Work from home: ಪತ್ನಿಯ ಫೋನ್ ಕದ್ದಾಲಿಸಿ 16.58 ಕೋ.ರೂ. ಗಳಿಸಿದ!
Team Udayavani, Feb 24, 2024, 6:10 AM IST
ವಾಷಿಂಗ್ಟನ್: ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದ (ವರ್ಕ್ ಫ್ರಂ ಹೋಂ) ಪತ್ನಿಯ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡುವ ಮೂಲಕ ಆಕೆ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯ ದತ್ತಾಂಶಗಳನ್ನು ತಿಳಿದು, ಅವುಗಳ ಆಧಾರದಲ್ಲಿ ಅಕ್ರಮವಾಗಿ ವ್ಯವಹಾರ ನಡೆಸಿ 16.58 ಕೋಟಿ ರೂ. ಲಾಭ ಗಳಿಸಿ ದ್ದ ಪತಿಗೆ ಪತ್ನಿ ವಿಚ್ಛೇದನ ನೀಡಿರುವ ಘಟನೆ ಅಮೆರಿಕದಲ್ಲಿ ವರದಿಯಾಗಿದೆ.
ಟೆಕ್ಸಾಸ್ ನಿವಾಸಿ ಟೈಲರ್ ಲೌಡನ್ ಅವರ ಪತ್ನಿ ಬ್ರಿಟಿಷ್ ಪೆಟ್ರೋಲಿಯಂ (ಬಿಪಿ) ಸಂಸ್ಥೆಯಲ್ಲಿ ವಿಲೀನ ಮತ್ತು ಸ್ವಾಧೀನ ವಿಭಾಗದಲ್ಲಿ ನಿರ್ವಹಣ ಅಧಿಕಾರಿಯಾಗಿ ಕಾರ್ಯನಿರ್ವ ಹಿಸುತ್ತಿ ದ್ದರು. ಬಿಪಿ ಸಂಸ್ಥೆಯು ಅಮೆರಿಕ ಐಎನ್ಸಿಯ ಟ್ರಾವೆಲ್ಸ್ ಸಂಸ್ಥೆಗಳನ್ನು ಖರೀದಿಸಲು ಯೋಜಿಸಿದ್ದು, ಅದರ ಮೇಲ್ವಿಚಾರಣೆಯನ್ನೂ ನೋಡಿಕೊ ಳ್ಳುತ್ತಿದ್ದರು. ಆಕೆ ಮನೆಯಿಂದ ಕಾರ್ಯ ನಿರ್ವಹಿಸುವಾಗ ಟೈಲರ್ ಪತ್ನಿಯ ಫೋನ್ ಕರೆಗಳನ್ನು ಕದ್ದಾಲಿಸಿ ಈ ಬಗ್ಗೆ ತಿಳಿದುಕೊಂಡು, ಟ್ರಾವೆಲ್ ಸಂಸ್ಥೆಗಳ ಷೇರನ್ನು ಖರೀದಿಸಿದ್ದಾರೆ. ಈ ಮೂಲಕ 16.58 ಕೋಟಿ ರೂ. ಗಳ ಲಾಭ ಪಡೆದಿದ್ದಾರೆ. ಇತ್ತ ಸಂಸ್ಥೆಯು ಮಾಹಿತಿ ಸೋರಿಕೆಯಾಗಿದೆ ಎಂದು ಟೈಲರ್ ಅವರ ಪತ್ನಿಯನ್ನು ವಜಾಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.