‘ಝೀರೋ’ದಿಂದ ಬದುಕು ಪ್ರಾರಂಭಿಸಿದ ಸುಗಾ ಇದೀಗ ಅಬೆಯ ಉತ್ತರಾಧಿಕಾರಿ


Team Udayavani, Sep 14, 2020, 5:43 PM IST

‘ಝೀರೋ’ದಿಂದ ಬದುಕು ಪ್ರಾರಂಭಿಸಿದ ಸುಗಾ ಇದೀಗ ಅಬೆಯ ಉತ್ತರಾಧಿಕಾರಿ

ಟೋಕಿಯೋ: ಜಪಾನ್ ದೇಶದಲ್ಲಿ ಅತೀ ಸುದೀರ್ಘಾವಧಿಗೆ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದ ಶಿಂಜೋ ಅಬೆಯ ಉತ್ತರಾಧಿಕಾರಿಯಾಗಿ ಅವರ ಪರಮಾಪ್ತ ಮತ್ತು ನಿಕಟವರ್ತಿ ಯೋಶಿಹಿಡೆ ಸುಗಾ ಅವರು ಆಯ್ಕೆಯಾಗಿದ್ದಾರೆ.

ಎಂಟು ವರ್ಷಗಳಷ್ಟು ಸುದೀರ್ಘಾವಧಿಗೆ ಪ್ರಧಾನಿಯಾಗಿ ಅಧಿಕಾರದಲ್ಲಿದ್ದ ಅಬೆ ಅವರು ಅನಾರೋಗ್ಯದ ಕಾರಣ ನೀಡಿ ತಾವು ಪ್ರಧಾನಮಂತ್ರಿ ಸ್ಥಾನವನ್ನು ತ್ಯಜಿಸುತ್ತಿರುವುದಾಗಿ ಇತ್ತೀಚೆಗಷ್ಟೇ ಘೋಷಿಸಿದ್ದರು.

ಅಬೆ ಅವರ ಈ ದಿಢೀರ್ ನಿರ್ಧಾರದ ಬಳಿಕ ಅವರ ಉತ್ತರಾಧಿಕಾರಿ ಯಾರಾಗುತ್ತಾರೆ ಎಂಬ ಕುತೂಹಲ ಸಹಜವಾಗಿಯೇ ಜಪಾನ್ ಸೇರಿದಂತೆ ವಿಶ್ವ ರಾಜಕೀಯ ಸಂಗತಿಗಳಲ್ಲಿ ಆಸಕ್ತಿ ಇರುವವರಲ್ಲಿ ಮನೆ ಮಾಡಿತ್ತು.

ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಜಪಾನ್ ನಲ್ಲಿ ಸರಕಾರ ನಡೆಸುತ್ತಿರುವ ಲಿಬರಲ್ ಡೆಮಾಕ್ರಾಟಿಕ್ ಪಾರ್ಟಿಯ (LDP) ನಾಯಕರಾಗಿ 71 ವರ್ಷದ ಯೋಶಿಹಿಡೆ ಸುಗಾ ಅವರು ಆಯ್ಕೆಯಾಗಿದ್ದಾರೆ. ಈ ಮೂಲಕ ಜಪಾನ್ ದೇಶದ ನೂತನ ಪ್ರಧಾನಿಯಾಗುವ ಅವಕಾಶ ಸುಗಾ ಪಾಲಿಗೆ ಇದಿಗ ಸುಗಮವಾದಂತಾಗಿದೆ.

ಸೋಮವಾರ ನಡೆದ LDP ಪಕ್ಷದ ಆಂತರಿಕ ಚುನಾವಣೆಯಲ್ಲಿ ಸುಗಾ ಅವರು 534 ಮತಗಳ ಪೈಕಿ 377 ಮತಗಳನ್ನು ಪಡೆದರು. ಇದು LDP ಪಕ್ಷದ ಸಂಸತ್ ಸದಸ್ಯರು ಹಾಗೂ 47 ಸ್ಥಳೀಯ ವಿಭಾಗಗಳ ಪ್ರತಿನಿಧಿಗಳನ್ನು ಇದು ಹೊಂದಿದೆ.

ಚತುರಮತಿ ರಾಜಕಾರಣಿ ಎಂದೇ ಜಪಾನ್ ರಾಜಕೀಯ ವಲಯದಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಸುಗಾ ಅವರು ಅಬೆ ಅವರ ಸುದೀರ್ಘ ಆಡಳಿತಾವಧಿಯಲ್ಲಿ ಓರ್ವ ಸಮರ್ಥ ವಕ್ತಾರನಾಗಿ, ಸಲಹೆಗಾರನಾಗಿ ಮತ್ತು ಸರಕಾರದ ನೀತಿಗಳ ಅನುಷ್ಠಾನಗಾರನಾಗಿ ತಮ್ಮ ಪಾಲಿನ ಜವಾಬ್ದಾರಿಯನ್ನು ಸಮರ್ಥವಾಗಿಯೇ ನಿರ್ವಹಿಸಿಕೊಂಡು ಬಂದಿದ್ದಾರೆ.

ದೈನಂದಿನ ಪತ್ರಿಕಾಗೋಷ್ಠಿಗಳಲ್ಲಿ ಸರಕಾರದ ಪರವಾಗಿ ಮಾತನಾಡುತ್ತಿದ್ದ ಸುಗಾ ಅವರು ನಿಜಾರ್ಥದಲ್ಲಿ ಶಿಂಜೋ ಅಬೆ ಸರಕಾರದ ‘ಫೇಸ್’ ಆಗಿಯೇ ಗುರುತಿಸಲ್ಪಟ್ಟಿದ್ದರು.

ಇದನ್ನೂ ಓದಿ: ನಟಿ ಸಂಜನಾ ಗಲ್ರಾನಿ ಮತ್ತೆ ಮೂರು ದಿನ ಸಿಸಿಬಿ ಪೊಲೀಸರ ವಶಕ್ಕೆ ನೀಡಿದ ಕೋರ್ಟ್


ರೈತಾಪಿ ವರ್ಗದ ಹಿನ್ನಲೆಯಲ್ಲಿ ಬೆಳೆದು ಬಂದ ರಾಜಕಾರಣಿ
ಉತ್ತರ ಜಪಾನಿನ ಗ್ರಾಮೀಣ ಪ್ರದೇಶದಲ್ಲಿ ಸ್ಟ್ರಾಬೆರಿ ರೈತನ ಮಗನಾಗಿ ಜನಿಸಿದ ಯೋಶಿಹಿಡೆ ಸುಗಾ ಅವರು ತಮ್ಮ ಪ್ರೌಢ ಶಾಲಾ ಶಿಕ್ಷಣವನ್ನು ಪೂರೈಸಿದ ಬಳಿಕ ಟೋಕಿಯೋ ನಗರಕ್ಕೆ ಆಗಮಿಸಿದರು. ಇಲ್ಲಿ ಉನ್ನತ ಶಿಕ್ಷಣಕ್ಕಾಗಿ ಅರೆ ಕಾಲಿಕ ಉದ್ಯೋಗದ ಮೊರೆ ಹೋದ ಸುಗಾ ಅವರು ಬಹಳ ಕಷ್ಟದಿಂದಲೇ ರಾತ್ರಿ ಕಾಲೇಜು ಶಿಕ್ಷಣವನ್ನು ಪೂರೈಸುತ್ತಾರೆ.

ಬಳಿಕ 1987ರಲ್ಲಿ ಸುಗಾ ಅವರು ಪ್ರಪ್ರಥಮ ಬಾರಿಗೆ ಯೊಕೊಹೊಮಾ ನಗರದ ಮುನ್ಸಿಪಲ್ ಅಸೆಂಬ್ಲಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸುತ್ತಾರೆ.

ಇತ್ತ, 2012ರಲ್ಲಿ ಶಿಂಜೋ ಅಬೆ ಅವರು ಎಲ್ಲಾ ವ್ಯತಿರಿಕ್ತತೆಗಳನ್ನು ಮೆಟ್ಟಿನಿಂತು ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರವನ್ನು ವಹಿಸಿಕೊಂಡ ಸಂದರ್ಭದಲ್ಲಿ ಅಬೆ ಅವರು ಸುಗಾ ಅವರನ್ನು ಪ್ರಧಾನ ಸಂಪುಟ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುತ್ತಾರೆ. ಇದು ಅತ್ಯಂತ ಆಯಕಟ್ಟಿನ ಹುದ್ದೆಯಾಗಿದ್ದು ಅಬೆ ಅವರ ಬಲಗೈಯಂತೆ ಸುಗಾ ಅವರು ತಮ್ಮ ರಾಜಕೀಯ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಸಿಕ್ಕ ಈ ಅವಕಾಶವನ್ನು ಎಲ್ಲಾ ರೀತಿಯಲ್ಲೂ ಸದುಪಯೋಗಪಡಿಸಿಕೊಳ್ಳುತ್ತಾರೆ.

ಮುಖ್ಯ ಸಂಪುಟ ಕಾರ್ಯದರ್ಶಿ, ಸರಕಾರದ ಉನ್ನತ ವಕ್ತಾರ, ನೀತಿ ನಿರೂಪಣೆಗಳನ್ನು ಜಾರಿಗೊಳಿಸುವಲ್ಲಿ ಸರಕಾರ ಮತ್ತು ಕಾರ್ಯಾಂಗದ ನಡುವೆ ಸಂವಹನ ರೂಪಿಸುವುದು ಸೇರಿದಂತೆ ಸುಗಮ ಆಡಳಿತ ವಿಚಾರದಲ್ಲಿ ಪ್ರಧಾನಿ ಅಬೆ ಅವರ ಹೆಗಲಿಗೆ ಹೆಗಲು ಕೊಟ್ಟು ಸುಗಾ ಅವರು ಈ ಎಂಟು ವರ್ಷಗಳ ಅವಧಿಯಲ್ಲಿ ಓರ್ವ ಪರಿಪೂರ್ಣ ರಾಜಕಾರಣಿ ಮತ್ತು ಪಕ್ಷ ಆಡಳಿತಗಾರನಾಗಿ ರೂಪುಗೊಳ್ಳುತ್ತಾ ಸಾಗುತ್ತಾರೆ.

ಇದನ್ನೂ ಓದಿ: ರಿಯಾಗೆ ಡ್ರಗ್ಸ್ ಸರಬರಾಜು ಮಾಡ್ತಿದ್ದದ್ದು ನಟಿ ಸಾರಾ ಅಲಿ ಖಾನ್? ಈಕೆ ಸ್ಟಾರ್ ನಟನ ಪುತ್ರಿ

ದೇಶದ ಉನ್ನತ ಹುದ್ದೆಗೆ ಪಕ್ಷವು ತನ್ನ ಉಮೇದುವಾರಿಕೆಯನ್ನು ಸೂಚಿಸಿದ ಸಂದರ್ಭದಲ್ಲಿ ಸುಗಾ ಅವರು ಉದ್ಘರಿಸಿದ್ದು ಹೀಗೆ ‘ಶೂನ್ಯದಿಂದ ಪ್ರಾರಂಭಿಸಿ ಇಲ್ಲಿಯವರೆಗೆ’ ಎಂದು.

‘ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಲಿಬರಲ್ ಡೆಮಾಕ್ರಾಟಿಕ್ ಪಕ್ಷದ ನಾಯಕನಾಗಿ ಆಯ್ಕೆಗೊಳ್ಳಲು ನನ್ನಂತಹ ಸಾಧಾರಣ ಹಿನ್ನಲೆಯಿಂದ ಬಂದ ವ್ಯಕ್ತಿಗೆ ಸಾಧ್ಯವಾಗಿರುವುದೇ ಒಂದು ಸುಯೋಗ. ಇದೀಗ ನನ್ನ ಸರ್ವಸ್ವವನ್ನೂ ನಾನು ಜಪಾನ್ ಹಾಗೂ ಜಪಾನಿಗರ ಒಳಿತಿಗಾಗಿ ಮುಡಿಪಾಗಿಡುತ್ತೇನೆ’ ಎಂದು ಸುಗಾ ಭಾವುಕರಾಗಿ ನುಡಿಯುತ್ತಾರೆ.

ಇದನ್ನೂ ಓದಿ: ಮಾಜಿ ಟಿಕ್ ಟಾಕ್ ಸ್ಟಾರ್ ಗಳಿಗೆ ಇದೀಗ ನಟನಾ ಕ್ಷೇತ್ರದಲ್ಲಿ ಭಾರೀ ಬೇಡಿಕೆ

ಸುಗಾ ಮುಂದಿರುವ ಸವಾಲುಗಳು:
ಶಿಂಜೋ ಅಬೆ ಅವರ ಜೊತೆಯಲ್ಲಿದ್ದೇ ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ಸುಗಾ ಅವರ ಮುಂದಿನ ರಾಜಕೀಯ ಜೀವನ ಹೂವಿನ ಹಾಸಿಗೆಯೇನಲ್ಲ. ಕೋವಿಡ್ 19 ಕಾರಣದಿಂದ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತುವ ಮಹತ್ವದ ಸವಾಲು ಇವರ ಮುಂದಿದೆ. ಇನ್ನು ಮುಂದೂಡಲ್ಪಟ್ಟಿರುವ ಒಲಂಪಿಕ್ಸ್ ಕೂಟವನ್ನು ಸಾಂಗವಾಗಿ ನಡೆಸಿ ವಿಶ್ವದ ಮುಂದೆ ಜಪಾನ್ ದೇಶದ ತಾಕತ್ತನ್ನು ನಿರೂಪಿಸುವ ಬಲುದೊಡ್ಡ ಜವಾಬ್ದಾರಿಯೂ ಸುಗಾ ಹೆಗಲ ಮೇಲಿದೆ.

ಇನ್ನು ಹೊಸದಾಗಿ ಆಯ್ಕೆಯಾಗುವ ಅಮೆರಿಕಾ ಅಧ್ಯಕ್ಷರೊಂದಿಗೆ ಉತ್ತಮ ರಾಜಕೀಯ ಬಾಂಧವ್ಯವನ್ನು ಸ್ಥಾಪಿಸಬೇಕಾದ ಮಹತ್ವದ ಸವಾಲೂ ಸಹ ಸುಗಾ ಮುಂದಿದೆ. ಇನ್ನು ನೆರೆ ರಾಷ್ಟ್ರ ಚೀನಾದೊಂದಿಗೆ ಇರುವ ಸಾಗರ ಗಡಿ ಸಮಸ್ಯೆಗಳನ್ನು ಸೂಕ್ಷ್ಮ ರೀತಿಯಲ್ಲಿ ನಿಭಾಯಿಸಬೇಕಾದ ಸವಾಲೂ ಇವರ ಮುಂದಿದೆ.

ಇನ್ನು ರಾಜಕೀಯ ಪಂಡಿತರು ಹೇಳುವಂತೆ ಸುಗಾ ಅವರು ತತ್ವಾಧಾರಿತ ರಾಜಕಾರಣಕ್ಕಿಂತ ವಿಷಯಗಳನ್ನು ಸೂಕ್ಷ್ಮವಾಗಿ ನಿಭಾಯಿಸುವ ವಿಚಾರದಲ್ಲಿ ಎತ್ತಿದ ಕೈ. ಹಾಗಾಗಿ ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ಸವಾಲಾಗಿ ತೆಗೆದುಕೊಂಡು ದೇಶದ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ನಿಭಾಯಿಸುವ ತಾಕತ್ತು ಇವರಿಗಿದೆ ಎಂಬುದು ಸದ್ಯಕ್ಕೆ ಇವರ ಮೇಲೆ ಇರುವ ಭರವಸೆ.

ಟಾಪ್ ನ್ಯೂಸ್

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

America: ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Viral: ಜನಪ್ರಿಯ ಟಿಕ್‌ ಟಾಕ್‌ ತಾರೆಯ ಖಾಸಗಿ ವಿಡಿಯೋ ಲೀಕ್..‌ ಭಾರೀ ವೈರಲ್   

Viral: ಜನಪ್ರಿಯ ಟಿಕ್‌ ಟಾಕ್‌ ತಾರೆಯ ಖಾಸಗಿ ವಿಡಿಯೋ ಲೀಕ್..‌ ಭಾರೀ ವೈರಲ್  

ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್‌ ನಿಧನ

ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್‌ ನಿಧನ

1-aaa

US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.