ಕೋವಿಡ್ ಆತಂಕದ ನಡುವೆ ವಿಶ್ವ ಯುದ್ಧದ ಆತಂಕ: ಈ ಆರು ದೇಶಗಳಲ್ಲಿ ಏನಾಗ್ತಿದೆ?
ನೇರ ಯುದ್ಧ ಆರಂಭವಾಗಿರುವುದರಿಂದ ಜಗತ್ತಿನ ಇತರ ಬೇರೆ ದೇಶಗಳ ನಡುವೆಯೂ ಆತಂಕ ಹೆಚ್ಚಾಗತೊಡಗಿದೆ.
Team Udayavani, Oct 1, 2020, 11:39 AM IST
ನವದೆಹಲಿ/ಮಾಸ್ಕೋ:ಜಗತ್ತಿನಾದ್ಯಂತ ಮಹಾಮಾರಿ ಕೋವಿಡ್ 19 ಸೋಂಕಿನ ಅಟ್ಟಹಾಸ ಮುಂದುವರಿಯುತ್ತಿರುವ ನಡುವೆಯೇ ವಿಶ್ವದ ಆರು ದೇಶಗಳ ನಡುವೆ ಸಂಘರ್ಷ ತೀವ್ರವಾಗುವುದರ ಜತೆಗೆ ಯಾವುದೇ ಹೊತ್ತಿನಲ್ಲಿಯೂ ಜಾಗತಿಕ ಯುದ್ಧಕ್ಕೆ ನಾಂದಿ ಹಾಡಬಹುದು ಎಂಬ ಆತಂಕ ಎದುರಾಗಿದೆ ಎಂದು ವರದಿಯೊಂದು ವಿಶ್ಲೇಷಿಸಿದೆ.
ಬಹುದೊಡ್ಡ ಯುದ್ಧಭೂಮಿಯಾಗುತ್ತಿರುವ ಪ್ರದೇಶಗಳು ರಷ್ಯಾದ ಸಮೀಪವೇ ಇದೆ. ಇದರಲ್ಲಿ ಈಗಾಗಲೇ ಅರ್ಮೇನಿಯಾ ಮತ್ತು ಅಝರ್ ಬೈಜಾನ್ ನಡುವೆ ಯುದ್ಧ ಆರಂಭವಾಗಿಬಿಟ್ಟಿದೆ. ಎರಡು ದೇಶಗಳು ಮಿಸೈಲ್ ಗಳನ್ನು ಹಾಗೂ ಯುದ್ಧ ಟ್ಯಾಂಕ್ ಗಳನ್ನು ಉಪಯೋಗಿಸಿ ದಾಳಿ ನಡೆಸುತ್ತಿವೆ. ಅಷ್ಟೇ ಅಲ್ಲ ಮುಸ್ಲಿಂ ಬಾಹುಳ್ಯದ ಅಝರ್ ಬೈಜಾನ್ ಡ್ರೋಣ್ ದಾಳಿ ನಡೆಸಲು ಆರಂಭಿಸಿದೆ ಎಂದು ವಿವರಿಸಿದೆ.
ಅಝರ್ ಬೈಜಾನ್ ಮತ್ತು ಅರ್ಮೇನಿಯಾ ನಡುವೆ ನೇರ ಯುದ್ಧ ಆರಂಭವಾಗಿರುವುದರಿಂದ ಜಗತ್ತಿನ ಇತರ ಬೇರೆ ದೇಶಗಳ ನಡುವೆಯೂ ಆತಂಕ ಹೆಚ್ಚಾಗತೊಡಗಿದೆ. ಮತ್ತೊಂದೆ ಲಡಾಖ್ ನ ವಾಸ್ತವ ಗಡಿನಿಯಂತ್ರಣ ರೇಖೆ ವಿಚಾರದಲ್ಲಿ ಭಾರತ ಮತ್ತು ಚೀನಾ ನಡುವೆ ದಿನದಿಂದ ದಿನಕ್ಕೆ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಅದೇ ರೀತಿ ಸೌದಿ ಅರೇಬಿಯಾ ಮತ್ತು ಇರಾನ್ ನಡುವೆ ಸಂಘರ್ಷ ತಾರಕಕ್ಕೇರಿದೆ. ಈ ಸಂದರ್ಭದಲ್ಲಿ ಅಝರ್ ಬೈಜಾನ್ ಮತ್ತು ಅರ್ಮೇನಿಯಾವನ್ನು ಬೆಂಬಲಿಸುತ್ತಿರುವ ವಿಚಾರದಲ್ಲಿ ಪಾಕಿಸ್ತಾನ ಹಾಗೂ ಟರ್ಕಿ ವಿರುದ್ಧ ರಷ್ಯಾ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಬಹುದು ಎಂಬ ಭಯ ಕಾಡುತ್ತಿರುವುದಾಗಿಯೂ ವರದಿ ತಿಳಿಸಿದೆ.
ಇದನ್ನೂ ಓದಿ:ನ.4ರಿಂದ 9ರವರೆಗೆ ಯುಎಇನಲ್ಲಿ ನಡೆಯಲಿದೆ ಕಿರು ಮಹಿಳಾ ಐಪಿಎಲ್
ಚೀನಾ ಮತ್ತು ತೈವಾನ್ ನಡುವೆ ಇತ್ತೀಚೆಗೆ ಸಂಘರ್ಷ ತಾರಕಕ್ಕೇರಿದ್ದು, ಎರಡೂ ಕಡೆಯಿಂದಲೂ ಹಿಂದೆ ಸರಿಯಲು ಒಪ್ಪದ ಪರಿಣಾಮ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗುವ ಸಾಧ್ಯತೆ ಇದೆ ಎಂದು ವರದಿ ವಿಶ್ಲೇಷಿಸಿದೆ.
ಸೌದಿ ಅರೇಬಿಯಾ ಇತ್ತೀಚೆಗೆ ಹತ್ತು ಮಂದಿ ಇರಾನ್ ಉಗ್ರರನ್ನು ಬಂಧಿಸಿತ್ತು. ಇದರಿಂದಾಗಿ ಸೌದಿ ಅರೇಬಿಯಾ ಮತ್ತು ಇರಾನ್ ನಡುವೆ ಪೂರ್ಣ ಪ್ರಮಾಣದ ಯುದ್ಧಕ್ಕೆ ನಾಂದಿಯಾಗಬಹುದು ಎಂದು ಶಂಕಿಸಲಾಗಿದೆ.
ಜಮ್ಮು-ಕಾಶ್ಮೀರದ ಲಡಾಖ್ ನಲ್ಲಿಯೂ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಇನ್ನೂ ಮುಂದುವರಿದಿದೆ. ಲಡಾಖ್ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಒಪ್ಪಿಕೊಳ್ಳಲು ಚೀನಾ ಸಿದ್ಧವಿಲ್ಲದ ಪರಿಣಾಮ ಎಲ್ ಎಸಿಯಲ್ಲಿ ಉಭಯ ದೇಶಗಳು ಯುದ್ಧಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿವೆ.
ಇದನ್ನೂ ಓದಿ:ಕದನ ವಿರಾಮ ಉಲ್ಲಂಘಿಸಿ ಪಾಕ್ ನಿಂದ ಗುಂಡಿನ ದಾಳಿ: ಭಾರತದ ಯೋಧ ಹುತಾತ್ಮ
ಅಝರ್ ಬೈಜಾನ್-ಅರ್ಮೇನಿಯಾ ನಡುವಿನ ಯುದ್ಧದ ವಿಚಾರದಲ್ಲಿ ರಷ್ಯಾ ಮತ್ತು ಟರ್ಕಿ ಕೈಜೋಡಿಸುವ ಸಾಧ್ಯತೆ ಇದ್ದಿರುವುದಾಗಿ ತಜ್ಞರು ವಿಶ್ಲೇಷಿಸಿದ್ದಾರೆ. ಟರ್ಕಿ ಈಗಾಗಲೇ ಬಹಿರಂಗವಾಗಿ ಅಝರ್ ಬೈಜಾನ್ ಗೆ ಬೆಂಬಲ ಘೋಷಿಸಿದೆ. ಆದರೆ ಅರ್ಮೇನಿಯಾ ವಿಚಾರದಲ್ಲಿ ರಷ್ಯಾ ಇನ್ನೂ ಬೆಂಬಲಿಸುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಅರ್ಮೇನಿಯಾದ ಮಿಸೈಲ್ ದಾಳಿಗೆ ಅಝರ್ ಬೈಜಾನ್ ನ ಸೇನೆಯ ಹಲವಾರು ಯುದ್ಧ ಟ್ಯಾಂಕ್ ಗಳು ನಾಶವಾಗಿ ಹೋಗಿವೆ. ಅರ್ಮೇನಿಯಾ ಪಡೆ ಮಲೆ ಅಝರ್ ಬೈಜಾನ್ ಸೇನೆ ಡ್ರೋನ್ ದಾಳಿ ನಡೆಸಲು ಸಿದ್ಧತೆ ನಡೆಸಿದೆ. ಮತ್ತೊಂದೆಡೆ ರಷ್ಯಾ ನಿರ್ಮಿತ ಅಣು ಸಿಡಿತಲೆಯ ಮಿಸೈಲ್ ದಾಳಿ ನಡೆಸುವುದಾಗಿ ಅರ್ಮೇನಿಯಾ ಅಝರ್ ಬೈಜಾನ್ ಗೆ ಎಚ್ಚರಿಕೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.