ಕೋವಿಡ್ 19 ಪರಿಸ್ಥಿತಿ ನಿಭಾಯಿಸುವಿಕೆ : ಪ್ರಧಾನಿಗೆ WHO ಮುಖ್ಯಸ್ಥ ಟೆಡ್ರೋಸ್ ಶ್ಲಾಘನೆ
Team Udayavani, Apr 3, 2020, 2:59 PM IST
ಹೊಸದಿಲ್ಲಿ: ಲಾಕ್ ಡೌನ್ ವೇಳೆ ಪ್ರಧಾನಿ ನರೇಂದ್ರ ಮೊದಿಯವರು ಬಡವರ ನೆರವಿಗೆ ಕೈಗೊಂಡ ಕ್ರಮಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧಾನಮ್ ಗೆಬ್ರಿಯೆಸಸ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೋವಿಡ್ 19 ವೈರಸ್ ನಿಯಂತ್ರಣ ನಿಟ್ಟಿನಲ್ಲಿ ಜನರ ಚಲನವಲನಗಳಿಗೆ ನಿರ್ಬಂಧ ಹೇರಿ, ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದರಿಂದ ಬಡವರು ತುಂಬಾ ತೊಂದರೆ ಅನುಭವಿಸಬೇಕಾಗಿದೆ.
ಈ ವೇಳೆ, ತುರ್ತು ಪರಿಹಾರ ಕಾಮಗಾರಿಗಳಿಗಾಗಿ ಮೋದಿಯವರು 24 ಬಿಲಿಯನ್ ಡಾಲರ್ (1,82,628 ಕೋಟಿ ರೂ.) ಪ್ಯಾಕೇಜ್ ಘೋಷಣೆ ಮಾಡಿದರು. 800 ಮಿಲಿಯನ್ (80 ಕೋಟಿ) ಬಡವರಿಗೆ ಪಡಿತರ ವಿತರಣೆ, 204 ಮಿಲಿಯನ್ (20 ಕೋಟಿ) ಬಡ ಮಹಿಳೆಯರ ಖಾತೆಗಳಿಗೆ ಹಣ ವರ್ಗಾವಣೆ ಹಾಗೂ 80 ಮಿಲಿಯನ್ (8 ಕೋಟಿ) ಬಡವರ ಮನೆಗಳಿಗೆ ಉಚಿತ ಅಡುಗೆ ಸಿಲಿಂಡರ್ ವಿತರಣೆಗೆ ಕ್ರಮ ಕೈಗೊಂಡರು.
ಇವು ಬಡವರ ಬದುಕಿಗೆ ಆಶಾಕಿರಣವಾಯಿತು. ಹಲವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಮ್ಮ ದೇಶದ ಜನರಿಗೆ ಈ ಮಟ್ಟದ ಪರಿಹಾರ ಕ್ರಮಗಳನ್ನು ಘೋಷಿಸಲು ಸಾಧ್ಯವಾಗಿಲ್ಲ ಎಂದು ಟ್ವೀಟ್ ಮೂಲಕ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
My appreciation to Prime Minister @narendramodi for announcing a $24 billion package to support ??’s vulnerable populations during #COVID19 crisis, including:
-free food rations for 800M disadvantaged people
-cash transfers to 204M poor women
-free cooking gas for 80M households.— Tedros Adhanom Ghebreyesus (@DrTedros) April 2, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.