ಯೆಮೆನ್‌ನಲ್ಲಿ ಮೊದಲ ಕೋವಿಡ್‌ ಪಾಸಿಟಿವ್‌; ಇಷ್ಟಕ್ಕೇ ಈ ದೇಶ ಕಂಗಾಲು!

ಸಾಮಾನ್ಯ ಜ್ವರಕ್ಕೆ ಚಿಕಿತ್ಸೆ ನೀಡುವಷ್ಟು ಒಳ್ಳೆಯ ಆಸ್ಪತ್ರೆಯೂ ಇಲ್ಲಿಲ್ಲ

Team Udayavani, Apr 11, 2020, 12:15 PM IST

ಯೆಮೆನ್‌ನಲ್ಲಿ ಮೊದಲ ಕೋವಿಡ್‌ ಪಾಸಿಟಿವ್‌; ಇಷ್ಟಕ್ಕೇ ಈ ದೇಶ ಕಂಗಾಲು!

ಅಡೆನ್‌: ಕೊಲ್ಲಿ ರಾಷ್ಟ್ರವಾಗಿರುವ ಯೆಮೆನ್‌ನಲ್ಲಿ ಇದೀಗ ಮೊದಲ ಕೋವಿಡ್‌ ಪೊಸಿಟಿವ್‌ ಪ್ರಕರಣ ವರದಿಯಾಗಿದೆ. ನಿಜಕ್ಕಾದರೆ ಇದು ತುಸು ನೆಮ್ಮದಿ ನೀಡುವ ವಿಷಯವಾಗಬೇಕಿತ್ತು. ಏಕೆಂದರೆ ಅಮೆರಿಕವೂ ಸೇರಿದಂತೆ ಜಗತ್ತಿನ ಘಟಾನುಘಟಿ ದೇಶಗಳೇ ಕೋವಿಡ್‌ ವೈರಾಣುವಿನ ವಿರುದ್ಧ ಹೋರಾಡಲಾಗದೆ ಪರಿತಪಿಸುತ್ತಿವೆ. ಸುಮಾರು 200 ದೇಶಗಳಲ್ಲಿ ಕೋವಿಡ್‌ ತಾಂಡವವಾಡುತ್ತಿದೆ. ಹೀಗಿರುವಾಗ ಯೆಮೆನ್‌ನಂಥ ದೇಶ ಕೋವಿಡ್‌ ಅನ್ನು ಇಷ್ಟು ಸಮಯ ತಡೆ ಹಿಡಿದದ್ದೇ ಒಂದು ಸಾಧನೆಯಾಗಬೇಕಿತ್ತು. ಆದರೆ ಅಲ್ಲಿನ ಪರಿಸ್ಥಿತಿ ಹಾಗಿಲ್ಲ. ಹೀಗಾಗಿ ಒಂದು ಪೊಸಿಟಿವ್‌ ಪ್ರಕರಣ ವರದಿಯಾಗುತ್ತಿರುವಂತೆ ಆ ದೇಶ ಕಂಗಾಲಾಗಿದೆ.

ಯೆಮೆನ್‌ನಲ್ಲಿ ಇಲ್ಲಗಳ ಸರಮಾಲೆಯೇ ಇದೆ. ಎಲ್ಲ ಬಿಟ್ಟು ಇಂಥ ಬಿಕ್ಕಟ್ಟನ್ನು ಎದುರಿಸಲು ಸಶಕ್ತವಾಗಿರುವ ಒಂದು ಸರಕಾರವೂ ಅಲ್ಲಿಲ್ಲ. ಈಗ ಆಡಳಿತ ನಡೆಸುತ್ತಿರುವುದು ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದಿರುವ ಒಂದು ತಾತ್ಕಾಲಿಕ ಸರಕಾರ.

ಯೆಮೆನ್‌ನ ಈ ಸ್ಥಿತಿಗೆ ಕಾರಣ ವರ್ಷಾನುಗಟ್ಟಲೆ ಅದು ಹೌತಿ ಬಂಡುಕೋರರ ನಡೆಸಿದ ಉಗ್ರ ಕಾಳಗ. ಈ ಕಾಳಗದಿಂದ ಯೆಮೆನ್‌ನ ಆರೋಗ್ಯ ವಲಯ ಸಂಪೂರ್ಣ ನೆಲಕಚ್ಚಿ ಹೋಗಿದೆ. ಕೋವಿಡ್‌ ಬಿಡಿ ಸರಿಯಾದ ಒಂದು ಜ್ವರಕ್ಕೆ ಚಿಕಿತ್ಸೆ ನೀಡುವಷ್ಟು ಒಳ್ಳೆಯ ಆಸ್ಪತ್ರೆಯೂ ಅಲ್ಲಿಲ್ಲ. ಹೀಗೆ ಯಾವ ವೈದ್ಯಕೀಯ ಸೌಲಭ್ಯವೂ ಇಲ್ಲದಿರುವುದರಿಂದ ಅಲ್ಲಿನ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರು ಕೋವಿಡ್‌ ಬಂತು ಎಂಬ ಸುದ್ದಿ ಕೇಳಿ ಭಯದಿಂದ ನಡುಗುತ್ತಿದ್ದಾರೆ. ಏಕೆಂದರೆ ಕೋವಿಡ್‌ಗೆ ಮೊದಲ ಮುಖಾಮುಖೀಯಾಗಬೇಕಾದದ್ದೇ ಅವರು. ತಮ್ಮನ್ನೇ ರಕ್ಷಿಸಿಕೊಳ್ಳಲು ಸಾಕಷ್ಟು ಸೌಲಭ್ಯ ಇಲ್ಲದ ದೇಶದ ವೈದ್ಯರು ರೋಗಿಗಳನ್ನು ಹೇಗೆ ರಕ್ಷಿಸಿಯಾರು?

ಯೆಮೆನ್‌ನ ಹೆಚ್ಚಿನ ಆಸ್ಪತ್ರೆಗಳು ಹೌತಿ ಬಂಡುಕೋರರ ಜತೆಗಿನ ಹೋರಾಟದ ಪರಿಣಾಮವಾಗಿ ನಾಶವಾಗಿವೆ ಇಲ್ಲವೆ ಮುಚ್ಚಿವೆ. ಈ ದೇಶದ ಜನರಿಗೆ ಈಗ ಏನಿದ್ದರೂ ವಿಶ್ವಸಂಸ್ಥೆಯೊಂದೇ ಅಭಯದಾತ. ಅಲ್ಲಿಂದ ಏನಾದರೂ ಬಂದರೆ ಜನರು ಉಳಿದಾರು. ಇಲ್ಲದಿದ್ದರೆ ದೇವರೇ ಗತಿ ಎಂಬ ಸ್ಥಿತಿ.

ಕಡು ಬಡತನ, ಕುಡಿಯುವ ನೀರಿನ ಭಾರೀ ಕೊರತೆ, ನೈರ್ಮಲ್ಯದ ಕೊರತೆ, ಔಷಧಿಗಳ ಕೊರತೆ ಹೀಗೆ ಹತ್ತಾರು ಸಮಸ್ಯೆಗಳ ಮಡುವಾಗಿರುವ ಯೆಮೆನ್‌ ಈಗಾಗಲೇ ರೋಗರುಜಿನಗಳ ಹುಲುಸು ಬೆಳೆಗೆ ಪೂರಕ ವಾತಾವರಣವನ್ನು ಹೊಂದಿದೆ. ಕೆಲವು ವರ್ಷಗಳ ಹಿಂದೆ ಕಾಲರಾ ರೋಗ ಕಾಡಿದಾಗ ಯೆಮೆನ್‌ ಅಕ್ಷರಶಃ ತತ್ತರಿಸಿ ಹೋಗಿತ್ತು.

ಟಾಪ್ ನ್ಯೂಸ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

20-uv-fusion

UV Fusion: ಜೀವಂತಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.