ಅಮೆರಿಕದಲ್ಲೂ ಯೋಗ ವಿ.ವಿ.! ; ಬೆಂಗಳೂರಿನ ಡಾ| ನಾಗೇಂದ್ರ ವಿ.ವಿ.ಯ ಅಧ್ಯಕ್ಷರು
Team Udayavani, Jun 25, 2020, 6:25 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನ್ಯೂಯಾರ್ಕ್: ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಭಾರತವು ಇದೀಗ ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ ಯೋಗ ವಿಶ್ವ ವಿದ್ಯಾನಿಲಯ ಆರಂಭಿಸಿದೆ.
ಭಾರತದ ಹೊರಗೆ ಸ್ಥಾಪಿಸಿರುವ ವಿಶ್ವದ ಮೊದಲ ಯೋಗ ವಿ.ವಿ. ಇದಾಗಿದ್ದು, ವಿವೇಕಾನಂದ ಯೋಗ ವಿಶ್ವವಿದ್ಯಾನಿಲಯ ಎಂದು ಹೆಸರಿಡಲಾಗಿದೆ.
ವಿದೇಶಾಂಗ ಖಾತೆ ರಾಜ್ಯ ಸಚಿವ ಮುರಳೀಧರನ್ ಹಾಗೂ ವಿದೇಶಾಂಗ ವ್ಯವಹಾರಗಳ ಸ್ಥಾಯೀ ಸಮಿತಿ ಅಧ್ಯಕ್ಷ ಪಿ.ಪಿ. ಚೌಧರಿ ಅವರು ನ್ಯೂಯಾರ್ಕ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ವರ್ಚುವಲ್ ಕಾರ್ಯಕ್ರಮದ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.
ಗಣ್ಯರ ಶ್ಲಾಘನೆ
ಅಮೆರಿಕದಲ್ಲಿ ಯೋಗ ವಿ.ವಿ. ಆರಂಭವಾಗಿರುವುದಕ್ಕೆ ಬೆಂಗಳೂರಿನ ಶ್ರೀ ಶ್ರೀ ರವಿಶಂಕರ್ ಗುರೂಜಿ ಮತ್ತು ಯೋಗ ಗುರು ಬಾಬಾ ರಾಮ್ ದೇವ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಜಗತ್ತಿನಾದ್ಯಂತ ಭಾರತದ ಹೆಮ್ಮೆ ಮೊಳಗಲಿದೆ ಎಂದು ಹೇಳಿದ್ದಾರೆ.
ವಿ.ವಿ.ಗೆ ಬೆಂಗಳೂರು ನಂಟು
ಬೆಂಗಳೂರಿನಲ್ಲಿರುವ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ (ಎಸ್-ವ್ಯಾಸ) ಕುಲಪತಿ, ಖ್ಯಾತ ಯೋಗಗುರು ಡಾ| ಎಚ್.ಆರ್. ನಾಗೇಂದ್ರ ಯೋಗ ವಿ.ವಿ.ಯ ಮೊದಲ ಅಧ್ಯಕ್ಷರಾಗಿದ್ದಾರೆ. ಇವರು ಪ್ರಧಾನಿ ನರೇಂದ್ರ ಮೋದಿ ಅವರ ಯೋಗ ಗುರು ಎಂಬುದು ವಿಶೇಷ. ಪ್ರಸಕ್ತ ವರ್ಷದ ತರಗತಿ ಆಗಸ್ಟ್ 24ರಿಂದ ಆರಂಭವಾಗಲಿದೆ.
ಅಲೋಪತಿ ಹಾಗೂ ಆಯುಷ್ ವ್ಯವಸ್ಥೆಗಳ ಮೂಲಕ ಸಮಗ್ರವಾದ ಆರೋಗ್ಯ ರಕ್ಷಣೆಯನ್ನು ವಿಶ್ವಕ್ಕೆ ನೀಡುವ ನಿಟ್ಟಿನಲ್ಲಿ ಅಧ್ಯಯನ ಹಾಗೂ ಸಂಶೋಧನೆ ನಡೆಸಲಾಗುವುದು. ಈ ವಿ.ವಿ.ಯ ಮೂಲಕ ಪೂರ್ವ ಹಾಗೂ ಪಶ್ಚಿಮಗಳಲ್ಲಿನ ಅತ್ಯುತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ನಡೆಸಲಾಗುವುದು.
– ಡಾ| ಎಚ್.ಆರ್. ನಾಗೇಂದ್ರ, ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.