ವಿಶ್ವದ ಅತೀದೊಡ್ಡ ‘ಸಯಾಮಿ’ ವಿಮಾನ ಅಮೆರಿಕಾದಲ್ಲಿ ಯಶಸ್ವೀ ಹಾರಾಟ
ಈ ದೈತ್ಯ ವಿಮಾನದ ರೆಕ್ಕೆಗಳ ಉದ್ದ ಒಂದು ಫುಟ್ಬಾಲ್ ಮೈದಾನಕ್ಕೆ ಸಮ!
Team Udayavani, Apr 14, 2019, 9:53 AM IST
ಲಾಸ್ ಏಂಜಲೀಸ್: ವಿಶ್ವದ ಅತೀ ದೊಡ್ಡ ವಿಮಾನ ಎಂದೇ ಪರಿಗಣಿಸಲ್ಪಟ್ಟಿರುವ ‘ರೋಕ್’ ಇಂದು ಕ್ಯಾಲಿಫೋರ್ನಿಯಾದ ಮೊಝಾವೇ ಮರುಭೂಮಿಯಲ್ಲಿ ತನ್ನ ಪರಿಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿತು.
ಮೈಕ್ರೋಸಾಫ್ಟ್ ನ ಮಾಜೀ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಪೌಲ್ ಅಲೇನ್ ಅವರ ಸ್ಟ್ರಾಟೋ ಲಾಂಚ್ ಸಿಸ್ಟಮ್ಸ್ ಕಾರ್ಪ್ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಈ ದೈತ್ಯ ವಿಮಾನವು ಮುಂಬರುವ ದಿನಗಳಲ್ಲಿ ರಾಕೆಟ್ ಗಳನ್ನು ಗುರಿಸೇರಿಸಲು ಮತ್ತು ಬಾಹ್ಯಾಕಾಶ ವಾಹನಗಳನ್ನು ಕಕ್ಷೆಗೆ ಸೇರಿಸುವ ಮಹದುದ್ದೇಶಕ್ಕೆ ಬಳಕೆಯಾಗುವ ವಿಶ್ವಾಸವನ್ನು ಇದನ್ನು ನಿರ್ಮಿಸಿರುವ ಕಂಪೆನಿಯು ವ್ಯಕ್ತಪಡಿಸಿದೆ.
ಈ ಶ್ವೇತ ವಿಮಾನದ ರೆಕ್ಕೆಗಳ ಗಾತ್ರ ಅಮೆರಿಕಾದ ಒಂದು ಫುಟ್ಬಾಲ್ ಮೈದಾನದ ವಿಸ್ತೀರ್ಣಕ್ಕೆ ಸಮವಾಗಿದೆ. ಇದು ಸಯಾಮಿ ಮಾದರಿಯ ವಿಮಾನವಾಗಿದ್ದು ಇದರಲ್ಲಿ ಆರು ಎಂಜಿನ್ ಗಳು ಕಾರ್ಯನಿರ್ವಹಿಸುತ್ತವೆ. ಭವಿಷ್ಯದ ಬಾಹ್ಯಕಾಶ ವಿಜ್ಞಾನ ಕ್ಷೇತ್ರದಲ್ಲಿ ‘ಗೇಮ್ ಚೇಂಜರ್’ ಎಂದೇ ಬಿಂಬಿತವಾಗಿರುವ ಈ ಸಯಾಮಿ ಮಿಮಾನ ‘ರೋಕ್’ ಇಂದು ತನ್ನ ಪರೀಕ್ಷಾರ್ಥ ಹಾರಾಟದಲ್ಲಿ ಸುಮಾರು ಎರಡು ಗಂಟೆಗಳವರೆಗೆ ಆಗಸದಲ್ಲಿ ಹಾರಾಡುತ್ತಿತ್ತು ಮತ್ತು ಮೊಝಾವೆಯಲ್ಲಿರುವ ಏರ್ ಆಂಡ್ ಸ್ಪೇಸ್ ನಿಲ್ದಾಣದಲ್ಲಿ ಯಶಸ್ವಿಯಾಗಿ ಅವತರಣಗೊಂಡಿತು ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ದೈತ್ಯ ಸಯಾಮಿ ವಿಮಾನದ ಹಾರಾಟಕ್ಕೆ ಸಾಕ್ಷಿಯಾಗಿದ್ದ ನೂರಾರು ಜನರು ಹರ್ಷೋದ್ಘಾರದೊಂದಿಗೆ ಈ ವಿಮಾನವನ್ನು ಸ್ವಾಗತಿಸಿದರು.
ಸ್ಟ್ರಾಟೋ ಲಾಂಚ್ ಕಂಪೆನಿಯ ಸಂಸ್ಥಾಪಕ ಪೌಲ್ ಅಲೆನ್ ಅವರ ಕನಸಿನ ಕೂಸಾಗಿರುವ ಈ ‘ಸಯಾಮಿ’ ವಿಮಾನದ ನಿರ್ಮಾಣದ ರೂಪುರೇಷೆಯನ್ನು ಪೌಲ್ ಅವರೇ ರೂಪಿಸಿದ್ದರು ಆದರೆ ಈ ವಿಮಾನ ಮಾದರಿ ನಿರ್ಮಾಣ ಹಂತದಲ್ಲಿರುವಾಗಲೇ ಅಂದರೆ 2018 ಅಕ್ಟೋಬರ್ ತಿಂಗಳಿನಲ್ಲಿ ಪೌಲ್ ಅವರು ಕ್ಯಾನ್ಸರ್ ಮಾರಿಗೆ ಬಲಿಯಾಗಿದ್ದರು. ಪೌಲ್ ಅವರಿಂದ 2011ರಲ್ಲಿ ಸ್ಥಾಪಿಸಲ್ಪಟ್ಟ ಸ್ಟ್ರಾಟೋ ಲಾಂಚ್ ಕಂಪೆನಿಯು ತನ್ನ ಈ ಹೊಸ ಸಯಾಮಿ ರೋಕ್ ವಿಮಾನದ ಮೂಲಕ 2020ರ ಒಳಗೆ ಮೊದಲ ರಾಕೆಟ್ ಅನ್ನು ಅಂತರಿಕ್ಷಕ್ಕೆ ಉಡಾಯಿಸುವ ಗುರಿಯನ್ನು ಹೊಂದಿದೆ.
5ಲಕ್ಷ ಪೌಂಡ್ ವರೆಗಿನ ತೂಕದ ರಾಕೆಟ್ ಗಳು ಮತ್ತು ಇತರೇ ಬಾಹ್ಯಾಕಾಶ ವಾಹನಗಳನ್ನು 35 ಸಾವಿರ ಅಡಿ ಅಂತರದ ಕಕ್ಷೆಗೆ ಸೇರಿಸುವ ಸಾಮರ್ಥ್ಯವನ್ನು ಹೊಂದಿದೆ. ರೋಕ್ ತನ್ನ ಪ್ರಯೋಗಾರ್ಥ ಹಾರಾಟ ಸಂದರ್ಭದಲ್ಲಿ ಭೂಮಿಯಿಂದ 17,000 ಅಡಿಗಳವರೆಗೆ ಏರಿ ಗಂಟೆಗೆ ಗರಿಷ್ಠ 189 ಮೈಲು ವೇಗದಲ್ಲಿ ಹಾರಾಟ ನಡೆಸಿದೆ ಎಂದು ತಿಳಿದುಬಂದಿದೆ. ರೋಕ್ ನಿರ್ಮಾತೃ ಕಂಪೆನಿಯ ಪ್ರಕಾರ ಭವಿಷ್ಯದಲ್ಲಿ ರಾಕೆಟ್ ಹಾಗೂ ಉಪಗ್ರಹಗಳ ಉಡಾವಣೆ ‘ಒಂದು ವಿಮಾನ ಬುಕ್ ಮಾಡಿದಷ್ಟೇ ಸುಲಭವಾಗಲಿದೆ.’
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.