ವಿಶ್ವಯುದ್ಧಕ್ಕೆ ಮಾಸ್ಕೊವಾ ನಾಂದಿ? ಯುದ್ಧನೌಕೆಯ ಮುಳುಗಡೆಯಿಂದ ರಷ್ಯಾ ಸರಕಾರ ಕೆಂಡಾಮಂಡಲ


Team Udayavani, Apr 16, 2022, 8:35 AM IST

ವಿಶ್ವಯುದ್ಧಕ್ಕೆ ಮಾಸ್ಕೊವಾ ನಾಂದಿ? ಯುದ್ಧನೌಕೆಯ ಮುಳುಗಡೆಯಿಂದ ರಷ್ಯಾ ಸರಕಾರ ಕೆಂಡಾಮಂಡಲ

ಕೀವ್‌: ರಷ್ಯಾದ ಪ್ರಮುಖ ಯುದ್ಧನೌಕೆ “ಮಾಸ್ಕೊವಾ’ದ ಮುಳುಗಡೆಯೇ 3ನೇ ವಿಶ್ವಯುದ್ಧಕ್ಕೆ ನಾಂದಿ ಹಾಡಲಿದೆಯೇ?

ಹೌದು ಎನ್ನುತ್ತಿವೆ ರಷ್ಯಾದ ಸರಕಾರಿ ಸ್ವಾಮ್ಯದ ಮಾಧ್ಯಮ. “ಸಮರನೌಕೆಯ ನಾಶ ದೊಂದಿಗೆ ಮೂರನೇ ವಿಶ್ವಯುದ್ಧ ಈಗ ತಾನೇ ಶುರುವಾಗಿದೆ’ ಎಂದು ರಷ್ಯಾದ ಮಾಧ್ಯಮ  ಶುಕ್ರವಾರ ಘೋಷಿಸಿದೆ. ಕಪ್ಪು ಸಮುದ್ರದ ದಿಗ್ಗಜನೆಂದೇ ಕರೆಯಲ್ಪಡುತ್ತಿದ್ದ “ಮಾಸ್ಕೊವಾ’ ನೌಕೆಯು ಬೆಂಕಿ ಅವಘಡದಿಂದ ಹಾನಿಗೀಡಾಯಿತು ಎಂದು ರಷ್ಯಾ ಹೇಳಿತ್ತಾದರೂ, ತಮ್ಮ ನೆಪ್ಟ್ಯೂನ್ ಕ್ಷಿಪಣಿಯ ಮೂಲಕ ಅದನ್ನು ಧ್ವಂಸಗೈದೆವು ಎಂದು ಉಕ್ರೇನ್‌ ಹೇಳಿಕೊಂಡಿತ್ತು. ಇದು ರಷ್ಯಾದ ಆಕ್ರೋಶಕ್ಕೆ ಕಾರಣವಾಗಿದೆ.

ಅಲ್ಲದೇ, “ಮಾಸ್ಕೊವಾ ಹಡಗಿನ ಮುಳುಗಡೆ ಯನ್ನು ರಷ್ಯಾ ನೆಲದ ಮೇಲಾದ ದಾಳಿ’ ಎಂದು ಬಣ್ಣಿಸಿರುವ ಸರಕಾರಿ ಮಾಧ್ಯಮ, “ನಾವು ಈಗ ಕೇವಲ ಉಕ್ರೇನ್‌ ಮೇಲೆ ಆಕ್ರಮಣ ಮಾಡುತ್ತಿಲ್ಲ. ನ್ಯಾಟೋ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುತ್ತಿದ್ದೇವೆ. ಮೂರನೇ ಜಾಗತಿಕ ಯುದ್ಧ ಆರಂಭವಾಗಿದೆ’ ಎಂದು ಹೇಳಿದೆ.

1982ರ ಬಳಿಕ ಇದೇ ಮೊದಲು: 16 ದೀರ್ಘ‌ವ್ಯಾಪ್ತಿಯ ಕ್ರೂಸ್‌ ಕ್ಷಿಪಣಿಗಳನ್ನು ಹೊತ್ತೂಯ್ಯುವ ಸಾಮರ್ಥ್ಯ ಮಾಸ್ಕೊವಾ ನೌಕೆಗಿತ್ತು. ಈಗ ಇದು ಮುಳುಗುವ ಮೂಲಕ, 1982ರ ಫಾಕ್‌ಲ್ಯಾಂಡ್ಸ್‌ ಯುದ್ಧದ ಬಳಿಕ ಸಮರವೊಂದರಲ್ಲಿ ಮುಳುಗಿದ ಅತಿದೊಡ್ಡ ಯುದ್ಧನೌಕೆ ಎಂದೆನಿಸಿಕೊಂಡಿದೆ. ಅಂದಿನ ಯುದ್ಧದಲ್ಲಿ ಎಆರ್‌ಎ ಜನರಲ್‌ ಬೆಲ್‌ಗ್ರಾನೋ ಎಂಬ ಕ್ರೂಸ್‌ ನೌಕೆಯು ಮುಳುಗಿ, 300 ನಾವಿಕರು ಮೃತಪಟ್ಟಿದ್ದರು.

ತೀವ್ರಗೊಂಡ ದಾಳಿ: ಸಮರ ನೌಕೆಯ ಪತನದಿಂದ ಕೆಂಡಾಮಂಡಲವಾಗಿರುವ ರಷ್ಯಾ, ಇನ್ನು ಮುಂದೆ ಕೀವ್‌ ಮೇಲಿನ ದಾಳಿಯನ್ನು ತೀವ್ರಗೊಳಿಸುವುದಾಗಿ ಶುಕ್ರವಾರ ಘೋಷಿಸಿದೆ. ಜತೆಗೆ, ತನ್ನ ಗಡಿ ಪ್ರದೇಶಗಳ ಮೇಲೆ ಉಕ್ರೇನ್‌ ವೈಮಾನಿಕ ದಾಳಿ ನಡೆಸುತ್ತಿರುವುದು ಕೂಡ ರಷ್ಯಾದ ಸಿಟ್ಟನ್ನು ಇಮ್ಮಡಿಗೊಳಿಸಿದೆ. ರಾಜಧಾನಿ ಕೀವ್‌ ಅನ್ನು ವಶಪಡಿಸಿಕೊಳ್ಳುವ ಯತ್ನ ವಿಫ‌ಲವಾದ ಅನಂತರ, ರಷ್ಯಾ ನಿಧಾನವಾಗಿ ಕೀವ್‌ನಿಂದ ಹಿಂದೆ ಸರಿದಿತ್ತು. ಹೀಗಾಗಿ, ಕಳೆದ ಕೆಲವು ದಿನಗಳಿಂದ ಅಲ್ಲಿನ ಪರಿಸ್ಥಿತಿ ಸಹಜತೆಗೆ ಮರಳುತ್ತಿತ್ತು. ಆದರೆ, ಈಗ ರಷ್ಯಾ ಮತ್ತೆ ದಾಳಿಯ ಬೆದರಿಕೆ ಹಾಕಿರುವುದು ಕೀವ್‌ ಜನತೆಯಲ್ಲಿ ಆತಂಕ ಮೂಡಿಸಿದೆ.

ಬಸ್‌ ಮೇಲೆ ದಾಳಿ: 7 ಸಾವು : ಯುದ್ಧಪೀಡಿತ ಪೂರ್ವ ಉಕ್ರೇನ್‌ನ ಇಝಿ³ನ್‌ ಜಿಲ್ಲೆಯಲ್ಲಿ ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಹೊತ್ತೂಯ್ಯುತ್ತಿದ್ದ ಬಸ್‌ನ ಮೇಲೆಯೇ ರಷ್ಯಾ ಸೈನಿಕರು ದಾಳಿ ನಡೆಸಿದ್ದಾರೆ. ಪರಿಣಾಮ 7 ಮಂದಿ ನಾಗರಿಕರು ಮೃತಪಟ್ಟಿದ್ದು, 27ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೀವ್‌ ಹೊರಭಾಗದ ಲ್ಲಿರುವ ಉಕ್ರೇನ್‌ನ ಕ್ಷಿಪಣಿ ಉತ್ಪಾದನ ಘಟಕದ ಮೇಲೆ ರಷ್ಯಾ ಶುಕ್ರವಾರ ದಾಳಿ ನಡೆಸಿದೆ.

ಫಿನ್ಲಂಡ್‌, ಸ್ವೀಡನ್‌ಗೂ ರಷ್ಯಾ ದಾಳಿ ಎಚ್ಚರಿಕೆ
ಅಮೆರಿಕ ನೇತೃತ್ವದ ನ್ಯಾಟೋಗೇನಾದರೂ ಸೇರ್ಪಡೆಗೊಂಡರೆ ಪರಿಣಾಮ ನೆಟ್ಟಗಿರಲ್ಲ ಎಂದು ತನ್ನ ನೆರೆಯ ದೇಶಗಳಾದ ಫಿನ್ಲಂಡ್‌ ಮತ್ತು ಸ್ವೀಡನ್‌ಗೆ ರಷ್ಯಾ ಎಚ್ಚರಿಕೆ ನೀಡಿದೆ. ಆಯ್ಕೆ ನಿಮಗೆ ಬಿಟ್ಟಿದ್ದೇವೆ. ನ್ಯಾಟೋ ಸೇರ್ಪಡೆಯತ್ತ ನೀವು ಹೆಜ್ಜೆಯಿಟ್ಟರೆ ಅದರ ಪರಿಣಾಮ ನಿಮ್ಮ ಮೇಲೆ ಮತ್ತು ಇಡೀ ಯುರೋಪ್‌ ಮೇಲೆ ಹೇಗಿರುತ್ತದೆ ಎಂಬುದನ್ನು ಯೋಚಿಸಿ ನಿರ್ಧಾರ ಕೈಗೊಳ್ಳಿ. ಹಾಗೇನಾದರೂ ಆದರೆ ಅಣ್ವಸ್ತ್ರಗಳು ಹಾಗೂ ಹೈಪರ್‌ಸಾನಿಕ್‌ಗಳ ನಿಯೋಜನೆಯನ್ನೂ ಮಾಡಬೇಕಾಗುತ್ತದೆ ಎಂದೂ ರಷ್ಯಾ ವಿದೇಶಾಂಗ ಇಲಾಖೆ ಬೆದರಿಕೆ ಹಾಕಿದೆ.

ಅಮೆರಿಕದ ಮೇಲೂ ಗರಂ
ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ಸರಬರಾಜನ್ನು ಹೀಗೇ ಮುಂದು ವರಿಸಿದರೆ ಅದರ ಪರಿಣಾಮ ಎದುರಿಸಬೇಕಾದೀತು ಎಂದು ಅಮೆರಿಕಕ್ಕೂ ರಷ್ಯಾ ಎಚ್ಚರಿಕೆ ನೀಡಿದೆ. ಬೇಜವಾಬ್ದಾರಿಯುತವಾಗಿ ನೀವು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದೀರಿ. ಇದು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆಗೆ ಊಹಿಸಲಾಗದಷ್ಟು ಸಮಸ್ಯೆ ತಂದೊಡ್ಡಲಿದೆ. ಕೂಡಲೇ ಇದನ್ನು ನಿಲ್ಲಿಸಿ ಎಂದು ಹೇಳಿದೆ.

ಸಮರಾಂಗಣದಲ್ಲಿ ಕೇವಲ 24 ಗಂಟೆಗಳಲ್ಲಿ 39 ಸೈನಿಕರು, 4 ವಾಹನಗಳನ್ನು ಕಳೆದುಕೊಂಡ ಪುತಿನ್‌ ಪಡೆ ಬೆಲ್ಗರೋಡ್‌ನ‌ಲ್ಲಿ ಉಕ್ರೇನ್‌ನ ಶೆಲ್‌ ದಾಳಿಯಿಂದ 20 ಕಟ್ಟಡಗಳು, ಶಾಲೆಗಳಿಗೆ ಹಾನಿ: ರಷ್ಯಾ ಆರೋಪ ಫ್ರಾನ್ಸ್‌ನ ರೇಡಿಯೋ ಆರ್‌ಎಫ್ಐ ವೆಬ್‌ಸೈಟ್‌ ಹ್ಯಾಕ್‌ ಮಾಡಿರುವುದಾಗಿ ಘೋಷಿಸಿದ ರಷ್ಯಾ ಯುದ್ಧದಿಂದಾಗಿ 50 ಲಕ್ಷ ಮಂದಿ ಉಕ್ರೇನ್‌ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ರುಬಿಜ್ನೆ, ಪೋಪಸ್ನಾ ಮತ್ತು ಮರಿಯುಪೋಲ್‌ ವಶಕ್ಕೆ ಪಡೆಯುವತ್ತ ಮುನ್ನುಗ್ಗಿದ ಪುತಿನ್‌ ಪಡೆ ಮರಿಯುಪೋಲ್‌ನಲ್ಲೂ ದಾಳಿ ತೀವ್ರಗೊಳಿಸಿದ ರಷ್ಯಾ. ದೀರ್ಘ‌ವ್ಯಾಪ್ತಿಯ ಕ್ಷಿಪಣಿಗಳ ಬಳಸಿ ದಾಳಿ .

ರಷ್ಯಾದವರು ನಮಗೆ ಗರಿಷ್ಠವೆಂದರೆ ಐದೇ ದಿನ ಬದುಕಿರುತ್ತೀರಿ ಎಂದಿದ್ದರು. ಆದರೆ, ಉಕ್ರೇನಿಯನ್ನರಾದ ನಾವು 50 ದಿನಗಳ ಯುದ್ಧದಲ್ಲಿ ಬದುಕುಳಿದಿದ್ದೇವೆ ಎಂದು ಹೇಳಲು ಹೆಮ್ಮೆ ಪಡುತ್ತೇವೆ.
– ವೊಲೊಡಿಮಿರ್‌ ಝೆಲೆನ್‌ಸ್ಕಿ, ಉಕ್ರೇನ್‌ ಅಧ್ಯಕ್ಷ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್

1-qeqwe

Russia ದಿಂದ ಉಕ್ರೇನ್‌ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ

Chrome Browser: ಗೂಗಲ್‌ ಸರ್ಚ್‌ ಎಂಜಿನ್‌ ಕ್ರೋಮ್‌ ಮಾರಾಟ?

Chrome Browser: ಗೂಗಲ್‌ ಸರ್ಚ್‌ ಎಂಜಿನ್‌ ಕ್ರೋಮ್‌ ಮಾರಾಟ?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.