆಲವು ಯುವಕರು, ಪೊಲೀಸ್ ಸಿಬಂದಿ ಕೂಡ ನಮ್ಮನ್ನು ನೋಡಿ ಹರ್ಷೋದ್ಗಾರ ಮಾಡಿದರು. ಥಂಬ್ಸ್ ಅಪ್ ಮಾಡಿ ಬೆಂಬಲ ನೀಡಿದರು. ನನಗೆ ಮಾತುಗಳೇ ಹೊರಡುತ್ತಿಲ್ಲ. ಎಷ್ಟು ಖುಷಿಯಾಗುತ್ತಿದೆಯೆಂದರೆ… ಇದು ಕನಸಾ, ನನಸಾ ಎಂದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ ತಹ್ಲಿಯಾದ ಬೀದಿಯಲ್ಲಿ ಲೆಕ್ಸಸ್ ಕಾರನ್ನು ಚಲಾಯಿಸಿದ ಹೆಸ್ಸಾಹ್ ಅಲ್-ಅಜಾಜಿ.
ಹೋರಾಟಕ್ಕೆ ಸಿಕ್ಕ ಜಯ: 1990ರಲ್ಲಿ ಕೆಲವು ಸಾಮಾಜಿಕ ಕಾರ್ಯಕರ್ತರು ಮಹಿಳೆಯರಿಗೂ ವಾಹನ ಚಾಲನೆಗೆ ಅವಕಾಶ ನೀಡಬೇಕೆಂದು ಹೋರಾಟ ಆರಂಭಿಸಿದ್ದರು. ಈ ಹೋರಾಟಕ್ಕೆ ಶಿಕ್ಷೆಯಾಗಿ ಹಲವು ಕೆಲಸ ಕಳೆದುಕೊಂಡರು, ನಿಂದನೆಗೆ ಗುರಿಯಾದರು ಮಾತ್ರವಲ್ಲ, ಇವರಿಗೆ ಒಂದು ವರ್ಷ ಕಾಲ ವಿದೇಶ ಪ್ರಯಾಣಕ್ಕೂ ನಿಷೇಧ ಹೇರಲಾಯಿತು. ಕಳೆದ ವರ್ಷ ಭಾವೀ ದೊರೆ ಸಲ್ಮಾನ್ ಮಹಿಳೆಯರಿಗೆ ಚಾಲನಾ ಪರವಾನಗಿ ನೀಡುವ ಘೋಷಣೆ ಮಾಡುತ್ತಿದ್ದಂತೆ, ಅದಕ್ಕಿದ್ದ ಎಲ್ಲ ವಿರೋಧಗಳೂ ತಣ್ಣಗಾದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.