ತಾಲಿಬಾನ್ ಪಿಶಾಚಿಗಳಿಂದ ತಪ್ಪಿಸಿಕೊಳ್ಳಲು ಹೆತ್ತ ಮಕ್ಕಳನ್ನು ಸೇನಾ ಸಿಬ್ಬಂದಿಗಳ ಕೈಗೆಸೆದರು.!
ಇದು ಭಯಾನಕ ದೃಶ್ಯ, ಮಹಿಳೆಯರು ತಮ್ಮ ಮಕ್ಕಳನ್ನು ರೇಜರ್ ತಂತಿಯ ಮೇಲಿಂದ ಎಸೆಯುತ್ತಿದ್ದರು : ವರದಿ
Team Udayavani, Aug 19, 2021, 12:28 PM IST
ಕಾಬೂಲ್ : ಯುಎಸ್ ಮತ್ತು ಯುಕೆ ಸೈನ್ಯವನ್ನು ಬೇರ್ಪಡಿಸುವ ತಂತಿ ಮತ್ತು ಗೇಟ್ ಗಳ ಬಳಿ ಕಾಬೂಲ್ ವಿಮಾನ ನಿಲ್ದಾಣದ ಮೂಲಕ ಅಫ್ಗಾನಿಸ್ಥಾನದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವ ಸಾವಿರಾರು ಮಂದಿ ಸಹಾಯಕ್ಕಾಗಿ ಅಂಗಲಾಚುತ್ತಿರುವ ದೃಶ್ಯಗಳು ಕಂಡು ಬಂದಿವೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ತಾಲಿಬಾನ್ ಉಗ್ರರ ದಾಳಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿರುವ ಸಾವಿರಾರು ಪುರುಷರು ಮತ್ತು ಮಹಿಳೆಯರು ತಮ್ಮ ಮಕ್ಕಳನ್ನು ರಕ್ಷಿಸುವ ಸಲುವಾಗಿ ಗೇಟ್ ನಿಂದ ಆಚೆಗೆ ಎಸೆದು ಸೇನೆಯ ಸಿಬ್ಬಂದಿಗಳಲ್ಲಿ ತಮ್ಮ ಮಕ್ಕಳನ್ನು ಹಿಡಿಯುವಂತೆ ಕೇಳುತ್ತಿದ್ದಾರೆಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಸ್ಕೈ ನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿ : ಸರ್ಕಾರದ ಆಫರ್ ಬೇಡವೆಂದು ಪಿಯುಸಿ ಪರೀಕ್ಷೆ ಬರೆಯಲು ಮುಂದಾದ ವಿದ್ಯಾರ್ಥಿನಿ
ಈ ಬಗ್ಗೆ ಪ್ರತಿಕ್ರಿಯಿಸಿದ ಬ್ರಿಟಿಷ್ ಸೈನಿಕರೊಬ್ಬರು, “ಇದು ಭಯಾನಕವಾಗಿದೆ, ಮಹಿಳೆಯರು ತಮ್ಮ ಮಕ್ಕಳನ್ನು ರೇಜರ್ ತಂತಿಯ ಮೇಲಿಂದ ಎಸೆಯುತ್ತಿದ್ದರು, ಮಕ್ಕಳನ್ನು ರಕ್ಷಿಸುವಂತೆ ಸೈನಿಕರಲ್ಲಿ ಅಂಗಲಾಚುತ್ತಿದ್ದಾರೆ. ತಂತಿಯ ಆಚೆಗೆ ಮಹಿಳೆಯರ ಗೋಳು ಕೇಳುವುದಕ್ಕೆ ಸಾಧ್ಯವಿಲ್ಲ. ಪರಿಸ್ಥಿತಿ ಅಷ್ಟು ಶೋಚನೀಯವಾಗಿದೆ ಎಂದು ಹೇಳಿದ್ದಾರೆ.
ಅಫ್ಗಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿ ಹಿಂಸಾಚಾರ ತಾರಕಕ್ಕೇರಿದೆ. ಸಾವಿರಾರು ಮಂದಿ ತಾಲಿಬಾನ್ ಉಗ್ರರ ಉಪಟಳ ತಾಳಲಾರದೇ, ಅಫ್ಗಾನಿಸ್ತಾನದಿಂದ ಪಲಾಯನ ಗೈಯಲು ಮುಂದಾಗುತ್ತಿದ್ದಾರೆ. ಯುಎಸ್ ಜೆಟ್ ವಿಮಾನಗಳ ರೆಕ್ಕೆಯ ಮೇಲೆ ಕುಳಿತುಕೊಳ್ಳುವ ದೃಶ್ಯಗಳು ಮತ್ತೆ ಕಂಡುಬರುತ್ತಿವೆ ಎಂದು ವರದಿ ತಿಳಿಸಿದೆ.
ಏತನ್ಮಧ್ಯೆ, ಮಂದಿ ಯುಎಸ್ ಮತ್ತು ಯುಕೆ ಸೈನ್ಯವನ್ನು ಬೇರ್ಪಡಿಸುವ ತಂತಿ ಮತ್ತು ಗೇಟ್ ಗಳ ಬಳಿ ತಾಲಿಬಾನ್ ಉಗ್ರರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮಹಿಳೆಯರು ಅಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೈರಲ್ ಆದ ವಿಡೀಯೋ ದಲ್ಲಿ “ತಾಲಿಬಾನ್ ಉಗ್ರರು ಬರುತ್ತಿದ್ದಾರೆ, ನಮ್ಮನ್ನು ರಕ್ಷಿಸಿ” ಎಂದು ಹಲವಾರು ಮಹಿಳೆಯರು ಕೇಳುತ್ತಿರುವುದು ಕಂಡು ಬಂದಿದೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ತಾಲಿಬಾನ್ ಉಗ್ರರು ಕಂಡಕಂಡವರಿಗೆಲ್ಲ ಗುಂಡು ಹಾರಿಸುತ್ತಿರುವ ಅಮಾನುಷ ದೃಶ್ಯಗಳು, ಸಾರ್ವಜನಿಕವಾಗಿ ಮಹಿಳೆಯರಿಗೆ ಹೆಡ್ ಶಾಟ್ ಮಾಡಿ ಮೃಗೀಯ ಧೋರಣೆ ಮಾಡುತ್ತಿರುವುದಾಗಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇದನ್ನೂ ಓದಿ : ಸಿ.ಟಿ.ರವಿ ಅರೆ ಹುಚ್ಚ..! ಆರ್‌ಎಸ್‌ಎಸ್ ಚಡ್ಡಿಗಳು ಸ್ವಾತಂತ್ರ ತಂದು ಕೊಟ್ಟವರಲ್ಲ..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.