“ನಿಮ್ಮ ತಂತ್ರಜ್ಞಾನ, ನಮ್ಮ ಪ್ರತಿಭೆ ಸೇರಿದ್ರೆ ಜಗತ್ತನ್ನೇ ಬದಲಾಯಿಸಬಹುದು; ಮೋದಿ
ನ್ಯೂಯಾರ್ಕ್ ನಲ್ಲಿ 45 ಸಿಇಒಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ
Team Udayavani, Sep 25, 2019, 7:19 PM IST
ನ್ಯೂಯಾರ್ಕ್: ನಿಮ್ಮ ಅಪೇಕ್ಷೆ ಮತ್ತು ನಮ್ಮ ಕನಸು ಎರಡು ಒಂದಕ್ಕೊಂದು ಹೊಂದಾಣಿಕೆಯಾಗಿದೆ. ಹೀಗಾಗಿ ನಿಮ್ಮ ತಂತ್ರಜ್ಞಾನ ಮತ್ತು ನಮ್ಮ ಪ್ರತಿಭೆ ಇಡೀ ವಿಶ್ವವನ್ನೇ ಬದಲಾಯಿಸಬಲ್ಲದು ಎಂದು ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್ ನಲ್ಲಿ ಬ್ಲೂಮ್ ಬರ್ಗ್ ಗ್ಲೋಬಲ್ ಬ್ಯುಸಿನೆಸ್ ಫೋರಂ(ಜಿಬಿಎಫ್) ನಲ್ಲಿ ಪ್ರತಿಷ್ಠಿತ ಕಂಪನಿಗಳ ಸಿಇಒಗಳನ್ನು ಉದ್ದೇಶಿಸಿ ಮಾತನಾಡಿದರು.
ಭಾರತ ಅಭಿವೃದ್ಧಿಯತ್ತ ಮುಖ್ಯ ಗುರಿಯನ್ನು ಹೊಂದಿದೆ. ಕಾರ್ಪೋರೇಟ್ ತೆರಿಗೆಯನ್ನು ಕಡಿತಗೊಳಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳುವ ಮೂಲಕ ಹೂಡಿಕೆದಾರರಿಗೆ ಧನಾತ್ಮಕ ಸಂದೇಶವನ್ನು ರವಾನಿಸಿದ್ದೇವೆ ಎಂದು ಜಾಗತಿಕವಾಗಿ ಆಗಮಿಸಿದ್ದ ಸುಮಾರು 45 ಪ್ರತಿಷ್ಠಿತ ಕಂಪನಿಗಳ ಸಿಇಒಗಳನ್ನು ಉದ್ದೇಶಿಸಿ ಹೇಳಿದರು.
ನಾವು ನಮ್ಮ ನಗರಗಳನ್ನು ತ್ವರಿತವಾಗಿ ಆಧುನೀಕರಣಗೊಳಿಸುತ್ತಿದ್ದೇವೆ. ನಾವು ಮೂಲಭೂತ ಸೌಕರ್ಯ ಮತ್ತು ರಿಯಲ್ಟಿ ಸೆಕ್ಟರ್ ನಲ್ಲಿ ಹೂಡಿಕೆ ಮಾಡುತ್ತಿರುವುದಾಗಿ ತಿಳಿಸಿದರು. 2014ರಲ್ಲಿ ನಾವು ಅಧಿಕಾರಕ್ಕೆ ಬಂದಾಗ 2 ಟ್ರಿಲಿಯನ್ ಡಾಲರ್ ನಷ್ಟು ಆರ್ಥಿಕ ದೇಶವನ್ನಾಗಿ ಮಾಡುವ ಉದ್ದೇಶ ಹೊಂದಿದ್ದೇವು. ಅದೇ ರೀತಿ 2024ರೊಳಗೆ 5 ಟ್ರಿಲಿಯನ್ ಡಾಲರ್ ಆರ್ಥಿಕ ದೇಶವನ್ನಾಗಿ ಮಾಡುವ ಗುರಿ ಹೊಂದಿರುವುದಾಗಿ ಮೋದಿ ತಿಳಿಸಿದರು.
ಮೋದಿಯ ನಾಲ್ಕು “ಡಿ” ಅಂಶ:
ಸಿಇಒಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ನಗರಗಳು ನಾಲ್ಕು ಡಿ ಅಂಶಗಳನ್ನು ಒಳಗೊಂಡಿದೆ ಎಂದರು. ಅದು ಡೆಮೋಕ್ರಸಿ(ಪ್ರಜಾಪ್ರಭುತ್ವ), ಡೆಮೋಗ್ರಫಿ(ಜನಸಂಖ್ಯೆ), ಡಿಮ್ಯಾಂಡ್(ಬೇಡಿಕೆ) ಮತ್ತು ಡಿಸೀಸ್ ವ್ ನೆಸ್(ನಿರ್ಣಾಯಕ) ಇವುಗಳ ಆಧಾರದ ಮೇಲೆ ಹೂಡಿಕೆ ಮಾಡುವ ಮೂಲಕ ಮೇಕಿಂಗ್ ಇಂಡಿಯಾದ ಗುರಿ ತಲುಪಬೇಕಾಗಿದೆ ಎಂದರು.
ಭಾರತ ಮೂರನೇ ಅತೀ ದೊಡ್ಡ ಏವಿಯೇಷನ್ ಮಾರ್ಕೆಟ್ ಹೊಂದಿದೆ. ನಿಮಗೆ ಹೂಡಿಕೆ ಮಾಡಲು, ಸ್ಟಾರ್ಟ್ ಅಪ್ ಕಂಪನಿ ತೆರೆಯಬೇಕೆಂಬ ಇಚ್ಛೆ ಇದ್ದರೆ ಭಾರತಕ್ಕೆ ಬನ್ನಿ ಎಂದು ಮೋದಿ ಆಹ್ವಾನ ನೀಡಿದರು.
ನಮ್ಮ ರಕ್ಷಣಾ ವಲಯದ ಉಪಕರಣ ತಯಾರಿಕೆಗೂ ಮುಕ್ತ ಅವಕಾಶ ಕಲ್ಪಿಸಿದ್ದೇವೆ. ಒಂದು ವೇಳೆ ಮೇಕ್ ಇನ್ ಇಂಡಿಯಾ ಅದು ಭಾರತದಲ್ಲಿಯೇ ಇತರ ದೇಶಕ್ಕೆ ರಫ್ತು ಮಾಡುವ ಉಪಕರಣ, ಶಸ್ತ್ರಾಸ್ತ್ರ ತಯಾರಿಸುವುದಾದರೆ ಭಾರತಕ್ಕೆ ಬನ್ನಿ ಎಂದು ಈ ಸಂದರ್ಭದಲ್ಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.