2ನೇ ವಿಶ್ವಯುದ್ಧದ ಬಾಂಬ್ ಪತ್ತೆ!
Team Udayavani, Aug 10, 2017, 8:00 AM IST
ಬರ್ಲಿನ್: ಜರ್ಮನಿಯ ವಾಯವ್ಯ ಭಾಗದಲ್ಲಿರುವ ಡುಸ್ಸೆಲ್‌ಡಾಫ್ì ನಗರದಲ್ಲಿ ನಿರ್ಮಾಣ ಕಾರ್ಯ ನಡೆಸುವಾಗ ಎರಡನೇ ಮಹಾ ಯುದ್ಧದ ಸಂದರ್ಭದ ಬೃಹತ್ ಸಜೀವ ಬಾಂಬ್ ಒಂದು ಪತ್ತೆಯಾಗಿದೆ. ಬಾಂಬ್ ದೊರೆತ ಹಿನ್ನೆಲೆಯಲ್ಲಿ ಮಂಗಳವಾರ ಮುಂಜಾನೆ ನಗರದಿಂದ ಸುಮಾರು 2 ಸಾವಿರ ನಾಗರಿಕರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.
ಡುಸ್ಸೆಲ್‌ಡಾಫ್ì ನಗರದ ಸಮೀಪವಿರುವ ಕೈಗಾರಿಕಾ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಭೂಮಿ ಅಗೆದಾಗ ಸುಮಾರು 250 ಕೆ.ಜಿ. ತೂಕದ ಬೃಹತ್ ಏರಿಯಲ್ ಬಾಂಬ್ ಸಿಕ್ಕಿದೆ. ಬಾಂಬ್ ದೊರೆತ ಪ್ರದೇಶದಲ್ಲಿ ಸುಮಾರು 4,500ಕ್ಕೂ ಹೆಚ್ಚು ಜನ ವಾಸವಿದ್ದು, ಬಾಂಬ್ ಇದ್ದ ಸ್ಥಳದಿಂದ 250 ಮೀ. ವ್ಯಾಪ್ತಿಯಲ್ಲಿ ವಾಸವಿದ್ದ ಎಲ್ಲರನ್ನೂ ಸ್ಥಳೀಯ ರಕ್ಷಣಾ ಸಿಬ್ಬಂದಿ ಸ್ಥಳಾಂತರಿಸಿದರು. ಅನಂತರ ಬಾಂಬ್ ನಿಷ್ಕ್ರಿಯಗೊಳಿಸುವವರೆಗೂ ಮನೆಯಿಂದ ಹೊರಬಾರದಂತೆ 250 ಮೀ. ವ್ಯಾಪ್ತಿಯಾ ಚೆಗಿನ ನಿವಾಸಿಗಳಿಗೆ ಸೂಚಿಸಿದ್ದರು.
ಸುಮಾರು 45 ನಿಮಿಷಗಳ ಕಾರ್ಯಾ ಚರಣೆ ಅನಂತರ ಬಾಂಬ್ ನಿಷ್ಕ್ರಿಯಗೊಂಡಿದೆ ಎಂಬ ಸುದ್ದಿ ಕೇಳಿ ಅಲ್ಲಿನ ನಿವಾಸಿಗಳು ನಿಟ್ಟುಸಿರು ಬಿಟ್ಟರು ಎಂದು ಡುಸ್ಸೆಲ್‌ಡಾಫ್ì ಸಮೀಪವೇ ವಾಸವಿರುವ ಕನ್ನಡಿಗರೊಬ್ಬರು ಮಾಹಿತಿ ನೀಡಿದ್ದಾರೆ. ಅಂದಹಾಗೆ, ಈ ರೀತಿ 2ನೇ ಮಹಾಯುದ್ಧದ ವೇಳೆ ಬಳಸಲಾದ ಬಾಂಬ್‌ಗಳು ನೆಲದಲ್ಲಿ ಪತ್ತೆಯಾಗುವುದು ಅಲ್ಲಿನ ಜನರಿಗೆ ಹೊಸತೇನಲ್ಲ. ಜರ್ಮನಿಯ ವಿವಿಧೆಡೆ ನಿರ್ಮಾಣ ಕಾಮಗಾರಿ ನಡೆಸುವಾಗ ಪ್ರತಿ ವರ್ಷ ಸರಾಸರಿ 5,000ಕ್ಕೂ ಹೆಚ್ಚು ಬಾಂಬ್‌ಗಳು ಪತ್ತೆಯಾಗುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.