ವೈರಲ್ ಆದ ನೀಲಿ ಕಣ್ಣಿನ ಬಾಲಕಿಗೆ ಕೋವಿಡ್ 19 ಸೋಂಕು ಇಲ್ಲ
Team Udayavani, Mar 27, 2020, 5:09 PM IST
ಇರಾನ್: ವಿಶ್ವದ ಅತೀ ಮುದ್ದಾದ ಮಗು ಎಂದು ಪ್ರಖ್ಯಾತಿ ಪಡೆದ ಅನಾಹಿತಾ ಹಶೆಮ್ಜಾಡೆ ಕೋವಿಡ್ 19 ನಿಂದ ಬಳಲುತ್ತಿದ್ದಾಳೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದ್ದುದು ಹಳೆ ಸುದ್ದಿ. ಈಗ ಅವಳ ತಾಯಿಯೇ ಮೌನ ಮುರಿದು ನನ್ನ ಮಗಳು ಆರೋಗ್ಯಪೂರ್ಣವಾಗಿದ್ದಾಳೆ. ನೀವೇನೂ ಆತಂಕ ಪಡಬೇಡಿ ಎಂದು ಹೇಳಿದ್ದಾಳೆ.
ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿಯ ಪೋಟೋ ಹಾಕಿ, ಕೋವಿಡ್ 19 ನಿಂದ ಬಳಲುತ್ತಿರುವ ಪ್ರಪಂಚದ ಅತಿ ಸುಂದರ ಮಗುವಿಗಾಗಿ ಎಲ್ಲರೂ ಪ್ರಾರ್ಥಿಸಿ. ಮಗು ಬೇಗ ಚೇತರಿಸಿಕೊಳ್ಳಲಿ ಎಂಬ ಹಾರೈಕೆಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸಾವಿರಾರು ಜನರು ಪೋಸ್ಟ್ ಅನ್ನು ಬೇರೊಂದಿಗೆ ಹಂಚಿ, ಮಗು ಗುಣಮುಖವಾಗಲಿ ಎಂದೂ ಹಾರೈಸಿದ್ದರು.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಂತಾರಾಷ್ಟ್ರೀಯ ಮಾಧ್ಯಮ ಒಂದು ಮತ್ತೂಂದು ಸಾಮಾಜಿಕ ತಾಣದಲ್ಲಿ ಬಾಲಕಿಯ ಮಾಹಿತಿಯನ್ನು ಕಲೆ ಹಾಕಿತು. ಬಳಿಕ ಬಾಲಕಿಯ ಹೆತ್ತವರಿಗೆ ಸುದ್ದಿ ತಿಳಿಸಿತು.
ಇನ್‌ಸ್ಟಾಗ್ರಾಂ ಮೂಲಕ ಸ್ಟಷ್ಟನೆ
ಈ ಹಿನ್ನೆಲೆಯಲ್ಲಿ ಬಾಲಕಿಯ ತಾಯಿ ತನ್ನ ಸಾಮಾಜಿಕ ತಾಣದಲ್ಲಿ ಕಂಡಾಗ ಮಗುವಿನ ಆರೋಗ್ಯ ಕುರಿತ ನೂರಾರು ಪ್ರಶ್ನೆಗಳಿದ್ದವು. ಇವೆಲ್ಲವನ್ನೂ ಗಮನಿಸಿದ ತಾಯಿ ತನ್ನ ಮಗಳು ಹಾಲು ಕುಡಿಯುತ್ತಿರುವ ಪೋಟೋವನ್ನು ಪ್ರಕಟಿಸಿ, ನನ್ನ ಮಗಳು ಆರೋಗ್ಯ ಹಾಗೂ ಸುರಕ್ಷಿತವಾಗಿದ್ದಾಳೆ ಎಂದು ತಿಳಿಸಿ ವೈರಲ್ ಸುದ್ದಿಗೆ ಗುದ್ದು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.