49,000 ಎಕರೆ ಜಾಗ ತುಂಬಿದ ಒಂದೇ ಗಿಡ! ಇದು ವಿಶ್ವದ ಅತಿ ವಿಶಾಲವಾದ ಸಸ್ಯ
Team Udayavani, Jun 5, 2022, 7:15 AM IST
ಕೆನ್‌ಬೆರ್ರಾ: ಒಂದು ಗಿಡ ಎಷ್ಟು ವಿಸ್ತಾರವಾಗಿ ಬೆಳೆಯಬಹುದು? 1 ಕಿ.ಮೀ ಅಥವಾ 2 ಕಿ.ಮೀ ಎಂದು ನೀವು ಲೆಕ್ಕ ಹಾಕಬಹುದು. ಆದರೆ ಆಸ್ಟ್ರೇಲಿಯಾದ ಸಮುದ್ರದ ಅಡಿಯಲ್ಲಿರುವ ಈ ಸಸ್ಯ ಬೆಳೆದಿರುವುದು ಬರೋಬ್ಬರಿ 180ಕಿ.ಮೀ. ವಿಸ್ತಾರದಷ್ಟು!
20,000 ಹೆಕ್ಟೇರ್(49,400 ಎಕರೆ) ಜಾಗದಷ್ಟು ವಿಸ್ತಾರವಾಗಿದೆ ಈ ಹುಲ್ಲು.
ಹೌದು. ಆಸ್ಟ್ರೇಲಿಯಾದ ಪಶ್ಚಿಮ ಭಾಗದಲ್ಲಿರುವ “ಶಾರ್ಕ್ ಬೇ’ನ ಸಮುದ್ರದಡಿಯಲ್ಲಿ ರಿಬ್ಬನ್ ವೀಡ್ (ಪೊಸಿಡೋನಿಯಾ ಆಸ್ಟ್ರೇಲಿಸ್) ಹೆಸರಿನ ಹುಲ್ಲು ಇಷ್ಟೊಂದು ವಿಸ್ತಾರವಾಗಿ ಹರಡಿಕೊಂಡಿದೆ.
ಈ ಸಸ್ಯದ ಬಗ್ಗೆ ಫ್ಲಿಂಡರ್ಸ್ ವಿಶ್ವವಿದ್ಯಾಲಯ ಮತ್ತು ಪಶ್ಚಿಮ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಸಂಶೋಧಕರು ಸಂಶೋಧನೆ ಮಾಡಿದ್ದು, ಅನೇಕ ಸತ್ಯಾಂಶಗಳನ್ನು ಹೊರತೆಗೆದಿದ್ದಾರೆ.
ಅಂದ ಹಾಗೆ ಈ ಹುಲ್ಲಿಗೆ ಬರೋಬ್ಬರಿ 4,500 ವರ್ಷ ವಯಸ್ಸಾಗಿದೆಯಂತೆ. ಇದೇ ಜಾತಿಯ ಬೇರೆ ಹುಲ್ಲಿನಲ್ಲಿರುವ ಕ್ರೋಮೋಜೋಮ್‌ಗೆ ಹೋಲಿಸಿದರೆ ಇದರಲ್ಲಿರುವ ಕ್ರೋಮೋಜೋಮ್ ಎರಡು ಪಟ್ಟಿದೆ. ಎಲ್ಲ ಸಸ್ಯಗಳು ತನ್ನ ಎರಡೂ ಪೋಷಕರಿಂದ ತಲಾ ಶೇ.50 ಜಿನೋಮ್ ತೆಗೆದುಕೊಂಡು ಬೇಳೆದರೆ, ಈ ಸಸಿ ಒಂದೇ ಪೋಷಕರಿಂದ ಶೇ.100 ಜಿನೋಮ್ ಪಡೆದಿದೆ.
180 ಕಿ.ಮೀ.ನಷ್ಟು ವಿಸ್ತಾರವಾಗಿ ಹರಡಿಕೊಂಡಿದ್ದ ಹುಲ್ಲಿನ ಹಲವು ಭಾಗಗಳನ್ನು ತೆಗೆದುಕೊಂಡು ಬಂದು ಸಂಶೋಧನೆ ನಡೆಸಲಾಗಿದೆ. ಅದರಲ್ಲಿ ಈ ಪೂರ್ತಿ ಹುಲ್ಲು ಒಂದೇ ಸಸ್ಯ ಎನ್ನುವುದು ತಿಳಿದುಬಂದಿದೆ. ಪ್ರತಿ ವರ್ಷ ಈ ಹುಲ್ಲು 35 ಸೆಂ.ಮೀ.ನಷ್ಟು ವಿಸ್ತಾರ ಹೆಚ್ಚಿಸಿಕೊಳ್ಳುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಉಪಯೋಗವೇನು?
ಸಮುದ್ರದಡಿಯಲ್ಲಿರುವ ಹುಲ್ಲಿನಿಂದ ನಮಗೇನು ಲಾಭ ಎನ್ನುವ ಪ್ರಶ್ನೆ ಮೂಡಬಹುದು. ಆದರೆ ಈ ಹುಲ್ಲಿನಿಂದಾಗಿ ಮನುಕುಲಕ್ಕೆ ಸಾಕಷ್ಟು ಒಳಿತಿದೆ. ಈ ಹುಲ್ಲಿನಿಂದಾಗಿ ಕರಾವಳಿ ಭಾಗದ ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ. ಹಾಗೆಯೇ ಈ ಹುಲ್ಲು ಇಂಗಾಲದ ಡೈ ಆಕ್ಸೆ„ಡ್ ಹೀರಿಕೊಂಡು ಗಾಳಿಯನ್ನು ಶುದ್ಧವಾಗಿಸುವುದರ ಜತೆ ನೀರನ್ನೂ ಶುದ್ಧವಾಗಿಡುತ್ತದೆ ಎಂದಿದ್ದಾರೆ ಸಂಶೋಧಕರು.
ಅತಿ ವಿಶಾಲವಾದ ಸಸ್ಯಗಳು
ರಿಬ್ಬನ್ ವೀಡ್- 49,400 ಎಕರೆ ವಿಸ್ತೀರ್ಣ
ವಿಶ್ವದ ಅತ್ಯಂತ ವಿಸ್ತಾರದ ಸಸ್ಯ
ಕ್ಲೋನಲ್ ಕಾಲೊನಿ-107 ಎಕರೆ ವಿಸ್ತೀರ್ಣ
ವಿಶ್ವದ 2ನೇ ಅತಿ ದೊಡ್ಡ ವಿಸ್ತಾರದ ಮರ
ದಿ ಗ್ರೇಟ್ ಬನ್ಯಾನ್-3.48 ಎಕರೆ ವಿಸ್ತೀರ್ಣ
ಭಾರತದ ಅತಿ ಹೆಚ್ಚು ವಿಸ್ತಾರದ ಮರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
MUST WATCH
ಹೊಸ ಸೇರ್ಪಡೆ
Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.