ವಾಟ್ಸ್‌ಆ್ಯಪ್‌ನಲ್ಲೂ “ಯೂಟ್ಯೂಬ್’
Team Udayavani, Jul 18, 2017, 10:23 AM IST
ವಾಷಿಂಗ್ಟನ್: ಇದುವರೆಗೆ ವಾಟ್ಸ್‌ಆ್ಯಪ್‌ನಲ್ಲಿ ಯೂಟ್ಯೂಬ್ ವಿಡಿಯೋ ನೋಡಲು ಸಾಧ್ಯವಿರಲಿಲ್ಲ. ಲಿಂಕ್ ಅನ್ನು ಶೇರ್ ಮಾಡಿಕೊಳ್ಳಬಹುದಾಗಿದ್ದು, ಅದರ ಮೇಲೆ ಕ್ಲಿಕ್ ಮಾಡಿದರೆ, ಯೂಟ್ಯೂಬ್ ಅಪ್ಲಿಕೇಶನ್ ತೆರೆದುಕೊಳ್ಳುತ್ತಿತ್ತು. ಆದರೆ ಇನ್ನೀಗ ಲಿಂಕ್ ತೆರೆಯುವ ಕಿರಿಕ್ ಇಲ್ಲ. ನೇರವಾಗಿ ವಾಟ್ಸ್ ಆ್ಯಪ್‌ನಲ್ಲೇ ಯೂಟ್ಯೂಬ್ ಪ್ಲೇ ಆಗುವಂತಹ ತಾಂತ್ರಿಕ ಬದಲಾವಣೆಗಳನ್ನು ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್ ಮಾಡುತ್ತಿದೆ. ಇದರ ಪ್ರಾಯೋಗಿಕ ಪರೀಕ್ಷೆಗಳು ನಡೆದಿವೆ ಎಂದು ವಾಬೆಟಾಇನ್ಫೋ ಹೆಸರಿನ ವೆಬ್‌ಸೈಟ್ ವರದಿ ಮಾಡಿದೆ.
ವಾಬೆಟಾ ಇನ್ಫೋ ಪ್ರಕಾರ, ವಾಟ್ಸ್‌ಆ್ಯಪ್‌ನಲ್ಲಿ ಯೂಟ್ಯೂಬ್ ವಿಡಿಯೋ ಸ್ಟ್ರೀಮಿಂಗ್‌ನಲ್ಲಿನ ಚಿತ್ರಗಳು ಕಾಣುವಂತೆ ಇದ್ದು, ಬೇಕಾ ದಂತೆ ಆಯ್ಕೆ ಮಾಡಿ ಪ್ಲೇ ಮಾಡಬಹುದಾಗಿದೆ. ಜೊತೆಗೆ ಫುಲ್‌ಸ್ಕ್ರೀನ್ ಮೋಡ್‌ಗೆ ಹೋಗ ಬೇಕೆಂದೇನಿಲ್ಲ. ಇದರೊಂದಿಗೆ ವಿಡಿಯೋ ವನ್ನು ಬದಿಗೆ ಹೈಡ್ ಮಾಡಿ ಚಾಟ್ ಕೂಡ ಮಾಡುವಂತೆ, ಬೇರೆ ಚಾಟ್‌ಗೆ ಹೋದರೂ, ವಿಡಿಯೋ ನೋಡಲು ಅವಕಾಶವಾಗುವಂತೆ ಸಾಫ್ಟ್ವೇರ್ ರೂಪಿಸಲಾಗುತ್ತಿದೆ ಎನ್ನಲಾಗಿದೆ. ಸದ್ಯ ಈ ರೀತಿಯ ಅತ್ಯಾಧುನಿಕ ವಾಟ್ಸ್‌ಆ್ಯಪ್ ಫೀಚರ್ ಐಫೋನ್ 6 ಮತ್ತು ಅದಕ್ಕೂ ಮೇಲ್ಮಟ್ಟದ ತಾಂತ್ರಿಕತೆ ಇರುವ, ಆ್ಯಪಲ್ ಆಪರೇಟಿಂಗ್ ಸಿಸ್ಟಂ ಇರುವ ಫೋನ್‌ಗಳಿಗೆ ಮಾತ್ರ ಲಭ್ಯವಿದೆ ಎನ್ನಲಾಗಿದೆ.
ಆದರೆ ಆ್ಯಂಡ್ರಾಯಿಡ್ ಫೋನ್‌ಗಳಿಗೂ ಈ ಸೌಲಭ್ಯ ಜಾರಿ ಬಗ್ಗೆ ಮಾಹಿತಿ ನೀಡಲಾಗಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.